
ನಟಿ ನಂದಿತಾ ಶ್ವೇತಾ ಅವರು ‘ನಂದ ಲವ್ಸ್ ನಂದಿತಾ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದ ‘ಜಿಂಕೆ ಮರೀನಾ..’ ಹಾಡು ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ಆ ಬಳಿಕ ನಂದಿತಾಗೆ ಜಿಂಕೆ ಮರಿ ಎಂಬ ಟೈಟಲ್ ಫಿಕ್ಸ್ ಆಯಿತು. ಈ ಸಿನಿಮಾ ಬಳಿಕ ಅವರು ಪರಭಾಷೆಯಲ್ಲಿ ಬ್ಯುಸಿ ಇದ್ದರು. ಈಗ ಜಿಂಕೆ ಮರಿ ಕನ್ನಡ ಇಂಡಸ್ಟ್ರಿಗೆ ಮರಳಿ ಬಂದಿದೆ. ‘ಬೆನ್ನಿ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಂದಿತಾ ಶ್ವೇತಾ (Nandita Shwetha) ನಟಿಸುತ್ತಿದ್ದಾರೆ.
ನಂದಿತಾ ಶ್ವೇತಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಕೂಡ ಇದೆ. ಆದರೆ, ಅವರಿಗೆ ಸರಿ ಹೊಂದುವ ಪಾತ್ರ ಇಷ್ಟು ದಿನ ಸಿಕ್ಕಿರಲಿಲ್ಲ. ಈಗ ಕೊನೆಗೂ ಅಂಥದ್ದೊಂದು ಪಾತ್ರ ಅವರಿಗೆ ದೊರೆತಿದ್ದು, ಖುಷಿಯಿಂದ ಸಿನಿಮಾ ಮಾಡಲು ಒಪ್ಪಿದ್ದಾರೆ.
‘ಹೊಂದಿಸಿ ಬರೆಯಿರಿ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ‘ಬೆನ್ನಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಪೆಪೆ’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀಲೇಶ್ ಎಸ್ ನಾಯರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಂದಿತಾ ಶ್ವೇತಾ ಕಂಬ್ಯಾಕ್ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ.
ಈ ಚಿತ್ರದ ಫಸ್ಟ್ ಪೋಸ್ಟರ್ ರಿವೀಲ್ ಆಗಿದೆ. ನಟಿ ಶ್ವೇತಾ ಇಲ್ಲಿ ಬೆನ್ನಿಯಾಗಿ ಟೈಲಟ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ಗೆ ಕಿಚ್ಚ ಸುದೀಪ್ ಅವರು ಖಡಕ್ ವಾಯ್ಸ್ ಕೊಟ್ಟಿದ್ದಾರೆ. ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಮಿಂಚಿದ್ದಾರೆ.
ಇದನ್ನೂ ನೋಡಿ: ಹೇಗಿದ್ದಾರೆ ನೋಡಿ ಜಿಂಕೆಮರಿ ನಂದಿತಾ ಶ್ವೇತಾ
‘ಬೆನ್ನಿ’ ಚಿತ್ರದಲ್ಲಿ ದಕ್ಷಿಣದ ಭಾರತದ ಪ್ರಮುಖ ನಟರು ಅಭಿನಯಿಸಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಈ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:07 am, Tue, 15 July 25