Monk The Young: ಭರವಸೆ ಹುಟ್ಟುಹಾಕಿದ ‘ಮಾಂಕ್ ದಿ ಯಂಗ್’ ಸಿನಿಮಾ ಟೀಸರ್; ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ
Monk The Young Teaser: ‘ಮಾಂಕ್ ದಿ ಯಂಗ್’ ಸಿನಿಮಾಗೆ ಶೂಟಿಂಗ್ ಮುಕ್ತಾಯ ಆಗಿದೆ. ಈಗ ಟೀಸರ್ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆಯಲಾಗಿದೆ.
ಸ್ಟಾರ್ ನಟರ ಸಿನಿಮಾಗಳು ಬಹುಭಾಷೆಯಲ್ಲಿ ಬಿಡುಗಡೆ ಆಗುವುದು ಸಹಜ. ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲು ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪನಿಗಳು ಧೈರ್ಯ ತೋರಿಸುವುದು ಸಾಮಾನ್ಯ ಸಂಗತಿ ಎಂಬಂತೆ ಆಗಿದೆ. ಅಂಥ ಪ್ರಯತ್ನಗಳ ನಡುವೆ ಹೊಸಬರ ಒಂದು ಟೀಮ್ ಕೂಡ ದೇಶವ್ಯಾಪಿ ಸದ್ದು ಮಾಡಲು ಸಜ್ಜಾಗಿದೆ. ಈ ಸಿನಿಮಾ ಹೆಸರು ‘ಮಾಂಕ್ ದಿ ಯಂಗ್’ (Monk The Young). ಈ ರೀತಿ ಡಿಫರೆಂಟ್ ಆದ ಶೀರ್ಷಿಕೆ ಇಟ್ಟುಕೊಂಡು ಜನರ ಎದುರು ಬರುತ್ತಿರುವ ಸಿನಿಮಾ ತಂಡದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ಈ ಸಿನಿಮಾ ಕೂಡ ಪ್ಯಾನ್ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ‘ಮಾಂಕ್ ದಿ ಯಂಗ್’ ಸಿನಿಮಾದ ಟೀಸರ್ (Monk The Young Teaser) ಬಿಡುಗಡೆ ಮಾಡಲಾಯಿತು. ಭರವಸೆ ಮೂಡಿಸುವ ರೀತಿಯಲ್ಲಿ ಮೂಡಿಬಂದಿರುವ ಈ ಟೀಸರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಹೊಸಬರ ಹೊಸ ಪ್ರಯತ್ನಗಳಿಗೆ ಚಂದನವನದಲ್ಲಿ ಬೆಂಬಲ ಸಿಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಅವರು ‘ಮಾಂಕ್ ದಿ ಯಂಗ್’ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಟ ‘ಒಳ್ಳೆ ಹುಡುಗ’ ಪ್ರಥಮ್ ಅವರು ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕನ್ನಡ ಮಾತ್ರವಲ್ಲದೇ ಒಟ್ಟು 6 ಭಾಷೆಗಳಲ್ಲಿ ‘ಮಾಂಕ್ ದಿ ಯಂಗ್’ ಬಿಡುಗಡೆ ಆಗಲಿದೆ ಎಂಬುದು ವಿಶೇಷ.
Kiccha 46: ‘ಕಿಚ್ಚ 46’ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ ಚಿತ್ರತಂಡ; ಜುಲೈ 2ರಂದು ಟೀಸರ್ ಬಿಡುಗಡೆ
ಈ ಸಿನಿಮಾಗೆ ಶೂಟಿಂಗ್ ಮುಕ್ತಾಯ ಆಗಿದೆ. ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿ ನಡೆಯುತ್ತಿವೆ. ಮುಂಬರುವ ಮೂರು ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ‘ಮಾಂಕ್ ದಿ ಯಂಗ್’ ತಂಡ ಕಾರ್ಯನಿರತವಾಗಿದೆ. ಈ ಚಿತ್ರಕ್ಕೆ ಮಾಸ್ಚಿತ್ ಸೂರ್ಯ ನಿರ್ದೇಶನ ಮಾಡಿದ್ದಾರೆ.
‘ನಿರ್ದೇಶಕ ಮಾಸ್ಚಿತ್ ಸೂರ್ಯ ಅವರು ಕಥೆ ಹೇಳುವುದಕ್ಕೆ ನನ್ನನ್ನು ಕರೆದಿದ್ದರು. ನಟನೆಗಾಗಿ ಹೋಗಿದ್ದ ನಾನು ನಿರ್ಮಾಪಕನಾದೆ. ನನ್ನ ಜೊತೆ ಇತರೆ ಸ್ನೇಹಿತರು ಕೂಡ ನಿರ್ಮಾಣದಲ್ಲಿ ಜೊತೆಯಾದರು. ಸೆಪ್ಟೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಈ ಚಿತ್ರಕ್ಕೆ ಒಟ್ಟು ಐವರು ನಿರ್ಮಾಪಕರು’ ಎಂದು ನಿರ್ಮಾಪಕರಲ್ಲಿ ಒಬ್ಬರಾದ ರಾಜೇಂದ್ರನ್ ಹೇಳಿದ್ದಾರೆ. ಒಂದು ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಧನುಷ್ ಎಲ್ ಬೇದ್ರೆ ಅವರ ಸಂಕಲನ, ಸ್ವಾಮಿನಾಥನ್ ಅವರ ಹಿನ್ನೆಲೆ ಸಂಗೀತ, ಜಯೇಂದ್ರ ವಾಕ್ವಾಡಿ ಅವರ ವಿ.ಎಫ್.ಎಕ್ಸ್. ಕೈ ಚಳಕ ಈ ಚಿತ್ರದಲ್ಲಿ ಇರಲಿದೆ. ನಿರ್ಮಾಪಕರಾದ ವಿನಯ್ ಬಾಬು ರೆಡ್ಡಿ, ಗೋಪಿಚಂದ್, ಲಾಲ್ ಚಂದ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಚಿತ್ರದ ಥೀಮ್ ಏನು ಎಂಬುದನ್ನು ನಾಯಕ ನಟ ಸರೋವರ್ ವಿವರಿಸಿದ್ದಾರೆ. ‘ನಾವು ಸೀಮಿತವಾದ ಒಂದು ಬದುಕನ್ನು ನಡೆಸುತ್ತಿರುತ್ತೇವೆ. ಆದರೆ ಅದರಾಚೆಗೆ ಬಂದು ನೋಡಿದರೆ ಬೇರೆಯದೇ ಜೀವನ ಇರುತ್ತದೆ. ಅದೇ ರೀತಿ ನಮ್ಮ ಸಿನಿಮಾ ಕೂಡ. ಮಾಮೂಲಿ ಶೈಲಿಗಿಂತಲೂ ಭಿನ್ನವಾದ ಚಿತ್ರವಿದು. ಸಣ್ಣದಾಗಿ ಶುರು ಮಾಡಿದ ಈ ಸಿನಿಮಾ ಈಗ ಈ ಹಂತಕ್ಕೆ ಬಂದಿದೆ’ ಎಂದು ಸರೋವರ್ ಹೇಳಿದ್ದಾರೆ. ‘ಮಾಂಕ್ ದಿ ಯಂಗ್’ ಚಿತ್ರದಲ್ಲಿ ನಾಯಕಿ ಸೌಂದರ್ಯಾ ಗೌಡ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.