‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?

ಮುಖ್ಯಮಂತ್ರಿ ಚಂದ್ರು ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ರಂಗಭೂಮಿಯಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಹೇಗೆ ಇರಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?
ಮುಖ್ಯಮಂತ್ರಿ ಚಂದ್ರು
Follow us
|

Updated on:Jul 05, 2024 | 11:37 AM

ಮುಖ್ಯಮಂತ್ರಿ ಚಂದ್ರು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಚಂದ್ರಶೇಖರ್ ಅನ್ನೋದು ಅವರ ಹೆಸರು. ‘ಮುಖ್ಯಮಂತ್ರಿ’ ನಾಟಕ ಮಾಡಿ ಮುಖ್ಯಮಂತ್ರಿ ಚಂದ್ರು ಎಂದೇ ಫೇಮಸ್ ಆದರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಶಾಸಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಲವು ಸೆಲೆಬ್ರಿಟಿಗಳು ವಿವಾದದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ. ಮಾದರಿಯಾಗಿರಬೇಕಾದ ಹೀರೋಗಳು ಜೈಲು ಸೇರುತ್ತಿದ್ದಾರೆ. ಸೆಲೆಬ್ರಿಟಿ ಪಟ್ಟ ಸಿಕ್ಕಮೇಲೆ ಅವನು ತೋರಿಕೆಗಾದರೂ ಸಭ್ಯನಾಗಿರಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಅಭಿಪ್ರಾಯ. ಈ ಬಗ್ಗೆ ಅವರು ಹಳೆಯ ಘಟನೆ ಒಂದನ್ನು ಉದಾಹರಣೆ ಕೊಟ್ಟು ಹೇಳಿದ್ದಾರೆ.

‘ಮುಖ್ಯಮಂತ್ರಿ’ ನಾಟಕವನ್ನು ಲೋಹಿತಾಶ್ವ ಅವರು ಮಾಡಬೇಕಿತ್ತು. ಈ ನಾಟಕದ ಬಗ್ಗೆ ಚರ್ಚೆ ಮಾಡಲು ಹೋಟೆಲ್ ಒಂದರಲ್ಲಿ ಲೋಹಿತಾಶ್ವ ಹಾಗೂ ಚಂದ್ರು ಹೋಟೆಲ್ ಮಾಡಿಕೊಂಡಿದ್ದರು. ಈ ವೇಳೆ ರಮ್ ಕುಡಿಯುತ್ತಿದ್ದರಂತೆ. ಈ ವಿಚಾರವನ್ನು ಚಂದ್ರು ಹೇಳಿಕೊಂಡರು. ‘ರಮ್ ಕುಡಿಯೋದ್ರಲ್ಲಿ ಏನಿದೆ? ಇದೆಲ್ಲ ಓಪನ್ ಆಗಿ ಹೇಳಿಕೊಳ್ಳುತ್ತೇನೆ. ಆದರೆ, ಇದನ್ನು ಓಪನ್ ಆಗಿ ಎಲ್ಲಿಯೂ ಹೇಳಿಕೊಳ್ಳಬೇಡಿ ಎಂದು ನಾನು ನಾಯಕರಿಗೆ ಹೇಳುತ್ತಿರುತ್ತೇನೆ’ ಎಂದಿದ್ದಾರೆ ಚಂದ್ರು. ಆ ಬಳಿಕ ಅವರು ಸೆಲೆಬ್ರಿಟಿಗಳು ಪಾಲಿಸಬೇಕಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ನಾಗಮಂಗಲದಲ್ಲಿ ದರ್ಶನ್ ಮತ್ತು ಮುಖ್ಯಮಂತ್ರಿ ಚಂದ್ರುರಿಂದ ಸ್ಟಾರ್ ಚಂದ್ರು ಪರ ರೋಡ್ ಶೋ!

‘ಹಲ್ಕಾ ಕೆಲಸ ಬಿಡೋಕೆ ಆಗಲ್ಲ. ಸೆಲೆಬ್ರಿಟಿ ಆದಮೇಲೆ ಅದನ್ನು ಬಿಡದೆ ಇದ್ರೆ ಮನುಷ್ಯರಲ್ಲ. ಬಿಡದೇ ಇದ್ದರೆ ಎಂದರೆ ಸಾರ್ವಜನಿಕ ಮಾಡದನ್ನು ಬಿಡದೇ ಇದ್ದರೆ ಅವನು ಮಾದರಿ ಆಗಲ್ಲ. ಈಗ ಎಲ್ಲವನ್ನೂ ಓಪನ್ ಆಗಿ ತೋರ್ಸಿ ಗಬ್ಬೆದ್ದು ಹೋಗುತ್ತಿದ್ದಾರೆ. ಮನುಷ್ಯನ ಚಟ ಏನು ಮಾಡೋಕಾಗಲ್ಲ. ಇದು ವೀಕ್​ನೆಸ್. ಇತಿ-ಮಿತಿಯಲ್ಲಿ ಇರಬೇಕು’ ಎಂದಿದ್ದಾರೆ ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:35 am, Fri, 5 July 24

ತಾಜಾ ಸುದ್ದಿ
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು