ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಮರ್ಯಾದೆ ಪ್ರಶ್ನೆ (Maryade Prashne) ಎದುರಾಗಿದೆ. ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇದೇ ಟ್ರೆಂಡ್ ಆಗುತ್ತಿದೆ. ತಮ್ಮ ಪಾಲಿನ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು ಸೆಲೆಬ್ರಿಟಿಗಳು ಪೋಸ್ಟ್ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್ ಟ್ರೇನರ್ ಶ್ರಿನಿವಾಸ್ ಗೌಡ ಮುಂತಾದವರು ಇದೇ ವಿಷಯವಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ವಲಯದಲ್ಲಿ ಕೌತುಕ ಮೂಡಿಸಲಾಗಿದೆ. ಸ್ಯಾಂಡಲ್ವುಡ್ನ (Sandalwood) ಇವರಿಗೆಲ್ಲ ಅಂದೆಂಥ ಮರ್ಯಾದೆ ಪ್ರಶ್ನೆ ಎದುರಾಗಿರಬಹುದು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.
‘ಕರಟಕ ದಮನಕ’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ನಟಿಸಿದ್ದಾರೆ. ಆ ಚಿತ್ರದಲ್ಲಿ ಪ್ರಭುದೇವ ಜೊತೆ ಅವರು ಡ್ಯಾನ್ಸ್ ಮಾಡಿದ ‘ಹಿತ್ತಲಕ ಕರಿಬ್ಯಾಡ ಮ್ಯಾವ..’ ಸಾಂಗ್ ಸೂಪರ್ ಹಿಟ್ ಆಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ನಿಶ್ವಿಕಾ ನಾಯ್ಡು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಹಿತ್ತಲಕ ಕರಿಬೇಡ ಮಾವಾ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ಸಿಂಪಲ್ ಸುನಿ ನಿರ್ದೇಶನ ಮಾಡಿರುವ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮಾರ್ಚ್ 22ರಂದು ತೆರೆಕಾಣಲಿದೆ. ಅದರ ತಯಾರಿಯಲ್ಲಿರುವ ಸಿಂಪಲ್ ಸುನಿ ಅವರಿಗೂ ಮರ್ಯಾದೆ ಪ್ರಶ್ನೆ ಎದುರಾಗಿದೆ. ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು. ಮರ್ಯಾದೆ ಪ್ರಶ್ನೆ’ ಎಂದು ಸುನಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ? ಉತ್ತರಿಸಿದ ನಿರ್ದೇಶಕಿ ರಿಷಿಕಾ ಶರ್ಮಾ
‘ಮನಸ್ಸಿಗೆ ಅನ್ಸಿದ್ದು ಹೇಳಿಬಿಡಬೇಕು. ಮರ್ಯಾದೆ ಪ್ರಶ್ನೆ’ ಎಂದು ನಿರಂಜನ್ ದೇಶಪಾಂಡೆ ಬರೆದುಕೊಂಡಿದ್ದಾರೆ. ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ನಟಿ ಸಂಯುಕ್ತಾ ಹೊರನಾಡು ಬರೆದುಕೊಂಡಿದ್ದಾರೆ. ‘ಜಿಮ್ಗೆ ಸೇರ್ತೀರ. ಕಾಸು ಕೊಡ್ತೀರ. ಆದ್ರೆ ಜಿಮ್ಗೆ ಬರೋದೇ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಸೆಲೆಬ್ರಿಟಿ ಟ್ರೇನರ್ ಶ್ರೀನಿವಾಸ್ ಗೌಡ ಪೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಈ ಪೋಸ್ಟ್ಗೆ ಕಮೆಂಟ್ ಮಾಡಿದ ನೆಟ್ಟಿಗರು ‘ಇದೇನು ಹೊಸ ಟ್ರೆಂಡ್’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್
‘ಮರ್ಯಾದೆ ಪ್ರಶ್ನೆ’ ಬಗ್ಗೆ ಕೆಲವು ಅನುಮಾನಗಳ ಕೂಡ ಮೂಡಿವೆ. ಇದು ಹೊಸ ಸಿನಿಮಾದ ಟೈಟಲ್ ಆಗಿರಬಹುದೇ? ಆ ಶೀರ್ಷಿಕೆ ಅನೌನ್ಸ್ ಮಾಡುವುದಕ್ಕೂ ಮುನ್ನವೇ ಹೀಗೆ ಟ್ರೆಂಡ್ ಮಾಡಲಾಗುತ್ತಿದೆಯೇ? ಪ್ರಚಾರಕ್ಕಾಗಿ ಹೊಸ ಪ್ಲ್ಯಾನ್ ಮಾಡಲಾಗಿದೆಯೇ? ಒಂದು ವೇಳೆ ಅದು ಸಿನಿಮಾದ ಟೈಟಲ್ ಆಗಿದ್ದರೆ ಆ ಚಿತ್ರಕ್ಕೆ ಹೀರೋ ಯಾರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಶೀಘ್ರದಲ್ಲೇ ಅದಕ್ಕೆ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.