ಬರುತ್ತಿದೆ ‘ಬಂಡೆ ಸಾಹೇಬ್’, ನಿಜ ಪೊಲೀಸ್​ನ ದುರಂತ ಕತೆ

|

Updated on: Mar 22, 2025 | 11:24 PM

Mallikarjun Bande: ಈ ವರೆಗೆ ಹಲವಾರು ಪೊಲೀಸ್ ಕತೆಯುಳ್ಳ ಸಿನಿಮಾಗಳು ಬಂದಿವೆ. ನಿಜ ಪೊಲೀಸ್ ಅಧಿಕಾರಿಗಳ ಬಗ್ಗೆ ಸಿನಿಮಾ ಬಂದಿರುವುದು ಬಹಳ ಕಡಿಮೆ. ಇದೀಗ ರಾಜ್ಯದ ನಿಜ ಪೊಲೀಸ್ ಅಧಿಕಾರಿಯೊಬ್ಬರ ಜೀವನ ಕತೆ ಸಿನಿಮಾ ಆಗುತ್ತಿದೆ. ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾ ಅನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್​ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತಾದ ಸಿನಿಮಾ ನಿರ್ಮಾಣ ಆಗುತ್ತಿದೆ.

ಬರುತ್ತಿದೆ ‘ಬಂಡೆ ಸಾಹೇಬ್’, ನಿಜ ಪೊಲೀಸ್​ನ ದುರಂತ ಕತೆ
Bande Saheba
Follow us on

ಹಲವಾರು ಸಾವಿರಾರು ಪೊಲೀಸ್ ಸಿನಿಮಾಗಳು ಈ ವರೆಗೆ ಬಂದಿವೆ. ಈಗಲೂ ಸಹ ಬರುತ್ತಲೇ ಇವೆ. ಪೊಲೀಸ್ ಕತೆಗಳು ಬಹುತೇಕ ಹಿಟ್ ಆಗುತ್ತವೆ. ಹಾಗಾಗಿಯೇ ನಿರ್ದೇಶಕರಗೆ, ನಾಯಕರಿಗೂ ಸಹ ಪೊಲೀಸ್ ಸಿನಿಮಾಗಳ ಮೇಲೆ ಬಹಳ ಆಸಕ್ತಿ. ಇದೀಗ ಕನ್ನಡದಲ್ಲಿ ಅಪರೂಪದ ಪೊಲೀಸ್ ಸಿನಿಮಾ ಬರುತ್ತಿದೆ. ರೌಡಿಗಳೊಂದಿಗಿನ ಹೋರಾಟದಲ್ಲಿ ದುರಂತ ಅಂತ್ಯ ಕಂಡ ನಿಜ ಪೊಲೀಸ್ ಅಧಿಕಾರಿಯ ಕತೆಯನ್ನು ಸಿನಿಮಾ ಮಾಡಲಾಗುತ್ತಿದೆ. ಸಿನಿಮಾ ಆಗುತ್ತಿರುವುದು ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕತೆ. ಕಳೆದ ಕೆಲವುವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾ ಅನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್​ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತಾದ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾಕ್ಕೆ ‘ಬಂಡೆ ಸಾಹೇಬ್‘ ಎಂದು ಹೆಸರಿಡಲಾಗಿದೆ.

ಮಲ್ಲಿಕಾರ್ಜುನ ಬಂಡೆ ಪಾತ್ರದಲ್ಲಿ ಸಂತೋಷ್ ರಾಮ್ ನಟಿಸಿದ್ದಾರೆ. ಸಂತೋಷ್ ಈ ಮುಂಚೆ ‘ಕೃಷ್ಣ ರುಕ್ಮಿಣಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಟೋನಿ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ‘ಪಂಟ್ರು’ ಸಿನಿಮಾದ ನಾಯಕ ಪಾತ್ರದಲ್ಲಿ ಸಹ ನಟಿಸಿದ್ದಾರೆ. ಇದು ನಾಯಕನಾಗಿ ಅವರಿಗೆ ಎರಡನೇ ಸಿನಿಮಾ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿ. ವೀರಣ್ಣ ಕೊರಳ್ಳಿ, ಬಿರಾದಾರ್,‌ ಸಿಂಬಾ ಮುಂತಾದವರು ಸಿನಿಮಾದ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ.

ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ ಕೊರಳ್ಳಿ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಚಿನ್ಮಯ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ‘ಕುರುಕ್ಷೇತ್ರ’, ‘ದಿ ವಿಲನ್‘ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಇವರು ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ವತಂತ್ರ್ಯ ನಿರ್ದೇಶಕರಾಗಿ ಇದು ಅವರಿಗೆ ಮೊದಲ ಸಿನಿಮಾ.

ಇದನ್ನೂ ಓದಿ:ದರ್ಶನ್ ಪೂಜೆ ಮಾಡಿಸಿದ ಕೇರಳದ ಭಗವತಿ ದೇವಾಲಯದ ಮಹತ್ವವೇನು?

‘ಬಂಡೆ ಸಾಹೇಬ್’ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಚಿತ್ರೀಕರಣವನ್ನು ಗುಲ್ಬರ್ಗ, ಬೆಂಗಳೂರಿನಲ್ಲಿ ಮಾಡಲಾಗಿದೆ. ಎಂ.ಎಸ್ ತ್ಯಾಗರಾಜ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳನ್ನು ಸಿನಿಮಾಕ್ಕಾಗಿ ಚಿತ್ರೀಕರಿಸಲಾಗಿದೆ. ಹೆಸರಾಂತ ಮ್ಯೂಸಿಕ್ ಸಂಸ್ಥೆಯೊಂದು ಹಾಡುಗಳು ಹಕ್ಕು ಖರೀದಿ ಮಾಡಿದ್ದು, ಶೀಘ್ರವೇ ಹಾಡುಗಳ ಬಿಡುಗಡೆ ಆಗಲಿದೆಯಂತೆ. ಸಿನಿಮಾದ ಪ್ರಮುಖಪಾತ್ರದಲ್ಲಿ ನಟಿಸಿರುವ ವೀರಣ್ಣ ಕೊರಳ್ಳಿ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮುಂಜಾನೆ ಮಂಜು ಛಾಯಾಗ್ರಹಣ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ “ಬಂಡೆ ಸಾಹೇಬ್” ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ