Mungaru Male: ಮತ್ತೆ ಜೊತೆಯಾಗಿ ಅಚ್ಚರಿ ನೀಡಿದ ‘ಮುಂಗಾರು ಮಳೆ’ ಚಿತ್ರತಂಡ; ಹೊಸ ಸುದ್ದಿ ಇದೆಯೇ ಎಂದು ಕೇಳಿದ ಫ್ಯಾನ್ಸ್!

Ganesh: ಕನ್ನಡದ ಸೂಪರ್ ಹಿಟ್ ಚಿತ್ರ ಮುಂಗಾರು ಮಳೆಯ ಚಿತ್ರತಂಡ ಜೊತೆಯಾಗಿ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿದೆ. ಈ ಚಿತ್ರವನ್ನು ಗಣೇಶ್ ಆದಿಯಾಗಿ ಹಲವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಹೊಸ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ.

Mungaru Male: ಮತ್ತೆ ಜೊತೆಯಾಗಿ ಅಚ್ಚರಿ ನೀಡಿದ ‘ಮುಂಗಾರು ಮಳೆ’ ಚಿತ್ರತಂಡ; ಹೊಸ ಸುದ್ದಿ ಇದೆಯೇ ಎಂದು ಕೇಳಿದ ಫ್ಯಾನ್ಸ್!
ಮತ್ತೆ ಜೊತೆಯಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮುಂಗಾರು ಮಳೆ ಚಿತ್ರತಂಡ (ಕೃಪೆ: ಗಣೇಶ್/ ಟ್ವಿಟರ್)
Updated By: shivaprasad.hs

Updated on: Sep 05, 2021 | 3:22 PM

ಕನ್ನಡ ಚಿತ್ರರಂಗಕ್ಕೆ ನೂತನ‌ ತಿರುವು ನೀಡಿದ ಸಿನಿಮಾ ಎಂದು ‘ಮುಂಗಾರು ಮಳೆ’ ಸಿನಿಮಾವನ್ನು ಕರೆಯಲಾಗುತ್ತದೆ. ಕತೆ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲವನ್ನೂ ಹೊಸ ಮಾದರಿಯಲ್ಲಿ‌ ಕಟ್ಟಿಕೊಟ್ಟ ಈ ಚಿತ್ರ ಬಹಳ ದೊಡ್ಡ ಯಶಸ್ಸನ್ನು ಪಡೆದಿದ್ದಲ್ಲದೇ, ಕನ್ನಡ ಚಿತ್ರರಂಗದ ಹಾದಿಗೆ ಹೊಸ ದಿಕ್ಕನ್ನು ಪರಿಚಯಿಸಿತು. ಈ ಚಿತ್ರದ ಮೂಲಕ ಅನೇಕ ಕಲಾವಿದರು ತಂತ್ರಜ್ಞರು ಚಿತ್ರರಂಗಕ್ಕೆ ಪರಿಚಿತರಾಗಿ, ನೆಲೆ ಕಂಡುಕೊಂಡರು. ಈಗ ಅವರು ಮತ್ತೆ ಭೇಟಿಯಾಗಿದ್ದು, ನಟ ಗಣೇಶ್ ಚಿತ್ರವೊಂದನ್ನು ಹಂಚಿಕೊಂಡು ಮುಂಗಾರು ಮಳೆಯ ಹಾಡಿನ ಸಾಲನ್ನು ಕ್ಯಾಪ್ಶನ್ ಆಗಿ ನೀಡಿದ್ದಾರೆ.

‘ಈ ಮುಂಗಾರು ಮಳೆಯಲ್ಲಿ ಇಷ್ಟೊಂದು ಬೆಂಕಿ ಇದೆ ಅಂತ ಗೊತ್ತಿರಲಿಲ್ಲ ಕಣೋ ದೇವದಾಸ… ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ಲೀಲೆ’ ಎಂದು ಬರೆದುಕೊಂಡು ಗಣೇಶ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ನಿರ್ದೇಶಕ ಯೋಗರಾಜ್ ಭಟ್, ಸಾಹಿತಿ ಜಯಂತ್ ಕಾಯ್ಕಿಣಿ, ನಿರ್ದೇಶಕ ಪ್ರೀತಮ್ ಗುಬ್ಬಿ(ಮುಂಗಾರು ಮಳೆ ಚಿತ್ರದ ಸಹ ಕತೆಗಾರ), ಛಾಯಾಗ್ರಾಹಕ, ನಿರ್ದೇಶಕ ಎಸ್.ಕೃಷ್ಣ ಹಾಗೂ ರಾಘವೇಂದ್ರ ಹುಣಸೂರ್ ಇದ್ದಾರೆ‌. ಶನಿವಾರ ತಂಡವು ಭೇಟಿಯಾಗಿ, ಮಾತುಕತೆ ನಡೆಸಿ ಹಳೆಯ ದಿನಗಳನ್ನು‌ ಮೆಲುಕು ಹಾಕಿದೆ.

ಈ ಚಿತ್ರವನ್ನು ಗಣೇಶ್ ಹಾಗೂ ಇತರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಏನಾದರೂ ಹೊಸ ಸುದ್ದಿ ಇದೆಯೇ ಎಂದು ಕೆಲವರು ಹೇಳಿದ್ದರೆ, ಹೊಸ ಚಿತ್ರ ಬರಲಿ ಎಂದು ಮತ್ತಷ್ಟು ಜನ ಆಶಿಸಿದ್ದಾರೆ. ಮತ್ತೆ ಕೆಲವರು ಮುಂಗಾರು ಮಳೆ 3ರ ನಿರೀಕ್ಷೆಯಲ್ಲಿದ್ದಾರೆ. ಬಹಳಷ್ಟು ಜನ ಸಂಗೀತ ನಿರ್ದೇಶಕ ಮನೋ‌ ಮೂರ್ತಿಯವರೂ ಜೊತೆಯಲ್ಲಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಣೇಶ್ ಹಂಚಿಕೊಂಡ ಟ್ವೀಟ್:

ಎಸ್.ಕೃಷ್ಣ ಹಾಗೂ ಪ್ರೀತಮ್ ಗುಬ್ಬಿ ಹಂಚಿಕೊಂಡ ಪೋಸ್ಟ್:

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾ ಗಾಂಧಿ ನಟಿಸಿದ್ದ ಈ ಚಿತ್ರ ದೊಡ್ಡ ಯಶಸ್ಸನ್ನು ಗಳಿಸಿದ್ದಲ್ಲದೇ ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ತೆಲುಗಿನಲ್ಲಿ ‘ವಾನ’, ಬೆಂಗಾಳಿಯಲ್ಲಿ ‘ಪ್ರೇಮೆರ್ ಕಹಾನಿ’, ಒಡಿಯಾ ಭಾಷೆಯಲ್ಲಿ ‘ರೋಮಿಯೊ’, ಮರಾಠಿಯಲ್ಲಿ ‘ಪ್ರೇಮಾಯ್ ನಮಃ’ ಎಂಬ ಹೆಸರುಗಳಿಂದ ಮುಂಗಾರು ಮಳೆ ರಿಮೇಕ್ ಆಗಿತ್ತು. ಮುಂಗಾರು ಮಳೆ 2 ಚಿತ್ರ 2016ರಲ್ಲಿ ತೆರೆಗೆ ಬಂತು. ಅದನ್ನು ಶಶಾಂಕ್ ನಿರ್ದೇಶಿಸಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಿರಲಿಲ್ಲ. ಈಗ ಮುಂಗಾರು ಮಳೆ ಚಿತ್ರದ ಮೂಲ ತಂಡ ಒಂದಾಗಿ ಚಿತ್ರ ಹಂಚಿಕೊಂಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು, ಹೊಸ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:

ಕರೀನಾ ಕಡೆಯಿಂದ ಸೈಫ್​ಗೆ ಬಂತು ಕಟ್ಟುನಿಟ್ಟಿನ ಆದೇಶ; ಇದನ್ನು ಅವರು ಪಾಲಿಸಲೇಬೇಕು

ಹೊಸ ಬಿಗ್​ ಬಾಸ್​​ ಆರಂಭಕ್ಕೂ ಮುನ್ನವೇ ಲೀಕ್​ ಆಯ್ತು 15 ಸ್ಪರ್ಧಿಗಳ ಹೆಸರು; ಈ ಬಾರಿ ಯಾರಿಗೆಲ್ಲ ಚಾನ್ಸ್​?

(Mungaru Male team members get together and Ganesh shared a photo got fans attention)

Published On - 3:19 pm, Sun, 5 September 21