Meghana Raj: ಮೇಘನಾ ರಾಜ್​ ಜನ್ಮದಿನಕ್ಕೆ ವೈರಲ್​ ಆಯ್ತು ಜ್ಯೂನಿಯರ್​ ಚಿರು ವಿಡಿಯೋ

Meghana Raj Birthday | ಮೇಘನಾ ರಾಜ್​ ಅವರು ಚಿರಂಜೀವಿ ಸರ್ಜಾ ಫೋಟೋವನ್ನು ಮಗನಿಗೆ ತೋರಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಜ್ಯೂ. ಚಿರು ಕ್ಯೂಟ್​ ಎಕ್ಸ್​ಪ್ರೆಷನ್​ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Meghana Raj: ಮೇಘನಾ ರಾಜ್​ ಜನ್ಮದಿನಕ್ಕೆ ವೈರಲ್​ ಆಯ್ತು ಜ್ಯೂನಿಯರ್​ ಚಿರು ವಿಡಿಯೋ
ಚಿರಂಜೀವಿ ಸರ್ಜಾ - ಮೇಘನಾ ರಾಜ್​ - ರಾಯನ್ ರಾಜ್ ಸರ್ಜಾ
Edited By:

Updated on: May 03, 2021 | 9:25 AM

ಸ್ಯಾಂಡಲ್​ವುಡ್​ನ ಖ್ಯಾತ ನಟಿ ಮೇಘನಾ ರಾಜ್​ ಸರ್ಜಾ ಅವರಿಗೆ ಇಂದು (ಮೇ 3) ಜನ್ಮದಿನ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಅಂದಹಾಗೆ, ಮೇಘನಾ ಪಾಲಿಗೆ ಪತಿ ಚಿರಂಜೀವಿ ಸರ್ಜಾ ಇಲ್ಲದ ಮೊದಲ ವರ್ಷದ ಬರ್ತ್​ಡೇ ಇದು. ಈ ಸಂದರ್ಭದಲ್ಲಿ ಮೇಘನಾ ಹಂಚಿಕೊಂಡಿರುವ ಒಂದು ವಿಡಿಯೋ ವೈರಲ್​ ಆಗಿದೆ. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಳೆದ ವರ್ಷ ಪತಿಯ ಅಗಲಿಕೆ ಬಳಿಕ ಮೇಘನಾ ಬದುಕಿನಲ್ಲಿ ಹೊಸ ಭರವಸೆಯ ರೂಪದಲ್ಲಿ ಬಂದಿದ್ದು ಅವರ ಪತ್ರ. ಮುದ್ದಿನ ಕಂದನನ್ನು ಜ್ಯೂನಿಯರ್ ಚಿರು ಎಂದೇ ಅಭಿಮಾನಿಗಳಿಗೆ ಮೇಘನಾ ಪರಿಚಯಿಸಿದ್ದಾರೆ. ಅವರ ಜನ್ಮದಿನಕ್ಕೂ ಒಂದಿನ ಮುಂಚೆ, ಅಂದರೆ ಮೇ 2ರಂದು ಮೇಘನಾ-ಚಿರು ವಿವಾಹ ವಾರ್ಷಿಕೋತ್ಸವ. ಈ ಸಲುವಾಗಿ ಮೇಘನಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಗಮನ ಸೆಳೆಯುತ್ತಿದೆ.

ಮೇಘನಾ ರಾಜ್​ ಅವರು ಚಿರಂಜೀವಿ ಸರ್ಜಾ ಫೋಟೋವನ್ನು ಮಗನಿಗೆ ತೋರಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ‘ಅಪ್ಪನ್ನ ನೋಡಲ್ಲಿ..’ ಎಂದು ಮೇಘನಾ ಹೇಳಿದಾಗ ಚಿರು ಭಾವಚಿತ್ರವನ್ನು ಜ್ಯೂ. ಚಿರು ಸ್ಪರ್ಶಿಸುತ್ತಾನೆ. ಆತನ ಕ್ಯೂಟ್​ ಎಕ್ಸ್​ಪ್ರೆಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರರಂಗದ ಸ್ನೇಹಿತರಾದ ವಸಿಷ್ಠ ಸಿಂಹ, ಪ್ರಜ್ವಲ್​ ದೇವರಾಜ್​, ಪನ್ನಗ ಭರಣ, ಕೆ.ಎಂ. ಚೈತನ್ಯ, ಅದ್ವಿತಿ ಶೆಟ್ಟಿ, ವಾಸುಕಿ ವೈಭವ್ ಮುಂತಾದವರು ಪ್ರೀತಿಯಿಂದ ಈ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ.

2009ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮೇಘನಾ ರಾಜ್​ ಅವರು ಕನ್ನಡ ಮಾತ್ರವಲ್ಲದೆ ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 2018ರಲ್ಲಿ ಮದುವೆ ಆದ ಬಳಿಕ ಅವರು ಸಂಸಾರದ ಕಡೆಗೆ ಹೆಚ್ಚಿನ ಗಮನ ನೀಡಿದರು. ಅದರ ನಡುವೆಯೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಸದ್ಯ ಪುತ್ರನ ಪಾಲನೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಆದಷ್ಟು ಬೇಗ ಮೇಘನಾ ರಾಜ್​ ಬಣ್ಣದ ಲೋಕಕ್ಕೆ ಕಮ್​ಬ್ಯಾಕ್​ ಮಾಡಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇದನ್ನೂ ಓದಿ:

Happy Birthday Meghana Raj: ಜನ್ಮದಿನಕ್ಕೂ ಒಂದು ದಿನ ಮೊದಲು ಮದುವೆ ಆಗಿದ್ದ ಮೇಘನಾ ರಾಜ್

Meghana Raj: ಚಿರು ಐ ಲವ್​ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್​

Published On - 8:17 am, Mon, 3 May 21