ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತು. ಈಗ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ಸಿದ್ಧವಾಗುತ್ತಿದೆ. ಆದರೆ ಇದು ಯಶ್ ಅಭಿನಯದ ಸಿನಿಮಾ ಅಲ್ಲ. ಈ ಚಿತ್ರದ ಕಥೆಯಲ್ಲಿ ಕಥಾನಾಯಕ ಯಶ್ ಅವರ ಅಭಿಮಾನಿ ಆಗಿರುತ್ತಾನೆ. ಹೊನ್ನರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಿಲೀಸ್ಗೆ ಸಜ್ಜಾಗುತ್ತಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ನಿರ್ದೇಶಕ ಹೊನ್ನರಾಜ್ ಅವರಿಗೆ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಮೊದಲ ಸಿನಿಮಾ. ನಿರ್ದೇಶನ ಮಾಡುವುದು ಮಾತ್ರವಲ್ಲದೇ, ಈ ಸಿನಿಮಾದಲ್ಲಿ ಅವರು ಹೀರೋ ಆಗಿ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣ ಕೂಡ ಅವರದ್ದೇ. ಈಗ ಈ ಸಿನಿಮಾದ ಹೊಸ ಪೋಸ್ಟರ್ ಅನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲೇ ಅನಾವರಣ ಮಾಡಿರುವುದು ವಿಶೇಷ.
ಪೋಸ್ಟರ್ ಬಿಡುಗಡೆ ವೇಳೆ ಚಿತ್ರತಂಡದವರಾದ ನಾಯಕ ಕಮ್ ನಿರ್ದೇಶಕ ಹೊನ್ನರಾಜ್, ನಂದಿಹಳ್ಳಿ ಶಿವಣ್ಣ, ರಾಜೇಂದ್ರ, ಜಗದೀಶ್, ಸಹ-ನಿರ್ದೇಶಕ ಪ್ರಕಾಶ್ ವೆಂಕಟರಮಣ, ಮೋಹನ್, ಸ್ಟಿಲ್ ವೆಂಕಟೇಶ್, ಜಗನ್ನಾಥ್ ಮುಂತಾದವರು ಹಾಜರಿದ್ದರು. ಸಂಜಯ್ ಶ್ರೀನಿವಾಸ್ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಶಿವಪುತ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಿರೀಶ್ ಅವರು ನೃತ್ಯ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಮೈಸೂರು ಮಂಜುಳಾ, ರೇಖಾ ದಾಸ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀರೋಯಿನ್ ಶ್ರುತಿ ಬಬಿತಾ ಅವರಿಗೆ ಬಜಾರಿ ಹುಡುಗಿಯ ಪಾತ್ರವಿದೆ.
ಇದನ್ನೂ ಓದಿ: ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?
ಚಿತ್ರತಂಡದವರು ನೀಡಿರುವ ಮಾಹಿತಿ ಪ್ರಕಾರ, ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಾಣ ಆಗಿರುವ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಇರಲಿದೆ. ಯಶ್ ಅಭಿಮಾನಿಯಾಗಿ ಕಾಣಿಸಿಕೊಳ್ಳುವ ನಾಯಕನು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾನೆ. ಯಾವಾಗಲೂ ಸಮಾಜಸೇವೆಯಲ್ಲಿ ಇರುತ್ತಾನೆ. ಅಂಥವನಿಗೆ ಕಂಕಣ ಭಾಗ್ಯ ಕೂಡಿಬರುತ್ತೋ ಇಲ್ಲವೋ ಎಂಬುದು ಸಿನಿಮಾ ಕಹಾನಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.