ನಟ-ನಟಿಯರು ಸೌಂದರ್ಯವೃದ್ಧಿಗೆ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಂದು ಯಶಸ್ಸು ಕೊಟ್ಟರೆ ಇನ್ನೂ ಕೆಲವರು ಅಡ್ಡಪರಿಣಾಮ ಬೀರುತ್ತದೆ. ಇದರಿಂದ ಇರುವ ಸೌಂದರ್ಯವೂ ಹಾಳಾಗುತ್ತದೆ. ಈಗ ಮೆಹ್ರೀನ್ ಫಿರ್ಜಾದ (Mehreen Pirzada) ಅವರು ಒಂದು ರಿಸ್ಕಿ ಥೆರಪಿ ಮಾಡಿಸಿದ್ದಾರೆ. ಮುಖದ ತುಂಬೆಲ್ಲ ಅವರು ಗುಂಡುಸೂಜಿ ಚುಚ್ಚಿಸಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ! ಅವರಿಗೆ ಎಷ್ಟು ನೋವಾಗಿರಬಹುದು ಎಂಬುದನ್ನು ನೆನೆದು ಅಭಿಮಾನಿಗಳು (Fans) ಬೇಸರ ಮಾಡಿಕೊಂಡಿದ್ದಾರೆ.
ಅಕ್ಯು ಸ್ಕಿನ್ ಲಿಫ್ಟ್ ಹೆಸರಿನ ಟ್ರೀಟ್ಮೆಂಟ್ ಮಾಡಿಸಿಕೊಂಡಿದ್ದಾರೆ ಮೆಹ್ರೀನ್. ಇದಕ್ಕಾಗಿ ಅವರು ವಿದೇಶದಲ್ಲಿ ಖ್ಯಾತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದಾರೆ. ಅಕ್ಯು ಸ್ಕಿನ್ ಲಿಫ್ಟ್ ಥೆರಪಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹ್ರೀನ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಕೆನ್ನೆ, ಹಣೆ ಭಾಗಕ್ಕೆಲ್ಲ ಸೂಜಿಗಳನ್ನು ಚುಚ್ಚಲಾಗಿದೆ. ಇದನ್ನು ನೋಡಿ ಫ್ಯಾನ್ಸ್ಗೆ ನೋವಾಗಿದೆ.
‘ಅಷ್ಟೊಂದು ಸೂಜಿ ಚುಚ್ಚಿಸಿಕೊಂಡಿದ್ದೀರಿ. ನಿಮಗೆ ನೋವಾಗುವುದಿಲ್ಲವೇ? ಇಂತಹ ರಿಸ್ಕ್ ಏಕೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಒಂದನ್ನು ಮಾಡಲು ಹೋಗಿ ಮತ್ತೊಂದು ಆದೀತು’ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯಲ್ಲಿ ಕಮೆಂಟ್ಗಳು ಬರುತ್ತಿವೆ.
ಇದನ್ನೂ ಓದಿ: ‘ನೀ ಸಿಗೋವರೆಗೂ’ ಚಿತ್ರದ ಲವರ್ ಬಾಯ್ ಶಿವಣ್ಣ ಲುಕ್ ರಿಲೀಸ್; ಹ್ಯಾಟ್ರಿಕ್ ಹೀರೋಗೆ ವಯಸ್ಸೇ ಆಗೋಲ್ಲ ಎಂದ ಅಭಿಮಾನಿಗಳು
2016ರಲ್ಲಿ ತೆರೆಗೆ ಬಂದ ‘ಕೃಷ್ಣ ಗಾಡಿ ವೀರ ಪ್ರೇಮ ಗಾಥ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು ನಟಿ ಮೆಹ್ರೀನ್. ತೆಲುಗಿನ ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ಬಳಿಕ ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದರು. ಶಿವರಾಜ್ಕುಮಾರ್ ನಟನೆಯ ‘ನೀ ಸಿಗೋವರೆಗೂ’ ಚಿತ್ರದಲ್ಲೂ ಮೆಹ್ರೀನ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಸಿನಿಮಾ. ಶಿವರಾಜ್ಕುಮಾರ್ ಅವರ 124ನೇ ಸಿನಿಮಾ ಇದಾಗಿದೆ. ‘ಭಜರಂಗಿ 2′ ಚಿತ್ರದಲ್ಲಿ ‘ನೀ ಸಿಗೋವರೆಗೂ..’ ಹೆಸರಿನ ಹಾಡಿದೆ. ಈಗ ಅದನ್ನೇ ಈ ಸಿನಿಮಾಗೆ ಶೀರ್ಷಿಕೆ ಮಾಡಿರುವುದು ವಿಶೇಷ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ಗೆ ಜತೆಯಾಗಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತಕ್ಕೆ ಸುದೀಪ್ ಆಗಮಿಸಿ ಕ್ಲ್ಯಾಪ್ ಮಾಡಿದ್ದರು.