AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿತಾ ಶ್ವೇತಾ ನಟನೆಯ ಹೊಸ ಸಿನಿಮಾ ‘ಬೆನ್ನಿ’: ಬದಲಾಯ್ತು ಗೆಟಪ್

ಕನ್ನಡದ ನಟಿ ನಂದಿತಾ ಶ್ವೇತಾ ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದೇ ಜಾಸ್ತಿ. ಈಗ ಅವರು ಕನ್ನಡದ ‘ಬೆನ್ನಿ’ ಸಿನಿಮಾಗೆ ನಾಯಕಿ ಆಗಿದ್ದಾರೆ. ಸಂಕ್ರಾಂತಿಗೆ ಈ ಚಿತ್ರ ಅನೌನ್ಸ್ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಬೆನ್ನಿ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ನಂದಿತಾ ಶ್ವೇತಾ ನಟನೆಯ ಹೊಸ ಸಿನಿಮಾ ‘ಬೆನ್ನಿ’: ಬದಲಾಯ್ತು ಗೆಟಪ್
Nandita Swetha
ಮದನ್​ ಕುಮಾರ್​
|

Updated on: Jan 15, 2026 | 4:20 PM

Share

ನಟಿ ಶ್ವೇತಾ ಎಂದರೆ ತಕ್ಷಣಕ್ಕೆ ಯಾರಿಗೂ ಗೊತ್ತಾಗಲ್ಲ. ನಂದಿತಾ ಶ್ವೇತಾ (Nandita Swetha) ಎಂದರೆ ಅಭಿಮಾನಿಗಳಿಗೆ ಗೊತ್ತಾಗುತ್ತದೆ. ‘ನಂದಾ ಲವ್ಸ್ ನಂದಿತಾ’ ಸಿನಿಮಾದ ಶ್ವೇತಾ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಪಡೆದ ಅವರು ಪರಭಾಷೆಯಲ್ಲೇ ಹೆಚ್ಚು ಬ್ಯುಸಿ ಆದರು. ಈಗ ಜಿಂಕೆಮರಿ ಶ್ವೇತಾ ಅವರು ಮತ್ತೆ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಬರೋಬ್ಬರಿ 18 ವರ್ಷಗಳ ಬಳಿಕ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಂದಿತಾ ಶ್ವೇತಾ ನಟನೆಯ ಹೊಸ ಸಿನಿಮಾಗೆ ‘ಬೆನ್ನಿ’ (Benny) ಎಂದು ಹೆಸರು ಇಡಲಾಗಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು (ಜನವರಿ 15) ‘ಬೆನ್ನಿ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶ್ವೇತಾ ಅವರ ಲುಕ್ ಗಮನ ಸೆಳೆಯುತ್ತಿದೆ. ‘ಪೆಪೆ’ ಸಿನಿಮಾ ನಿರ್ದೇಶಕ ಶ್ರೀಲೇಶ್ ಎಸ್. ನಾಯರ್ ಅವರು ಈಗ ‘ಬೆನ್ನಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮಹಿಳಾ ಪ್ರಧಾನ ಕಥೆಯನ್ನು ಪ್ರೇಕ್ಷಕರ ಎದುರು ಅವರು ತರಲಿದ್ದಾರೆ.

ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿರುವ ನಂದಿತಾ ಶ್ವೇತಾ ಅವರು ‘ಬೆನ್ನಿ’ ಸಿನಿಮಾದಲ್ಲಿ ಸಂಪೂರ್ಣ ಬೇರೆಯದೇ ಗೆಟಪ್​ ಧರಿಸುತ್ತಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಈ ಫೊಸ್ಟರ್​​ನಲ್ಲಿ ಕಾಣಿಸಿದೆ. ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್ ರಗಡ್ ಆಗಿದೆ. ಜಿಂಕೆಮರಿ ಶ್ವೇತಾ ಇವರೇನಾ ಎಂದು ಅನುಮಾನ ಮೂಡುವ ರೀತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಬೆನ್ನಿ’ ಸಿನಿಮಾಗೆ ಸಚಿನ್ ಬಸ್ರೂರು ಅವರು ಸಂಗೀತ‌ ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಮನು ಶೇಡ್ಗಾರ್ ಮತ್ತು ರಂಜನ್ ನರಸಿಂಹಮೂರ್ತಿ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮೋಷನ್ ಪೋಸ್ಟರ್ ನೋಡಿದ ಬಳಿಕ ನಂದಿತಾ ಶ್ವೇತಾ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಜಿಂಕೆ ಮರಿ ನಂದಿತಾ ಬ್ಯಾಡ್ಮಿಂಟನ್ ಆಟ

ಈ ಸಿನಿಮಾದಲ್ಲಿ ನಂದಿತಾ ಶ್ವೇತಾ ಅವರ ಜೊತೆಯಲ್ಲಿ ದಕ್ಷಿಣದ ಭಾರತದ ಪ್ರಮುಖ ಕಲಾವಿದರು ನಟಿಸಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ಮೂಡಿಬರಲಿದೆ. ‘ಸಂಡೇ ಸಿನಿಮಾಸ್‌’ ಸಂಸ್ಥೆಯ ಮೂಲಕ ರಾಮೇನಹಳ್ಳಿ ಜಗನ್ನಾಥ್‌ ಅವರು ‘ಬೆನ್ನಿ’ ಸಿನಿಮಾವನ್ನು ನಿರ್ಮಿಸಿ ಪ್ರೆಸೆಂಟ್‌ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.