- Kannada News Photo gallery Karthik Mahesh Starts His new business amid two Movie In Hands cinema News in Kannada
ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್ ‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ನರ್. ಅವರ ಕೈಯಲ್ಲಿ ಸದ್ಯ ‘ರಾಮರಸ’ ಹಾಗೂ ‘ರಿಚಿ ರಿಚ್’ ಹೆಸರಿನ ಎರಡು ಸಿನಿಮಾಗಳು ಇವೆ. ಈಗ ಅವರು ಸಿನಿಮಾ ಕೆಲಸಗಳ ಜೊತೆ ಉದ್ಯಮ ಆರಂಭಿಸುತ್ತಿದ್ದಾರೆ. ಇದಕ್ಕೆ ಅವರ ತಾಯಿಯೂ ಸಾತ್ ಕೊಟ್ಟಿದ್ದಾರೆ.
Updated on: Feb 11, 2025 | 8:46 AM

ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿಜೇತರು. ಈ ಶೋನಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈಗ ಅವರು ಸಿನಿಮಾ ಕೆಲಸಗಳ ಜೊತೆ ಉದ್ಯಮ ಆರಂಭಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.

ಹೌದು, ಕಾರ್ತಿಕ್ ಮಹೇಶ್ ಅವರು ಸೋಡಾ ಬಿಸ್ನೆಸ್ ಆರಂಭಿಸಲಿದ್ದಾರೆ. ಅಮ್ಮನ ಜೊತೆ ಸೇರಿ ಗೋಲಿ ಸೋಡಾ ಆರಂಭಿಸಿದ್ದಾರೆ. ವಿವಿಧ ಫ್ಲೇವರ್ನಲ್ಲಿ ಇದು ಲಭ್ಯವಿರಲಿದೆ ಎನ್ನಲಾಗಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬರಲಿದೆಯಂತೆ.

ಬಿಗ್ ಬಾಸ್ ಗೆದ್ದ ಹಣವನ್ನು ಅನೇಕರು ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ಅಮ್ಮನಿಗೋಸ್ಕರ ಮನೆ ಕಟ್ಟಬೇಕು ಎನ್ನುವ ಕನಸು ಕಾರ್ತಿಕ್ ಮಹೇಶ್ ಅವರದ್ದಾಗಿತ್ತು. ಈಗ ಅವರು ಉದ್ಯಮಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗೆದ್ದ ಬಳಿಕ ಕಾರ್ತಿಕ್ ಮಹೇಶ್ ಖ್ಯಾತಿ ಹೆಚ್ಚಾಯಿತು. ಅವರು ‘ರಾಮರಸ’ ಹೆಸರಿನ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಡಬ್ಬಿಂಗ್ ಕೆಲಸಗಳೂ ಆಗಿವೆ.

ಇತ್ತೀಚೆಗಷ್ಟೇ ‘ರಿಚಿ ರಿಚ್’ ಹೆಸರಿನ ಸಿನಿಮಾನ ಘೋಷಣೆ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಅರವಿಂದ್ ವೆಂಕಟೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.



















