ಮ್ಯೂಸಿಕ್​ ಡೈರೆಕ್ಟರ್​ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್​ ಚಿತ್ರಕ್ಕೆ ಇವನದ್ದೇ ಹಿನ್ನೆಲೆ ಸಂಗೀತ?

Meghana Raj | Raayan Raj Sarja: ಚಿರಂಜೀವಿ ಸರ್ಜಾ ಪುತ್ರ ರಾಯನ್​ ರಾಜ್​ ಸರ್ಜಾ ಈಗ ಸಂಗೀತದ ಬಗ್ಗೆ ಆಸಕ್ತಿ ತೋರಿಸುವಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮೇಘನಾ ರಾಜ್​ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಮ್ಯೂಸಿಕ್​ ಡೈರೆಕ್ಟರ್​ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್​ ಚಿತ್ರಕ್ಕೆ ಇವನದ್ದೇ ಹಿನ್ನೆಲೆ ಸಂಗೀತ?
ಮೇಘನಾ ರಾಜ್, ರಾಯನ್ ರಾಜ್ ಸರ್ಜಾ

Updated on: Mar 21, 2023 | 7:57 PM

ನಟಿ ಮೇಘನಾ ರಾಜ್​ (Meghana Raj) ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ತಮ್ಮ ದಿನಚರಿ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾರೆ. ಸಿನಿಮಾಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಪುತ್ರ ರಾಯನ್​ ರಾಜ್​ ಸರ್ಜಾನ ವಿಡಿಯೋ ಮತ್ತು ಫೋಟೋಗಳನ್ನು ಕೂಡ ಶೇರ್​ ಮಾಡಿಕೊಳ್ಳುತ್ತಾರೆ. ಈಗ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ರಾಯನ್​ ರಾಜ್​ ಸರ್ಜಾ (Raayan Raj Sarja) ಪಿಯಾನೋ ನುಡಿಸಿದ್ದಾನೆ. ಅದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ನಿರ್ದೇಶಕ/ನಿರ್ಮಾಪಕ ಪನ್ನಗ ಭರಣ ಅವರು, ‘ತತ್ಸಮ ತದ್ಭವ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದೆ’ ಎಂದು ಕಮೆಂಟ್​ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾ ರಾಜ್​ ಅವರು ಮಂಕಾಗಿದ್ದರು. ಆದರೆ ಪುತ್ರ ರಾಯನ್​ ಜನಿಸಿದ ನಂತರ ಅವರ ಮುಖದಲ್ಲಿ ನಗು ಮರಳಿಬಂತು. ಮಗನ ಆರೈಕೆಯಲ್ಲಿ ಮೇಘನಾ ರಾಜ್​ ತೊಡಗಿಕೊಂಡಿದ್ದಾರೆ. ಆತನ ಜೊತೆ ಕಾಲ ಕಳೆಯುತ್ತ ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಮಗನ ಎಲ್ಲ ಆಗು-ಹೋಗುಗಳ ಬಗ್ಗೆ ಅವರು ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ
Meghana Raj: ಮೇಘನಾ ರಾಜ್​ ಕೈ ಮೇಲೆ ಶಾಶ್ವತವಾಗಿ ಅಚ್ಚಾಯಿತು ಚಿರು, ರಾಯನ್​ ಹೆಸರು; ಹೇಗಿದೆ ನೋಡಿ ಟ್ಯಾಟೂ
ಎರಡನೇ ಮದುವೆ ಆಗಬೇಕೇ ಎಂಬ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ ಎಂದ ಮೇಘನಾ ರಾಜ್
Meghana Raj: ಅಮ್ಮ ಅಂತ ಹೇಳಿಕೊಟ್ರೂ ಅಪ್ಪ ಎನ್ನುತ್ತಾನೆ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ಮೇಘನಾ ರಾಜ್​ ಮಗನ ಕ್ಯೂಟ್​ ವಿಡಿಯೋ
‘ಡಾನ್ಸಿಂಗ್​ ಚಾಂಪಿಯನ್​’ ಶೋ​ ನಡುವೆ ಮೇಘನಾ ರಾಜ್​ ಫೋಟೋಶೂಟ್​; ಇಲ್ಲಿವೆ ಚೆಂದದ ಫೋಟೋಗಳು

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಹೊಸ ಚಿತ್ರಕ್ಕೆ ‘ತತ್ಸಮ ತದ್ಭವ’ ಶೀರ್ಷಿಕೆ; ಫಸ್ಟ್​ ಲುಕ್​ ಹಂಚಿಕೊಂಡ ನಟಿ

ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಅವರದ್ದು ಕಲಾವಿದರ ಫ್ಯಾಮಿಲಿ. ಅವರ ಕುಟುಂಬದ ಹಲವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ರಾಯನ್​ ರಾಜ್​ ಸರ್ಜಾ ಕೂಡ ಮುಂದೊಂದು ದಿನ ಬಣ್ಣದ ಲೋಕಕ್ಕೆ ಕಾಲಿಡುವುದು ಖಚಿತ. ಆತನಿಗೆ ಮ್ಯೂಸಿಕ್ ಬಗ್ಗೆ ಹೆಚ್ಚು ಆಸಕ್ತಿ ಮೂಡಿದರೂ ಅಚ್ಚರಿ ಇಲ್ಲ. ‘ಭವಿಷ್ಯದ ಸಂಗೀತ ನಿರ್ದೇಶಕ’ ಎಂದು ಕೆಲವು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಮೇಘನಾ ರಾಜ್​ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅದರಲ್ಲಿ ಕೂಡ ಮಗನ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳ ಲಕ್ಷಾಂತರ ವೀವ್ಸ್​ ಪಡೆದುಕೊಂಡಿವೆ. ಒಟ್ಟಿನಲ್ಲಿ ಮೇಘನಾ ರಾಜ್​ ಅವರು ಸಖತ್ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಹಿರಿದಾಗುತ್ತಿದೆ ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಟೀಂ; ಮಹತಿ ವೈಷ್ಣವಿ ಭಟ್, ಅರವಿಂದ್ ಅಯ್ಯರ್ ಸೇರ್ಪಡೆ

‘ತತ್ಸಮ ತದ್ಭವ’ ಚಿತ್ರದ ಮೇಲೆ ನಿರೀಕ್ಷೆ:

ಮೇಘನಾ ರಾಜ್​ ಅವರು ಮೊದಲಿನಂತೆಯೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ನಟಿಸುತ್ತಿರುವ ‘ತತ್ಸಮ ತದ್ಭವ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಪೋಸ್ಟರ್​ ಗಮನ ಸೆಳೆದಿದೆ. ಪನ್ನಗ ಭರಣ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ವಿಶಾಲ್​ ಆತ್ರೇಯಾ ಅವರು ನಿರ್ದೇಶನ ಮಾಡಲಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರ ಕಲಾವಿದರು ‘ತತ್ಸಮ ತದ್ಭವ’ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:57 pm, Tue, 21 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us