AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ‘ನಾನು ಭಾರತೀಯ’: ಸಿನಿಮಾದ ವಿಶೇಷತೆಗಳೇನು?

Nanu Bharathiya: ರಾಗಿಣಿ ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಭಾರತೀಯ’ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ವಿಶೇಷತೆಗಳೇನು ಗೊತ್ತೆ?

ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ‘ನಾನು ಭಾರತೀಯ’: ಸಿನಿಮಾದ ವಿಶೇಷತೆಗಳೇನು?
ಮಂಜುನಾಥ ಸಿ.
|

Updated on: Feb 11, 2024 | 11:08 PM

Share

ಈಗೇನಿದ್ದರೂ ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಜಮಾನ. ಸ್ಟಾರ್ ನಟರು ಮಾತ್ರವೇ ಅಲ್ಲದೆ ಎಲ್ಲರೂ ಸಹ ಪ್ಯಾನ್ ಇಂಡಿಯಾ ಸಿನಿಮಾದ ಮೋಹಕ್ಕೆ ಬಿದ್ದಿದ್ದಾರೆ (ದರ್ಶನ್ ಅಂಥಹವರನ್ನು ಹೊರತುಪಡಿಸಿ). ಕೆಲವು ಹೊಸ ನಟರು ಸಹ ತಮ್ಮ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್​ಗೆ ಕೊಂಡೊಯ್ಯುವ ಸಾಹಸಗಳನ್ನು ಮಾಡುತ್ತಿದ್ದಾರೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲೆಂದೇ ಕೆಲವು ಜನಪ್ರಿಯ ನಟಿಯರನ್ನು, ವಿಲನ್​ಗಳನ್ನು, ಪೋಷಕ ನಟರನ್ನು ಹಾಕಿಕೊಳ್ಳುವ ಚಾಳಿಯೂ ಇತ್ತೀಚೆಗೆ ಶುರುವಾಗಿದೆ. ಕನ್ನಡದಲ್ಲಿ ಹಲವು ಪ್ಯಾನ್ ಇಂಡಿಯಾ ಪ್ರಯತ್ನಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ, ಅದರಲ್ಲಿ ಒಂದು ‘ನಾನು ಭಾರತೀಯ’.

ಬಾಲ ವಿಘ್ನೇಶ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಆಗುತ್ತಿರುವ, ಬಾಬು ಗಣೇಶ್ ನಿರ್ದೇಶನ, ಸಂಗೀತ ನಿರ್ದೇಶನ ಮಾಡಿರುವ ಹಾಗೂ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ನಾನು ಭಾರತೀಯ’ ಚಿತ್ರದ ಹಾಡುಗಳ ಧ್ವನಿಮುದ್ರಣ ಇತ್ತೀಚಿಗೆ ಅರುಣ್ ಸ್ಟುಡಿಯೋದಲ್ಲಿ ಆರಂಭವಾಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಸುಂದರರಾಜ್, ಜಯಸಿಂಹ ಮುಸುರಿ ಮುಂತಾದ ಗಣ್ಯರು ಹಾಡುಗಳ ಧ್ವನಿಮುದ್ರಣ ಪೂಜಾ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಛಾಯಾಂಕ ಅವರು ಬರೆದಿರುವ ಹಾಗೂ ಸಚಿನ್, ಸ್ವಾತಿ ಹಾಡಿರುವ ‘ವಂದೇ ಮಾತರಂ’ ಹಾಡಿನ ಮೂಲಕ ಚಾಲನೆ ನೀಡಲಾಯಿತು.

‘ನಾನು ಭಾರತೀಯ’ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಈವರೆಗೂ ‌12 ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಬಾಬು ಗಣೇಶ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ಸಂಗೀತ ನಿರ್ದೇಶನ, ನಿರ್ಮಾಣ, ನಿರ್ದೇಶನ, ನಟನೆ ಸೇರಿದಂತೆ ಹದಿನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಿರುವುದು ವಿಶೇಷ. ಈ ಹಿಂದೆ ಬಾಬು ಗಣೇಶ್ ಅವರು ‘ನಡಿಗೈ’ ತಮಿಳು ಚಿತ್ರದಲ್ಲೂ ಹದಿನಾಲ್ಕು ವಿಭಾಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅದು ಕೂಡ ಗಿನ್ನಿಸ್ ಬುಕ್, ಲಿಮ್ಕಾ ಬುಕ್ ಹಾಗೂ ವಂಡರ್ ಬುಕ್ ಗಳಿಗೆ ದಾಖಲಾಗಿತ್ತು.

ಇದನ್ನೂ ಓದಿ:‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ, ಪ್ಯಾನ್ ಇಂಡಿಯಾ ಸ್ಟಾರ್​ಗಳಿಗೆ ಸೆಡ್ಡು ಹೊಡೆದ ದರ್ಶನ್

ಚಿತ್ರದ ಹೆಸರು ತಿಳಿಸುವಂತೆ ಇದೊಂದು ದೇಶಪ್ರೇಮದ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಈಗಾಗಲೇ ಚಿತ್ರಕ್ಕೆ ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಶ್ರೀಲಂಕಾ, ಪಾಂಡಿಚೇರಿ, ಬೆಂಗಳೂರು, ಮೈಸೂರು ಹಾಗೂ ಕೊಡೈಕೆನಾಲ್ ನಲ್ಲಿ ಸಿನಿಮಾದ ಬಹುಭಾಗ ಚಿತ್ರೀಕರಣ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಐದು ಹಾಡುಗಳಿದೆ‌. ರಾಹುಲ್, ರಮಾದೇವಿ ಹಾಗೂ ಅಂತೋಣಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ನಾದನ್ ಲೀ ಅವರು ಸಾಹಸ ಸಂಯೋಜಿಸುತ್ತಿರುವ ಆಕ್ಷನ್ ಸನ್ನಿವೇಶಗಳು ಎಲ್ಲರ ಗಮನ ಸೆಳೆಯಲಿದೆ. ಸಾಗರ್ ವಿನೋದ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ರಾಗಿಣಿ ದ್ವಿವೇದಿ, ರಿಶಿಕಾಂತ್, ಶ್ರೀಜಿತ್, ಬಾಬು ಗಣೇಶ್, ಮೆಹಾಲಿ, ಬಸಂತ್, ರವಿ, ನಮಿತ, ರಿಷಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶೇಷಪಾತ್ರದಲ್ಲಿ ಗುರುಪ್ರಸಾದ್(ಪಿ ಯು ಎಸ್) ಹಾಗೂ ಟಿ.ರಾಜೇಂದರ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ