ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಿಖಿಲ್​-ರೇವತಿ ಜೋಡಿ ನೋಡಿ!

ಬೆಂಗಳೂರು: ಯುವ ನಟ, ರಾಜಕಾರಣಿ ನಿಖಿಲ್​ ಕುಮಾರಸ್ವಾಮಿಗೆ ಈ ಬಾರಿ ವ್ಯಾಲೆಂಟೈನ್ಸ್ ಡೇ ವಿಶೇಷವಾಗಿದೆ. ಅವರ ಬಾಳಲ್ಲಿ ವ್ಯಾಲೆಂಟೈನ್ಸ್ ಆಗಮಿಸಿದ್ದು, ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ಜೋಡಿ ನಿಶ್ಚಿತಾರ್ಥ, ಮದುವೆಗೆ ಭಾರೀ ಸಿದ್ಧತೆಯೂ ನಡೆದಿದೆ. ಈ ಮಧ್ಯೆ ಯುವಜೋಡಿಯೂ ಬಿಂದಾಸ್​ ಆಗಿ ವಿಹರಿಸುತ್ತಿದ್ದಾರೆ. ತಮ್ಮ ಆಪ್ತರ ಕಾರ್ಯಕ್ರಮದಲ್ಲಿ ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಿನ್ನೆ ಭಾನುವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಇಬ್ಬರೂ ಜೊತೆಯಾಗಿ ಫೋಟೊ ತೆಗೆಸಿಕೊಂಡಿದ್ದಾರೆ. ಇದನ್ನೂ ಓದಿ- ಪ್ರೇಮಿಗಳ ದಿನಕ್ಕೆ 3ದಿನ ಮುಂಚೆ […]

ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಿಖಿಲ್​-ರೇವತಿ ಜೋಡಿ ನೋಡಿ!
ಸಾಧು ಶ್ರೀನಾಥ್​

Updated on: Feb 04, 2020 | 11:11 AM

ಬೆಂಗಳೂರು: ಯುವ ನಟ, ರಾಜಕಾರಣಿ ನಿಖಿಲ್​ ಕುಮಾರಸ್ವಾಮಿಗೆ ಈ ಬಾರಿ ವ್ಯಾಲೆಂಟೈನ್ಸ್ ಡೇ ವಿಶೇಷವಾಗಿದೆ. ಅವರ ಬಾಳಲ್ಲಿ ವ್ಯಾಲೆಂಟೈನ್ಸ್ ಆಗಮಿಸಿದ್ದು, ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ಜೋಡಿ ನಿಶ್ಚಿತಾರ್ಥ, ಮದುವೆಗೆ ಭಾರೀ ಸಿದ್ಧತೆಯೂ ನಡೆದಿದೆ.

ಈ ಮಧ್ಯೆ ಯುವಜೋಡಿಯೂ ಬಿಂದಾಸ್​ ಆಗಿ ವಿಹರಿಸುತ್ತಿದ್ದಾರೆ. ತಮ್ಮ ಆಪ್ತರ ಕಾರ್ಯಕ್ರಮದಲ್ಲಿ ನಿಖಿಲ್​ ಕುಮಾರಸ್ವಾಮಿ ಮತ್ತು ರೇವತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಿನ್ನೆ ಭಾನುವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಇಬ್ಬರೂ ಜೊತೆಯಾಗಿ ಫೋಟೊ ತೆಗೆಸಿಕೊಂಡಿದ್ದಾರೆ.

ಇದನ್ನೂ ಓದಿ-
ಪ್ರೇಮಿಗಳ ದಿನಕ್ಕೆ 3ದಿನ ಮುಂಚೆ ನಿಖಿಲ್-ರೇವತಿ ನಿಶ್ಚಿತಾರ್ಥ, ವಿವಾಹ ಏಪ್ರಿಲ್​ನಲ್ಲಿ

ದೊಡ್ಡ ಗೌಡ್ರ ಕುಟುಂಬದಲ್ಲಿ ಸಂಭ್ರಮಕ್ಕೆ ಸಕಲ ಸಿದ್ದತೆ:

ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ, ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಎಂಗೇಜ್​ಮೆಂಟ್​ ನಡೆಯಲಿದೆ. ಬರುವ ಏಪ್ರಿಲ್ ತಿಂಗಳಿನಲ್ಲಿ ವಿವಾಹ ನಡೆಯುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

 

Published On - 1:12 pm, Mon, 3 February 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us