AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್’ ತಾತಾನ ಕೊನೆಯ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

Krishoji Rao: ಕೆಜಿಎಫ್ ತಾತ ಕೃಷ್ಣೋಜಿ ರಾವ್ ನಟಿಸಿರುವ ಕೊನೆಯ ಸಿನಿಮಾ ನ್ಯಾಯೋ ನಾರಾಯಣಪ್ಪ ಬಿಡುಗಡೆ ದಿನಾಂಕ ನಿಗದಿಯಾಗಿದೆ.

'ಕೆಜಿಎಫ್' ತಾತಾನ ಕೊನೆಯ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ನ್ಯಾನೋ ನಾರಾಯಣಪ್ಪ
ಮಂಜುನಾಥ ಸಿ.
|

Updated on: Jun 28, 2023 | 10:33 PM

Share

ಕೆಜಿಎಫ್ (KGF) ಸಿನಿಮಾ ಕನ್ನಡ ಚಿತ್ರರಂಗದ (Sandalwood) ಶಕ್ತಿಯನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿತು ಮಾತ್ರವಲ್ಲ ಹಲವು ನಟರಿಗೆ, ತಂತ್ರಜ್ಞರಿಗೆ ದೊಡ್ಡ ಚಿಮ್ಮುಹಲಗೆಯಾಯಿತು. ಆ ಸಿನಿಮಾಕ್ಕೆ ಕೆಲಸ ಮಾಡಿದ ಹಲವು ನಟ, ತಂತ್ರಜ್ಞರನ್ನು ಕೆಜಿಎಫ್ ಮೂಲಕವೇ ಗುರುತಿಸುವಂತಾಯಿತು, ಸಿನಿಮಾದಲ್ಲಿ ಸಣ್ಣ ಆದರೆ ಪರಿಣಾಮಕಾರಿ ಪಾತ್ರ ಮಾಡಿದ್ದ ವೃದ್ಧ ಕೃಷ್ಣೋಜಿ ರಾವ್ (Krishnoji Rao) ಅವರಿಗೂ ಸ್ಟಾರ್​ಡಂ ದೊರಕಿಬಿಟ್ಟಿತು. ಕೆಲ ತಿಂಗಳ ಹಿಂದಷ್ಟೆ ಕೃಷ್ಣೋಜಿ ರಾವ್ ನಿಧನ ಹೊಂದಿದ್ದಾರೆ. ಆದರೆ ಅವರು ನಟಿಸಿದ್ದ ಕೊನೆಯ ಸಿನಿಮಾ ಈಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ.

‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲೊಂದು ಹೊಸ ಭರವಸೆ ಮೂಡಿಸಿದವರು ನಿರ್ದೇಶಕ ಕುಮಾರ್. ಇವರ ಸಾರಥ್ಯದ ಮಗದೊಂದು ಪ್ರಯತ್ನ ನ್ಯಾನೋ ನಾರಾಯಣಪ್ಪ. ಕೆಜಿಎಫ್ ತಾತಾ ಖ್ಯಾತಿಯ ನಟ ದಿವಂಗತ ಕೃಷ್ಣೋಜಿ ರಾವ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಜುಲೈ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಸ್ಯದ ಜೊತೆಗೆ ಭಾವಾನತ್ಮಕ ಅಂಶವನ್ನು ಹದವಾಗಿ ಬೆರೆಸಿ ಕುಮಾರ್ ನ್ಯಾನೋ ನಾರಾಯಣಪ್ಪ ಕಥೆ ಹೆಣೆದಿದ್ದಾರೆ.

ಬಿಡುಗಡೆ ಹೊಸ್ತಿಲಿನಲ್ಲಿರುವ ‘ನ್ಯಾನೋ ನಾರಾಯಣಪ್ಪ’ ಸಿನಿಮಾದ ಮನಿ ಹಂಟರ್ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ಕುಮಾರ್ ಸಾಹಿತ್ಯದ ಸಿಂಗಿಂಗ್ ಗೆ ಅಂಕಿತಾ ಕುಂಡು ಧ್ವನಿಯಾಗಿದ್ದು, ಆಕಾಶ್ ಪರ್ವ ಟ್ಯೂನ್ ಹಾಕಿದ್ದಾರೆ. ಹಾಟ್ ಅಂಡ್ ಸ್ಪೈ ನಂಬರ್ ಗೆ ಗಿರಿ ಶಿವಣ್ಣ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ:Krishna G Rao: ಕೆಜಿಎಫ್ ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ ರಾವ್‌ ನಿಧನ

ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ನಡಿ ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅನಂತು, ಅಪೂರ್ವಾ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಕಾಮಿಡಿ, ಕಾಡುವ ಕಥೆ, ಮನೆ ಮಂದಿಯೆಲ್ಲಾ ಕುಳಿತು ಕಣ್ತುಂಬಿಕೊಳ್ಳುವ ನ್ಯಾನೋ ನಾರಾಯಣಪ್ಪ ಜುಲೈ 7ಕ್ಕೆ ಥಿಯೇಟರ್ ಪ್ರವೇಶಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ