AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊತ್ತಲವಾಡಿ’ ಸಿನಿಮಾದಲ್ಲಿ ಬಳಕೆ ಆಗಿದೆ ಯಶ್ ಖರೀದಿಸಿದ್ದ ಮೊದಲ ಬೈಕ್

Yash Fist Bike: ಕೊತ್ತಲವಾಡಿ ಚಿತ್ರವು ಯಶ್ ಅವರ ತಾಯಿ ಪುಷ್ಪಾ ಅವರಿಂದ ನಿರ್ಮಾಣಗೊಂಡಿದೆ. ಚಾಮರಾಜನಗರದ ಕೊತ್ತಲವಾಡಿ ಗ್ರಾಮದ ಹಿನ್ನೆಲೆಯಲ್ಲಿ ಈ ಚಿತ್ರ ಸಾಗುತ್ತದೆ. ಪೃಥ್ವಿ ಅಂಬರ್ ಅವರು ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬಳಸಲಾದ ಬೈಕ್ ಯಶ್ ಅವರ ಹಳೆಯ ಬೈಕ್ ಎಂಬುದು ವಿಶೇಷ.

‘ಕೊತ್ತಲವಾಡಿ’ ಸಿನಿಮಾದಲ್ಲಿ ಬಳಕೆ ಆಗಿದೆ ಯಶ್ ಖರೀದಿಸಿದ್ದ ಮೊದಲ ಬೈಕ್
ಯಶ್
ರಾಜೇಶ್ ದುಗ್ಗುಮನೆ
|

Updated on:Aug 01, 2025 | 3:12 PM

Share

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ನಿರ್ಮಿಸಿದ ‘ಕೊತ್ತಲವಾಡಿ’ ಸಿನಿಮಾ (Kothalavadi Movie) ಇಂದು (ಆಗಸ್ಟ್ 1) ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಅಭಿಮಾನಿಗಳು ನಿರ್ಧರಿಸಲಿದ್ದಾರೆ. ಸಿನಿಮಾದಲ್ಲಿ ಕಥಾ ನಾಯಕ ಪೃಥ್ವಿ ಅಂಬಾರ್ ಅವರು ಒಂದು ಬೈಕ್ ಓಡಿಸುತ್ತಾರೆ. ಈ ಬೈಕ್ ಯಶ್ ಅವರದ್ದು ಎಂದು ಹೇಳಿದ್ದಾರೆ ಪೃಥ್ವಿ ಅಂಬಾರ್.

‘ಕೊತ್ತಲವಾಡಿ’ ಸಿನಿಮಾದ ಕಥೆ ಸಾಗೋದು ಚಾಮರಾಜನಗರದ ಕೊತ್ತಲವಾಡಿ ಊರಿನಲ್ಲಿ. ಪಕ್ಕಾ ಗ್ರಾಮೀಣ ಸೊಗಡಿನಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರದಲ್ಲಿ ಕಥಾ ನಾಯಕ ಪೃಥ್ವಿ ಅಂಬಾರ್ ಅವರು ಸಿಬಿಝಡ್ ಬೈಕ್​ನಲ್ಲಿ ಓಡಾಡುತ್ತಾರೆ.

ಇದನ್ನೂ ಓದಿ
Image
‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ?
Image
‘ಕಿಂಗ್ಡಮ್’ ಕಲೆಕ್ಷನ್; ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಜಯ್
Image
‘ಬಾವ ಬಂದರೋ..’ ಹಾಡಿಗೆ ಈಗೊಂದು ಕಳೆ ಬಂತು; ರಾಜ್ ಗ್ಯಾಂಗ್​ನಿಂದ ಸ್ಟೆಪ್ಸ್
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಮೆಟ್ರೊ ಸಾಗಾ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೃಥ್ವಿ ಅವರು, ‘ಶೂಟಿಂಗ್​ಗೆ ಬಳಕೆ ಆದ ಬೈಕ್​ಗೆ ಒಂದು ವಿಶೇಷತೆ ಇದೆ ಎಂದು ನಿರ್ದೇಶಕರು ಹೇಳುತ್ತಲೇ ಬರುತ್ತಿದ್ದರು. ಅದೇನು ಎಂದು ಗೊತ್ತಿರಲೇ ಇಲ್ಲ. ನಾನು ಪಿಯುಸಿಯಲ್ಲಿ ಇದ್ದಾಗ ಸಿಬಿಝಡ್ ಬೈಕ್ ಇದೆ ಎಂದರೆ ಕ್ರೇಜ್ ಇತ್ತು. ಏನು ಎಂಬ ಪ್ರಶ್ನೆ ಇತ್ತು’ ಎಂದಿದ್ದಾರೆ ಪೃಥ್ವಿ.

ಯಶ್ ಬೈಕ್ ಬಗ್ಗೆ ಪೃಥ್ವಿ ಮಾತು

ಆರಂಭದಲ್ಲಿ ಯಶ್ ತಾಯಿ ನಿರ್ಮಾಪಕಿ ಎಂಬ ವಿಚಾರ ಯಾರಿಗೂ ಹೇಳಿರಲಿಲ್ಲ. ಶೂಟಿಂಗ್ ಮುಗಿದ ದಿನ ಹಾಸನಕ್ಕೆ ಕರೆದುಕೊಂಡು ಹೋಗಿ ವಿಚಾರವನ್ನು ರಿವೀಲ್ ಮಾಡಲಾಯಿತು. ‘ನೀವು ಸಿನಿಮಾದಲ್ಲಿ ಓಡಿಸಿದ ಬೈಕ್ ಯಶ್ ಅವರು ಧಾರಾವಾಹಿ ಟೈಮ್​ನಲ್ಲಿ ತೆಗೆದುಕೊಂಡ ಬೈಕ್ ಎಂದು ಹೇಳಿದರು’ ಎಂದಿದ್ದಾರೆ ಪೃಥ್ವಿ ಅಂಬಾರ್.

ಇದನ್ನೂ ಓದಿ: Kothalavadi Movie Review: ‘ಕೊತ್ತಲವಾಡಿ’; ಅಪೂರ್ಣತೆಯ ಮಧ್ಯೆ ಹರಿಯುವ ಕಣ್ಣೀರ ಕೋಡಿ

ಯಶ್ ತಾಯಿ ಕೂಡ ಈ ಮೊದಲು ಆ ವಿಚಾರ ಹೇಳಿದ್ದರು. ಅವರ ಮೊದಲ ಬೈಕ್​ನ ಹಾಸನದಲ್ಲೇ ಸುಮ್ಮನೆ ಇಡಲಾಗಿತ್ತು. ಇದನ್ನು ನೋಡಿದ್ದ ಯಶ್, ಬೈಕ್​ನ ಯಾಕೆ ಸುಮ್ಮನೆ ನಿಲ್ಲಿಸಿ ಇಟ್ಟಿದ್ದೀರಾ, ರೆಡಿ ಮಾಡಿಸಿ ಎಂದು ಹೇಳಿದ್ದರಂತೆ. ಅದನ್ನು ರೆಡಿ ಮಾಡಿಸಿ ಸಿನಿಮಾ ಉದ್ದಕ್ಕೂ ಬಳಕೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Fri, 1 August 25