AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್; ಇದಕ್ಕೆ ಕಾರಣ ಹೊಸ ಸಿನಿಮಾ

ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತ ಕಾರ್ತಿಕ್ ಮಹೇಶ್ ಅವರು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮರಸ’ ಮತ್ತು ‘ರಿಚಿ ರಿಚ್’ ಸಿನಿಮಾಗಳ ಜೊತೆಗೆ, ಅವರು ಹೊಸ ಚಿತ್ರದ ಚರ್ಚೆಯಲ್ಲಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡುವುದು ಅವರ ಗುರಿ.

ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್; ಇದಕ್ಕೆ ಕಾರಣ ಹೊಸ ಸಿನಿಮಾ
ಕಾರ್ತಿಕ್ ಮಹೇಶ್
ರಾಜೇಶ್ ದುಗ್ಗುಮನೆ
|

Updated on: Jul 15, 2025 | 12:30 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಯಾಂಡಲ್​ವುಡ್​ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅವರಿಗ ಒಂದಾದ ಬಳಿಕ ಒಂದರಂತೆ ಆಫರ್​ಗಳು ಬರುತ್ತಿವೆ. ಆದರೆ, ಅವರ ಗುರಿ ಮಾತ್ರ ಒಳ್ಳೆಯ ಸಿನಿಮಾಗಳನ್ನು ಮಾಡೋದು. ಈಗ ಅವರು ವಿದೇಶಕ್ಕೆ ಹೊರಡಲು ರೆಡಿ ಆಗಿದ್ದಾರೆ. ಹಾಗಂತ ಅವರು ಪ್ರವಾಸಕ್ಕಾಗಿ ಫಾರೆನ್​ಗೆ ತೆರಳುತ್ತಿಲ್ಲ. ಸಿನಿಮಾ ಒಂದರ ಮಾತುಕತೆ ನಡೆಯುತ್ತಿದ್ದು, ಇದರ ಸಂಪೂರ್ಣ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ ಅನ್ನೋದು ವಿಶೇಷ.

ಕಾರ್ತಿಕ್ ಮಹೇಶ್​​ ಅವರು ಸದ್ಯ ‘ರಾಮರಸ’ ಹಾಗೂ ‘ರಿಚಿ ರಿಚ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಕೆಲವು ಚಿತ್ರಗಳು ಚರ್ಚೆಯಲ್ಲಿ ಇವೆ. ‘ಗೀತಾ’ ಹಾಗೂ ‘ಹೊಯ್ಸಳ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಎನ್ ಅವರು ಈಗ ‘ಆಲ್ಫಾ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಹೊಸ ಪ್ರತಿಭೆಯ ಎಂಟ್ರಿ ಆಗಲಿದೆ. ಈ ಚಿತ್ರದಲ್ಲಿ ಕಾರ್ತಿಕ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಇದಲ್ಲದೆ ಕಾರ್ತಿಕ್ ಮಹೇಶ್ ಅವರು ಹೊಸ ಸಿನಿಮಾ ಒಂದರ ಮಾತುಕತೆ ನಡೆಸುತ್ತಿದ್ದಾರೆ. ಈ ಸಿನಿಮಾದ ಕಥೆ ವಿದೇಶದಲ್ಲಿ ಸಾಗಲಿದೆ. ಇದು ಫೈನಲ್ ಆದರೆ, ಕಾರ್ತಿಕ್ ಅವರು ವಿದೇಶಕ್ಕೆ ಹಾರಲಿದ್ದಾರೆ. ಅಲ್ಲಿ ಕೆಲವು ದಿನಗಳ ಕಾಲ ಶೂಟಿಂಗ್​ನಲ್ಲಿ ಬ್ಯುಸಿ ಆಗಲಿದ್ದಾರೆ. ಎಲ್ಲವೂ ಫೈನಲ್ ಆದ ಬಳಿಕ ಯಾವ ದೇಶ, ಎಷ್ಟು ದಿನ ಶೂಟ್, ಕಥೆ ಬಗ್ಗೆ ಮಾಹಿತಿ ಸಿಗಲಿದೆ. ಕಾರ್ತಿಕ್ ಅವರು ವೆಬ್ ಸೀರಿಸ್ ಮಾಡುವ ಆಲೋಚನೆಯಲ್ಲೂ ಇದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ.

ಇದನ್ನೂ ಓದಿ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್
Image
ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್
Image
ರಶ್ಮಿಕಾ ಸಿನಿಮಾ ಪ್ರಚಾರಕ್ಕೆ ಸಹಾಯ ಮಾಡಲಿದ್ದಾರೆ ಜೂ.ಎನ್​ಟಿಆರ್​-ಹೃತಿಕ್
Image
‘ರಾಮಾಯಣ’ ಬಜೆಟ್ ನಾಲ್ಕು ಸಾವಿರ ಕೋಟಿ; ಯಶ್ ಪಾಲೆಷ್ಟು?

ಇದನ್ನೂ ಓದಿ: ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಕಾರ್ತಿಕ್ ಮಹೇಶ್ ಅವರು ಚಿತ್ರರಂಗದಲ್ಲಿ ಬ್ಯುಸಿ ಹೀರೋ ಎನಿಸಿಕೊಂಡಿದ್ದಾರೆ. ‘ರಾಮರಸ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ‘ರಿಚಿ ರಿಚ್’ ಚಿತ್ರದ ಶೂಟ್​ ನಡೆಯುತ್ತಿದೆ.  ಒಳ್ಳೆಯ ಕಥೆ ಸಿಕ್ಕರೆ ಅದನ್ನು ಮಾಡಿ ಅಭಿಮಾನಿಗಳ ಎದುರು ಇಡೋ ಹುಮ್ಮಸ್ಸಿನಲ್ಲಿ ಇದ್ದಾರೆ. ಕಾರ್ತಿಕ್ ಮಹೇಶ್ ಅವರಿಗೆ ‘ಮೈಕ್ರೋ ವೆಬ್ ಸೀರಿಸ್’ ತಂಡಗಳಿಂದಲೂ ಆಫರ್ ಬರುತ್ತಿದೆ. ಆದರೆ, ದೊಡ್ಡ ಪರದೆಯ ಪ್ರೇಕ್ಷಕರನ್ನು ರಂಜಿಸಬೇಕು ಎಂಬುದು ಅವರ ಗುರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್