AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ರಾಮ್ ಚರಣ್-ಸುಕುಮಾರ್ ಹೊಸ ಸಿನಿಮಾ

‘ಆರ್​​ಆರ್​​ಆರ್’ ಬಳಿಕ ರಾಮ್ ಚರಣ್​​ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್​​ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಕುತೂಹಲ ಕೆರಳಿಸುವಂತಿದೆ ಪೋಸ್ಟರ್.

ಶುರುವಾಯ್ತು ರಾಮ್ ಚರಣ್-ಸುಕುಮಾರ್ ಹೊಸ ಸಿನಿಮಾ
Ram Charan Chiru
ಮಂಜುನಾಥ ಎಚ್​. ವಿ.
| Edited By: |

Updated on: Nov 01, 2026 | 7:45 PM

Share

ಮುಖ್ಯಾಂಶಗಳು

  • ಶುರುವಾಯ್ತು ರಾಮ್ ಚರಣ್ ಹೊಸ ಸಿನಿಮಾ
  • ರಾಮ್ ಹೊಸ ಸಿನಿಮಾಕ್ಕೆ ಸುಕುಮಾರ್ ನಿರ್ದೇಶಕ
  • ಎರಡನೇ ಬಾರಿ ಕೈಜೋಡಿಸುತ್ತಿರುವ ಜೋಡಿ

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಣ ಗಳಿಸಿತಾದರೂ ಸಿನಿಮಾ ದೊಡ್ಡ ಹಿಟ್​​ ಏನೂ ಆಗಲಿಲ್ಲ. ‘ಆರ್​​ಆರ್​​ಆರ್’ ಬಳಿಕ ರಾಮ್ ಚರಣ್​​ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್​​ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಕುತೂಹಲ ಕೆರಳಿಸುವಂತಿದೆ ಪೋಸ್ಟರ್.

ಇಂದು ಹೈದರಾಬಾದ್​​ನಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೆಗಾಸ್ಟಾರ್ ಚಿರಂಜೀವಿ ಭಾಗಿ ಆಗಿದ್ದರು. ಚಿರಂಜೀವಿ ಅವರೇ ಮಗನ 17ನೇ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ರಾಮ್ ಚರಣ್, ಸುಕುಮಾರ್ ಸೇರಿದಂತೆ ಇನ್ನೂ ಕೆಲವು ತೆಲುಗು ಚಿತ್ರರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ಮಾಲೀಕರು ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಸಿನಿಮಾದ ಪೋಸ್ಟರ್ ಒಂದನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ವಿಭಿನ್ನವಾಗಿಯೂ ಕುತೂಹಲ ಕೆರಳಿಸುವಂತೆಯೂ ಇದೆ. ನವಿಲುಗರಿಯಲ್ಲಿ ರಾಮ್ ಚರಣ್ ಮುಖವನ್ನು ಮಾಡಲಾಗಿದೆ. ಪೋಸ್ಟರ್ ನೋಡಿದರೆ ಶ್ರೀಕೃಷ್ಣನ ಕುರಿತಾದ ಕತೆ ಇದಾಗಿರಬಹುದು ಎಂಬ ಕುತೂಹಲ ಮೂಡುತ್ತಿದೆ. ಸುಕುಮಾರ್ ಅವರು ಈ ಹಿಂದೆ ‘ಪುಷ್ಪ’, ‘ಪುಷ್ಪ 2’, ‘ರಂಗಸ್ಥಲಂ’ ಅಂಥಹಾ ಮಾಸ್ ಕಮರ್ಶಿಯಲ್ ಸಿನಿಮಾಗಳನ್ನಷ್ಟೆ ಮಾಡಿದವರು, ಅವರು ಪೌರಾಣಿಕ ಸಿನಿಮಾ ನಿರ್ದೇಶಿಸುವುದು ಬಹುತೇಕ ಅಸಾಧ್ಯ.

ಇದನ್ನೂ ಓದಿ:ಶ್ರೀಕೃಷ್ಣನ ಪಾತ್ರದಲ್ಲಿ ರಾಮ್ ಚರಣ್? ‘ಲಾಲೋ’ ತೆಲುಗು ರಿಮೇಕ್‌ ಬಗ್ಗೆ ಗಾಸಿಪ್

ಈಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ, ರಾಮ್ ಚರಣ್ ಅವರ ಈ ಸಿನಿಮಾ ಗುಜರಾತಿನ ಸೂಪರ್ ಹಿಟ್ ಸಿನಿಮಾ ‘ಲಾಲ ಕೃಷ್ಣ ಸಾಡೊ’ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಾಮ್ ಚರಣ್, ಕೃಷ್ಣನ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಸುಕುಮಾರ್ ಈ ವರೆಗೂ ತಮ್ಮ ವೃತ್ತಿ ಜೀವನದಲ್ಲಿ ರೀಮೇಕ್ ಸಿನಿಮಾ ಮಾಡಿದವರೇ ಅಲ್ಲ. ಹಾಗಾಗಿ ಸಹಜವಾಗಿಯೇ ಇಂದು ಬಿಡುಗಡೆ ಆಗಿರುವ ಪೋಸ್ಟರ್ ಕುತೂಹಲ ಕೆರಳಿಸಿದೆ.

ಸುಕುಮಾರ್ ಹಾಗೂ ರಾಮ್ ಚರಣ್ ಈ ಹಿಂದೆ ‘ರಂಗಸ್ಥಲಂ’ ಸಿನಿಮಾನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರಾಮ್ ಚರಣ್ ಅವರ ನಟನಾ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸಿಕೊಟ್ಟ ಸಿನಿಮಾ ಅದಾಗಿತ್ತು. ಸತತ ಫ್ಲಾಫ್ ಕೊಟ್ಟಿದ್ದ ರಾಮ್ ಚರಣ್ ಅವರಿಗೆ ‘ರಂಗಸ್ಥಲಂ’ ಮೂಲಕ ಸುಕುಮಾರ್ ಬ್ಲಾಕ್ ಬಸ್ಟರ್ ನೀಡಿದ್ದರು. ಈಗ ಮತ್ತೆ ಸತತ ಸೋಲಿನಲ್ಲಿದ್ದಾರೆ. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದೆ. ಈ ಸಿನಿಮಾನಲ್ಲಿ ‘ಧುರಂಧರ್’ ನಾಯಕಿ ಸಾರಾ ಅರ್ಜುನ್ ನಾಯಕಿಯಾಗಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಎಚ್​. ವಿ.
ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
"ಹಿಟ್ ಅಂಡ್ ರನ್ ಮಾಡಲು ನಾನೇನು ಕುಮಾರಸ್ವಾಮಿನಾ?"
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ