‘ಬಂದು ನೋಡ್ಕಂಡು ಹೋಗೋ ಕಂದ’; ಪುನೀತ್ ನಿಧನದ ಬಳಿಕವೂ ಪರಿಪರಿಯಾಗಿ ಕೇಳಿದ್ದ ನಾಗಮ್ಮ

ರಾಜಕುಮಾರ್ ಅವರ ಸಹೋದರಿ ನಾಗಮ್ಮ ಅವರು ಪುನೀತ್ ರಾಜಕುಮಾರ್ ಅವರನ್ನು ನೋಡುವ ಆಸೆ ಹೊಂದಿದ್ದರು.ಪುನೀತ್ ಅವರ ನಿಧನದ ಸುದ್ದಿಯನ್ನು ಅವರಿಂದ ಮುಚ್ಚಿಡಲಾಗಿತ್ತು. ನಾಗಮ್ಮ ಅವರ ಅಂತ್ಯಕ್ರಿಯೆ ಗಾಜನೂರಿನಲ್ಲಿ ನಡೆಯಲಿದೆ. ನಾಗಮ್ಮ ಅವರ ಪುನೀತ್ ಅವರ ಮೇಲಿನ ಅಪಾರ ಪ್ರೀತಿ ಮತ್ತು ಅವರ ಕೊನೆಯ ಆಸೆಯು ಈಗ ವೈರಲ್ ಆಗಿರುವ ಒಂದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.

‘ಬಂದು ನೋಡ್ಕಂಡು ಹೋಗೋ ಕಂದ’; ಪುನೀತ್ ನಿಧನದ ಬಳಿಕವೂ ಪರಿಪರಿಯಾಗಿ ಕೇಳಿದ್ದ ನಾಗಮ್ಮ
ನಾಗಮ್ಮ-ಪುನೀತ್

Updated on: Aug 02, 2025 | 2:42 PM

ರಾಜ್​ಕುಮಾರ್ ಸಹೋದರಿ ನಾಗಮ್ಮ (Nagamma) ಅವರು ಶುಕ್ರವಾರ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಇಂದು (ಆಗಸ್ಟ್ 2) ಗಾಜನೂರಿನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಪುನೀತ್ ಕಂಡರೆ ನಾಗಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಪುನೀತ್ ತಮ್ಮನ್ನು ನೋಡಲು ಬರುತ್ತಿಲ್ಲ ಎಂಬ ಕೊರಗು ಅವರನ್ನು ಬಹುವಾಗಿ ಕಾಡಿತ್ತು. ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಕಾರಣಕ್ಕೆ ಪುನೀತ್ ನಿಧನ ವಾರ್ತೆ ಬಗ್ಗೆ ನಾಗಮ್ಮಗೆ ಯಾರೂ ಹೇಳಿರಲಿಲ್ಲ. ಈಗ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.

ಮಾರ್ಚ್ 17ರಂದು ಪುನೀತ್ ಜನ್ಮದಿನ. ಅವರು ಬದುಕಿದ್ದರೆ ಈ ವರ್ಷ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ನಾಗಮ್ಮ ಮಾತನಾಡಿದ್ದರು. ‘ಅಪ್ಪು, ನಿನಗೆ 50 ವರ್ಷ. ಚೆನ್ನಾಗಿದೀಯಾ ಮಗನೆ’ ಎಂದು ಭಾವುಕರಾಗಿ ಮಾತು ಆರಂಭಿಸಿದ್ದರು ನಾಗಮ್ಮ.

ಇದನ್ನೂ ಓದಿ
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ಅಪ್ಪುಗಾಗಿ ಕಾದಿದ್ದ ಅಣ್ಣಾವ್ರ ಸಹೋದರಿ ನಾಗಮ್ಮತ್ತೆ ನಿಧನ

‘ಭೂಮಿಗೆ ಬಂದ ಭಗವಂತ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಿದೇಶಿಗರು ಬಂದು ಫೋಟೋ ತೆಗೆಸಿಕೊಂಡರು. ಕೆಲವರು ಕಾಲಿಗೆ ನಮಸ್ಕಾರ ಮಾಡಿದರು. ದೇವರು, ದೇವರು ಎಂದರು. ಅವತ್ತು ಶೂಟಿಂಗ್ ಮಾಡಲೇ ಇಲ್ಲ. ಫೋಟೋ ತೆಗೆದುಕೊಳ್ಳುವುದರಲ್ಲೇ ಆಯ್ತು’ ಎಂದು ಹಳೆಯ ಘಟನೆ ಹೇಳಿದ್ದರು ನಾಗಮ್ಮ. ‘ಒಮ್ಮೆ ಬಂದು ನೋಡ್ಕಂಡು ಹೋಗು ಕಂದಾ. ನೋಡಿ ಬಿಡ್ತೀನಿ. ಇನ್ನೂ ನಿನ್ನ ಮಗು ಎಂದುಕೊಂಡಿದ್ದೇನೆ’ ಎಂದು ನಾಗಮ್ಮ ಹೇಳಿದ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ.

ನಾಗಮ್ಮ ಅವರು  ಗಾಜನೂರಿನಲ್ಲಿ ವಾಸವಿದ್ದರು. ಅವರಿಗೆ ಬಹಳವೇ ವಯಸ್ಸಾಗಿತ್ತು. ಸರಿಯಾಗಿ ಎದ್ದು ಓಡಾಡುವುದು ಕಷ್ಟ ಆಗಿತ್ತು. ಪುನೀತ್ ನೋಡಬೇಕು ಎಂಬುದು ಅವರ ಬಯಕೆ ಆಗಿತ್ತು. ಆದರೆ, ಈ ಬಯಕೆ ಈಡೇರದೆ ಅವರು ನಿಧನ ಹೊಂದಿದರು. ಪುನೀತ್ ಸತ್ತ ವಿಚಾರವನ್ನು ಹೇಳಿದ್ದರೆ ಅವರಿಗೆ ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದು ಕುಟುಂಬಕ್ಕೆ ಸ್ಪಷ್ಟವಾಗಿತ್ತು. ಹೀಗಾಗಿ, ವಿಚಾರವನ್ನು ಮುಚ್ಚಿಡಲಾಗಿದೆ. ಒಂದು ಗಾಜನೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಇಡೀ ಕುಟುಂಬದವರು ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.