ಬೇರೆ ಸಿನಿಮಾ ಅಬ್ಬರಗಳ ಮಧ್ಯೆ ‘ಸು ಫ್ರಮ್ ಸೋ’ ಗುರುವಾರ ಗಳಿಸಿದ್ದೆಷ್ಟು?
'ಸು ಫ್ರಮ್ ಸೋ' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಮೊದಲ ವಾರ ಅದ್ಭುತ ಗಳಿಕೆ ಮಾಡಿದ ಈ ಚಿತ್ರ ಗುರುವಾರ ಸ್ವಲ್ಪ ಇಳಿಕೆ ಕಂಡಿತು. ಆದರೆ, ಕೇರಳ ಬಿಡುಗಡೆಯಿಂದ ಮತ್ತು ವೀಕೆಂಡ್ನಿಂದ ಗಳಿಕೆ ಮತ್ತೆ ಹೆಚ್ಚುವ ನಿರೀಕ್ಷೆ ಇದೆ. ಚಿತ್ರದ ಯಶಸ್ಸಿಗೆ ನಟನೆ, ನಿರ್ದೇಶನ ಮತ್ತು ಸಂಗೀತ ಪ್ರಮುಖ ಕಾರಣಗಳು.

‘ಸು ಫ್ರಮ್ ಸೋ’ ಸಿನಿಮಾ (Su From So Movie) ರಿಲೀಸ್ ಆಗಿ ಒಂದು ವಾರ ಕಳೆದಿದೆ. ಈ ಚಿತ್ರದ ಗಳಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇತ್ತು. ಆದರೆ, ಇದೇ ಮೊದಲ ಬಾರಿಗೆ ಅಂದರೆ ಗುರುವಾರ (ಜುಲೈ 31) ಸಿನಿಮಾದ ಗಳಿಕೆ ಕೊಂಚ ಇಳಿಕೆ ಕಂಡಿದೆ. ಹಾಗಂದ ಮಾತ್ರಕ್ಕೆ ಸಿನಿಮಾನದ ಅಬ್ಬರ ಮುಗಿಯಿತು ಎಂದುಕೊಳ್ಳುವಂತಿಲ್ಲ. ಮಲಯಾಳಂನಲ್ಲಿ ಚಿತ್ರ ಬಿಡುಗಡೆ ಆಗಿರುವುದರಿಂದ ಈ ವೀಕೆಂಡ್ನಲ್ಲಿ ಚಿತ್ರದ ಕಲೆಕ್ಷನ್ ಮತ್ತೆ ಹೆಚ್ಚುವ ನಿರೀಕ್ಷೆ ಇದೆ.
‘ಸು ಫ್ರಮ್ ಸೋ’ ರಿಲೀಸ್ ಆಗಿದ್ದು ಜುಲೈ 25ರಂದು. ಅಲ್ಲಿಂದ ಇಲ್ಲಿಯವರೆಗೆ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಲೇ ಬರುತ್ತಿತ್ತು. ಮೊದಲ ದಿನ ಶೋ ಕಡಿಮೆ ಇದ್ದ ಕಾರಣ ಚಿತ್ರ 78 ಲಕ್ಷ ರೂಪಾಯಿ ಮಾತ್ರ ಬಾಚಿಕೊಂಡಿತ್ತು. ಆ ಬಳಿಕ ಶೋ ಹೆಚ್ಚಿದ್ದರಿಂದ ನಿತ್ಯ ಕೋಟಿ ರೂಪಾಯಿಗಳಲ್ಲೇ ಸಿನಿಮಾ ವ್ಯವಹಾರ ಮಾಡಿದೆ. ಭಾನುವಾರದಿಂದ ಬುಧವಾರದವರೆಗೆ ಸಿನಿಮಾ ನಿತ್ಯ ಸರಾಸರಿ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಗುರುವಾರ (ಜುಲೈ 31) ‘ಸು ಫ್ರಮ್ ಸೋ’ ಚಿತ್ರ ಸುಮಾರು ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಗುರುವಾರ ತೆಲುಗಿನಲ್ಲಿ ‘ಕಿಂಗ್ಡಮ್’ ಚಿತ್ರ ರಿಲೀಸ್ ಆಗಿದೆ. ಇದರಿಂದ ಮಲ್ಟಿಪ್ಲೆಕ್ಸ್ನಲ್ಲಿ ‘ಸು ಫ್ರಮ್ ಸೋ’ ಚಿತ್ರಕ್ಕೆ ಶೋಗಳ ಸಂಖ್ಯೆ ಕೊಂಚ ಕಡಿಮೆ ಆಗಿರಬಹುದು. ಆದರೆ, ಇಂದಿನಿಂದ ಸಿನಿಮಾದ ಗಳಿಕೆ ಹೆಚ್ಚುವ ನಿರೀಕ್ಷೆ ಇದೆ.
ಇಂದು (ಆಗಸ್ಟ್ 1) ‘ಸು ಫ್ರಮ್ ಸೋ’ ಸಿನಿಮಾ ಕೇರಳದಲ್ಲಿ ತೆರೆಗೆ ಬಂದಿದೆ. ಈಗಾಗಲೇ ಸಿನಿಮಾಗೆ ಪ್ರೀಮಿಯರ್ ಮಾಡಲಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲಿ ಸಿನಿಮಾ ಹಿಟ್ ಆದರೆ ಕನ್ನಡದ ಜೊತೆಗೆ ಮಲಯಾಳಂ ಭಾಷೆಯ ಕಲೆಕ್ಷನ್ ಕೂಡ ಸೇರ್ಪಡೆ ಆಗಲಿದೆ. ಇದರಿಂದ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮತ್ತೆ ಅಬ್ಬರಿಸಲಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ. ಶೆಟ್ಟಿ ನಿರ್ಮಾಣ ಮಾಡಿ ನಟಿಸಿದ್ದಾರೆ. ಜೆಪಿ ತುಮಿನಾಡ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟಿದ್ದು ಕಲಾವಿದರ ನಟನೆ ಹಾಗೂ ಜೆಪಿ ನಿರ್ದೇಶನ. ಸುಮೇಧ್ ಸಂಗೀತ ಕೂಡ ಸಿನಿಮಾದ ಅಂದವನ್ನು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Fri, 1 August 25








