Head Bush: ‘ಹೆಡ್​ ಬುಷ್​​’ ತಂಡಕ್ಕೆ ಎಂ.ಪಿ. ಜಯರಾಜ್​ ಮಗ-ಸೊಸೆ ವಿರೋಧದ ನಡುವೆ ಸಹೋದರಿಯ ಬೆಂಬಲ

MP Jayaraj | Daali Dhananjay: ‘ಹೆಡ್​ ಬುಷ್​​’ ಚಿತ್ರಕ್ಕೆ ಅಗ್ನಿ ಶ್ರೀಧರ್ ಸ್ಕ್ರಿಪ್ಟ್​ ಬರೆದಿದ್ದಾರೆ. ಡಾಲಿ ಧನಂಜಯ್​ ಅವರನ್ನು ಎಂ.ಪಿ. ಜಯರಾಜ್​ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.

Head Bush: ‘ಹೆಡ್​ ಬುಷ್​​’ ತಂಡಕ್ಕೆ ಎಂ.ಪಿ. ಜಯರಾಜ್​ ಮಗ-ಸೊಸೆ ವಿರೋಧದ ನಡುವೆ ಸಹೋದರಿಯ ಬೆಂಬಲ
ಡಾಲಿ ಧನಂಜಯ್, ಎಂ.ಪಿ. ಹೇಮಾವತಿ ಪೋಸ್ಟ್​
Edited By:

Updated on: Sep 24, 2022 | 7:30 AM

ಬೆಂಗಳೂರು ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿ ಕೆಲವು ಸಿನಿಮಾಗಳು ಬಂದಿವೆ. ಅದೇ ರೀತಿ ಈಗ ‘ಹೆಡ್​ ಬುಷ್​’ (Head Bush) ಚಿತ್ರ ತೆರೆಕಾಣಲು ಸಜ್ಜಾಗಿದೆ. ಬೆಂಗಳೂರಿನ ಅಂಡರ್​ವರ್ಲ್ಡ್​ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಎಂ.ಪಿ. ಜಯರಾಜ್​ ಕುರಿತು ಈ ಸಿನಿಮಾ ತಯಾರಾಗಿದೆ. ಡಾನ್​ ಜಯರಾಜ್​ ಪಾತ್ರದಲ್ಲಿ ಡಾಲಿ ಧನಂಜಯ್​ (Daali Dhananjay) ನಟಿಸಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಒಂದಷ್ಟು ವಿವಾದಗಳ ಮೂಲಕವೂ ಈ ಸಿನಿಮಾ ಸುದ್ದಿ ಆಗಿದ್ದುಂಟು. ಈ ಚಿತ್ರದ ಬಗ್ಗೆ ಸ್ವತಃ ಎಂ.ಪಿ. ಜಯರಾಜ್​ (MP Jayaraj) ಕುಟುಂಬದವರು ಇತ್ತೀಚೆಗೆ ತಕರಾರು ಎತ್ತಿದ್ದರು. ಜಯರಾಜ್ ಪುತ್ರ ಅಜಿತ್​ ಜಯರಾಜ್​ ಹಾಗೂ ಸೊಸೆ ಇಂಪನಾ ಅವರು ‘ಹೆಡ್​ ಬುಷ್​’ ತಂಡದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಜಯರಾಜ್​ ಸಹೋದರಿ ಎಂ.ಪಿ. ಹೇಮಾವತಿ ಅವರು ಚಿತ್ರತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಎಂ.ಪಿ. ಹೇಮಾವತಿ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡ ಕೆಲವು ವಿಷಯಗಳು ಗಮನ ಸೆಳೆದಿವೆ. ‘ತುಂಬ ಜನರು ಪ್ರಚಾರಕ್ಕಾಗಿ ನನ್ನ ಸಹೋದರನ ಒಡನಾಡಿಗಳೆಂದು ಹೇಳಿಕೊಳ್ಳುತ್ತಾರೆ. ಅದು ನನಗೆ ನಗು ತರಿಸುತ್ತದೆ. ಅಣ್ಣನ ಬಗ್ಗೆ ಇದ್ದ ವಿವಾದಗಳು ಹಳೆಯದಾಗಿವೆ. ಹೊಸ ವಿವಾದಗಳು ಕಾಮಿಡಿ ಎನಿಸುತ್ತಿದೆ. ಅಣ್ಣನ ಕುರಿತು ಜಗತ್ತಿಗೆ ಸರಿಯಾದ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುತ್ತಿರುವವರು ಹೆಡ್​ ಬುಷ್​ ತಂಡದವರು ಮಾತ್ರ. ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆ’ ಎಂದು ಎಂ.ಪಿ. ಹೇಮಾವತಿ ಸ್ಟೋರಿ ಪೋಸ್ಟ್​ ಮಾಡಿದ್ದಾರೆ.

ಅಗ್ನಿ ಶ್ರೀಧರ್​ ಬರೆದ ‘ದಾದಾಗಿರಿಯ ದಿನಗಳು’ ಕೃತಿಯನ್ನು ಆಧರಿಸಿ ‘ಹೆಡ್​ ಬುಷ್​’ ಸಿನಿಮಾ ತಯಾರಾಗಿದೆ. ಶೂನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ್​ ಜೊತೆ ಪಾಯಲ್​ ರಜಪೂತ್​, ಲೂಸ್ ಮಾದ ಯೋಗಿ, ಶ್ರುತಿ ಹರಿಹರನ್​, ವಸಿಷ್ಠ ಸಿಂಹ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್​ 21ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ
‘ಹೆಡ್​ ಬುಷ್​’ ಚಿತ್ರಕ್ಕೆ ರಿಲೀಸ್ ದಿನಾಂಕ ಫಿಕ್ಸ್​; ಅಕ್ಟೋಬರ್ ತಿಂಗಳಲ್ಲಿ ಡಾನ್ ಜಯರಾಜ್ ಆಗಮನ
‘ಅಲ್ಲಿ ಬರುವ ಪಾತ್ರಗಳು ನನಗೆ ಸೇರಿದ್ದು’; ‘ಹೆಡ್​ ಬುಷ್​’ ವಿವಾದದ ಬಗ್ಗೆ ಅಗ್ನಿ ಶ್ರೀಧರ್ ಮಾತು
ಧನಂಜಯ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ಜಯರಾಜ್​ ಪುತ್ರ ಅಜಿತ್​ ತಕರಾರು ತೆಗೆದಿದ್ದು ಯಾಕೆ? ಇಲ್ಲಿದೆ ಕಾರಣ..
ಹಿರಿದಾಯಿತು ‘ಹೆಡ್​ ಬುಷ್​’ ತಂಡ; ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಶ್ರುತಿ ಹರಿಹರನ್​

‘ಹೆಡ್​ ಬುಷ್​’ ಚಿತ್ರಕ್ಕೆ ಚರಣ್​ ರಾಜ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಗ್ನಿ ಶ್ರೀಧರ್ ಅವರು ಸ್ಕ್ರಿಪ್ಟ್​ ಬರೆದಿರುವುದರಿಂದ ಕುತೂಹಲ​ ಜಾಸ್ತಿ ಆಗಿದೆ. ಧನಂಜಯ್​ ಅವರನ್ನು ಎಂ.ಪಿ. ಜಯರಾಜ್​ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಸದ್ಯ ಪೋಸ್ಟರ್​ ಮತ್ತು ಟೀಸರ್​ನಲ್ಲಿ ಅವರ ಗೆಟಪ್​ ಗಮನ ಸೆಳೆದಿದೆ. ನಟನೆ ಜತೆ ನಿರ್ಮಾಣವನ್ನೂ ಮಾಡಿರುವ ಅವರು ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಕಾರಣಗಳಿಂದಾಗಿ ‘ಹೆಡ್​ ಬುಷ್​’ ಸಿನಿಮಾದ ಮೇಲೆ ಹೈಪ್​ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.