ಗಂಟೆಗೆ 11 ಸಾವಿರ ಟಿಕೆಟ್ ಮಾರಾಟ: ‘ಸು ಫ್ರಮ್ ಸೋ’ ಶುಕ್ರವಾರ ದಾಖಲೆಯ ಕಲೆಕ್ಷನ್
Su From So Booking: ‘ಸು ಫ್ರಮ್ ಸೋ’ ಸಿನಿಮಾ ಎರಡನೇ ವಾರದಲ್ಲೂ ಅದ್ಭುತ ಯಶಸ್ಸು ಕಾಣುತ್ತಿದೆ. ಗಂಟೆಗೆ 11,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಒಟ್ಟು 23 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಮಲಯಾಳಂನಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

‘ಸು ಫ್ರಮ್ ಸೋ’ ಎರಡನೇ ವಾರವೂ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ ಎರಡನೇ ವೀಕೆಂಡ್ಗೆ ಕಾಲಿಟ್ಟಿದ್ದು, ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದಕ್ಕೆ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ವೀಕೆಂಡ್ನಲ್ಲಿ ಸಿನಿಮಾ ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಬಾಯ್ಮಾತಿನ ಪ್ರಚಾರ ‘ಸು ಫ್ರಮ್ ಸೋ’ (Su From So) ಸಿನಿಮಾಗೆ ಚೆನ್ನಾಗಿಯೇ ಸಿಕ್ಕಿದೆ.
ಆಗಸ್ಟ್ 1ರಂದು ‘ಸು ಫ್ರಮ್ ಸೋ’ ಸಿನಿಮಾದ ಟಿಕೆಟ್‌ಗಳು ಗಂಟೆಗೆ ಸುಮಾರು 11 ಸಾವಿರದಷ್ಟು ಮಾರಾಟ ಆಗಿವೆ. ಈ ಮೂಲಕ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಮ್ಯಾಕ್ಸ್ ಸಿನಿಮಾ ಈ ಮೊದಲು ಗಂಟೆಗೆ ಸರಿ ಸುಮಾರು 9 ಸಾವಿರ ಟಿಕೆಟ್ಗಳನ್ನು ಮಾರಾಟ ಮಾಡಿತ್ತು. ಈಗ ಆ ದಾಖಲೆಯನ್ನು ಸುದೀಪ್ ಅಭಿಮಾನಿ ರಾಜ್ ಬಿ ಶೆಟ್ಟಿ ಅವರು ಮುರಿದಿದ್ದಾರೆ.
ಇನ್ನು, ಒಂದೇ ದಿನಕ್ಕೆ ಸಿನಿಮಾಗೆ 1.67 ಲಕ್ಷ ಟಿಕೆಟ್‌ಗಳು ಮಾರಾಟ ಆದ ಬಗ್ಗೆ ವರದಿ ಆಗಿದೆ. ಈ ವಿಚಾರವನ್ನು ಫ್ಯಾನ್ ಪೇಜ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಸು ಫ್ರಮ್ ಸೋ’ ಗೆಲುವಿಗೆ ಇಡೀ ತಂಡ ಹಾಗೂ ಸಿನಿ ಪ್ರಿಯರು ತುಂಬಾನೇ ಖುಷಿಪಟ್ಟಿದ್ದಾರೆ. ಸಿನಿಮಾದ ಅಬ್ಬರ ಇನ್ನೂ ಕೆಲ ವಾರ ಮುಂದುವರಿಯುವ ಸಾಧ್ಯತೆ ಇದೆ.
‘ಸು ಫ್ರಮ್ ಸೋ’ ಸಿನಿಮಾ ಕಲೆಕ್ಷನ್ನಲ್ಲೂ ದಾಖಲೆ ಬರೆದಿದೆ. ಈ ಚಿತ್ರ ಶುಕ್ರವಾರ 3.76 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ 23 ಕೋಟಿ ರೂಪಾಯಿ ಆಗಿದೆ. ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಒಳ್ಳೆಯ ಬುಕಿಂಗ್ ಆಗುತ್ತಿದೆ.
ಇದನ್ನೂ ಓದಿ: ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್ ಮಾಡಿದ ಸುಮೇಧ್; ಇಲ್ಲಿದೆ ಹಿನ್ನೆಲೆ
‘ಸು ಫ್ರಮ್ ಸೋ’ ಸಿನಿಮಾಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಈ ಚಿತ್ರವನ್ನು ರಾಜ್ ಬಿ. ಶೆಟ್ಟಿ ಮೊದಲಾದವರು ನಿರ್ಮಿಸಿದ್ದಾರೆ. ಶನೀಲ್ ಗೌತಮ್, ಪ್ರಕಾಶ್ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರಕೆರೆ ಮೊದಲಾದವರು ಸಿನಿಮಾದ ಭಾಗ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:52 am, Sat, 2 August 25




