ಕನ್ನಡ ಸಿನಿಮಾದ ಹೆಸರುಗಳ ಕುರಿತು ಇತ್ತೀಚೆಗೆ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಮೊದಲಿಗೆ ‘ಉರಿಗೌಡ-ನಂಜೇಗೌಡ’ ಹೆಸರನ್ನು ರಿಜಿಸ್ಟರ್ ಮಾಡಲು ಪ್ರಯತ್ನ ನಡೆಸಿತ್ತು. ಬಳಿಕ ಅದು ವಿಫಲವಾಯ್ತು. ಇತ್ತೀಚೆಗೆ ದರ್ಶನ್ ಪ್ರಕರಣದ ಹಿನ್ನೆಲೆಯಲ್ಲಿ ಹಲವು ಹೆಸರುಗಳ ನೊಂದಣಿಗೆ ಪ್ರಯತ್ನಿಸಲಾಯ್ತು ಆದರೆ ಅದಕ್ಕೆ ಫಿಲಂ ಚೇಂಬರ್ ಅವಕಾಶ ಕೊಟ್ಟಿರಲಿಲ್ಲ. ಇದೀಗ ಕನ್ನಡದ ಒಂದು ಹೊಸ ಸಿನಿಮಾಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡುವಂತೆ ಸಂಸ್ಥೆಯೊಂದು ನೊಟೀಸ್ ಕಳಿಸಿದೆ.
ಕನ್ನಡದಲ್ಲಿ ‘ನೈಸ್ ರೋಡ್’ ಹೆಸರಿನ ಥ್ರಿಲ್ಲರ್ ಸಿನಿಮಾ ಒಂದು ನಿರ್ಮಾಣವಾಗಿದೆ. ಈ ಸಿನಿಮಾದ ಹೆಸರು ಬದಲು ಮಾಡುವಂತೆ ನೈಸ್ ರೋಡ್ ಕಂಪನಿಯವರು ನೊಟೀಸ್ ಕಳಿಸಿದ್ದಾರೆ. ಸಿನಿಮಾದ ಹೆಸರನ್ನು ಬದಲಾವಣೆ ಮಾಡದೇ ಇದ್ದರೆ ದೂರು ನೀಡುವುದಾಗಿ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಲಾಗಿದೆ.
ಸಿನಿಮಾ ಈಗ ಬಿಡುಗಡೆ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ‘ನೈಸ್ ರೋಡ್’ ಎಂಬ ಹೆಸರಿನಿಂದ ಪ್ರಚಾರ ಮಾಡಲಾಗಿದೆ. ಈ ಹಂತದಲ್ಲಿ ಸಿನಿಮಾದ ಹೆಸರು ಬದಲಾವಣೆ ಮಾಡಲು ಬಹಳ ಖರ್ಚು ವೆಚ್ಚಗಳಾಗುತ್ತದೆ. ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ನೈಸ್ ರೋಡ್’ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ ಆದರೆ ಈ ಹಂತದಲ್ಲಿ ಸಿನಿಮಾದ ಹೆಸರು ಬದಲಾವಣೆಗೆ ನೊಟೀಸ್ ನೀಡಲಾಗಿರುವುದು ಸಮಸ್ಯೆ ತಂದಿದೆ ಎಂದಿದೆ ಚಿತ್ರತಂಡ.
ಇದನ್ನೂ ಓದಿ:ಕನ್ನಡ ಸಿನಿಮಾರಂಗದ ರೂಪಾಂತರದ ಕಾಲದಲ್ಲಿ ಬರುತ್ತಿರುವ ‘ರೂಪಾಂತರ’
ಆದರೆ ಈಗ ‘ನೈಸ್ ರೋಡ್’ ಕಂಪನಿಯವರು ಏಕಾಏಕಿ ಬಂದು ಹೆಸರು ಬದಲಾಯಿಸಲೇ ಬೇಕೆಂದು ನೋಟೀಸ್ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಅವರು. ಈ ಸಿನಿಮಾಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಸಿನಿಮಾ ತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡುತರೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ