ಸ್ಟೈಲಿಷ್ ಪೋಸ್ಟರ್ ಮೂಲಕ ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಿಸಿದ ಯಶ್
Toxic movie: ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕೆ ಸಾಕ್ಷಿಯಾಗಿ ಇದೀಗ ಯಶ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ನೋಡಿದರೆ ಹಾಲಿವುಡ್ನ ಕಲ್ಟ್ ಕ್ಲಾಸಿಕ್ ಗ್ಯಾಂಗ್ಸ್ಸ್ಟರ್ ಸಿನಿಮಾಗಳು ನೆನಪಿಗೆ ಬರುತ್ತಿವೆ. ಪೋಸ್ಟರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ ಯಶ್.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿ ಅಭಿಮಾನಿಗಳು ಸಹ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕೆ ಸಾಕ್ಷಿಯಾಗಿ ಇದೀಗ ಯಶ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ನೋಡಿದರೆ ಹಾಲಿವುಡ್ನ ಕಲ್ಟ್ ಕ್ಲಾಸಿಕ್ ಗ್ಯಾಂಗ್ಸ್ಸ್ಟರ್ ಸಿನಿಮಾಗಳು ನೆನಪಿಗೆ ಬರುತ್ತಿವೆ. ಪೋಸ್ಟರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ ಯಶ್.
ಇಂದು ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಯಶ್ ಬಂದೂಕು ಹಿಡಿದುಕೊಂಡು ನಡೆದು ಬರುತ್ತಿರುವ ದೃಶ್ಯವಿದೆ. ಯಶ್ ಹಿಂದೆ ಬೆಂಕಿ ತುಂಬಿಕೊಂಡಿದೆ. ಎಲ್ಲವನ್ನೂ ವಿಧ್ವಂಸ ಮಾಡಿ ಸ್ಟೈಲ್ ಆಗಿ ನಡೆದು ಬರುತ್ತಿರುವ ಯಶ್ ಕೈಯಲ್ಲಿ ಹಳೆಯ ಮಾದರಿಯ ಮಷಿನ್ ಗನ್ ಒಂದಿದೆ. ಇದರ ಜೊತೆಗೆ ಯಶ್ ಪಾತ್ರದ ಕ್ಲೋಸ್ ಅಪ್ ಫೋಟೊ ಸಹ ಒಂದಿದೆ ಆದರೆ ಆ ಫೋಟೊನಲ್ಲಿ ಯಶ್ನ ಮುಖ ಕಾಣುತ್ತಿಲ್ಲ. ಆದರೆ ಯಶ್ ಧರಿಸಿರುವ ಕಿವಿಯೋಲೆ, ಹೇರ್ ಸ್ಟೈಲ್ ಮತ್ತು ಧರಿಸಿರುವ ಕೌವ್ ಬಾಯ್ ಹ್ಯಾಟ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಅಭಿಮಾನಿಗಳಿಗೆ ಯಶ್ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?
ಪೋಸ್ಟರ್ನಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಒಂದು ವರ್ಷದ ಬಳಿಕ ಅಂದರೆ 2026 ಮಾರ್ಚ್ 19 ರಂದು ಆಗಲಿದೆ. ಯಶ್, ‘ಟಾಕ್ಸಿಕ್’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಪೋಸ್ಟರ್ ವೈರಲ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಯಶ್ ಅವರ ಪೋಸ್ಟ್ ಅನ್ನು ಅಭಿಮಾನಿಗಳು ಷೇರ್ ಮಾಡುತ್ತಿದ್ದಾರೆ. ಕಮೆಂಟ್ಗಳ ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Sat, 22 March 25