‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡಕ್ಕೆ ನಿರೂಪ್ ಭಂಡಾರಿ ಎಂಟ್ರಿ; ಸ್ವಾಗತ ಕೋರಿದ ದಿಗಂತ್​

ಸಾಲು ಸಾಲು ಕಮರ್ಷಿಯಲ್ ಚಿತ್ರಗಳ ನಡುವೆ ‘ಎಡಗೈ ಅಪಘಾತಕ್ಕೆ ಕಾರಣ’ ರೀತಿಯ ವಿಭಿನ್ನ ರೀತಿಯ ಪರಿಕಲ್ಪನೆ ಇರುವ ಸಿನಿಮಾದ ಕಥೆಯನ್ನು ಕೇಳಿ ನಿರೂಪ್ ಭಂಡಾರಿ ಅವರು ಇಷ್ಟಪಟ್ಟಿದ್ದಾರೆ. ಈ ತಂಡ ಯಂಗ್ ಆ್ಯಂಡ್​ ಎನರ್ಜಿಟಿಕ್ ಆಗಿದೆ. ಅದು ಕೂಡ ಅವರಿಗೆ ಹಿಡಿಸಿದೆ. ಹಾಗಾಗಿ ಅವರು ಈ ಚಿತ್ರತಂಡದಲ್ಲಿ ಭಾಗಿ ಆಗಿದ್ದಾರೆ.

‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡಕ್ಕೆ ನಿರೂಪ್ ಭಂಡಾರಿ ಎಂಟ್ರಿ; ಸ್ವಾಗತ ಕೋರಿದ ದಿಗಂತ್​
ನಿರೂಪ್​ ಭಂಡಾರಿ, ದಿಗಂತ್​ ಮಂಚಾಲೆ

Updated on: Sep 27, 2023 | 5:04 PM

ಸ್ಯಾಂಡಲ್​​ವುಡ್​ನ ಜನಪ್ರಿಯ ನಟ ದಿಗಂತ್​ ಮಂಚಾಲೆ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ(Edagaiye Apaghatakke Karana) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಕಾನ್ಸೆಪ್ಟ್​ ವಿಭಿನ್ನವಾಗಿದೆ. ಆ ಮೂಲಕ ಸಿನಿಪ್ರಿಯರಲ್ಲಿ ಈಗಾಗಲೇ ಕೌತುಕ ಮೂಡಿಸಲಾಗಿದೆ. ಎಗಡೈ ಬಳಸುವ ವ್ಯಕ್ತಿಗಳಿಗೆ ಅನುಕೂಲ ಆಗಲಿ ಎಂದು ಆ.13ರಂದು ‘ವಿಶ್ವ ಎಡಗೈ ದಿನ’ ಪ್ರಯುಕ್ತ ವಿಶೇಷವಾದ ಹೆಲ್ಮೆಟ್​ ಲಾಂಚ್​ ಮಾಡಲಾಗಿತ್ತು. ಎಡಗೈ ಬಳಕೆಯ ಕಷ್ಟ-ನಷ್ಟದ ಕಥೆ ಈ ಸಿನಿಮಾದಲ್ಲಿ ಇದೆ. ಈ ಸಿನಿಮಾ ತಂಡಕ್ಕೆ ಈಗ ಖ್ಯಾತ ನಟ ನಿರೂಪ್ ಭಂಡಾರಿ (Nirup Bhandari) ಎಂಟ್ರಿ ಕೊಟ್ಟಿದ್ದಾರೆ. ‘ರಂಗಿತರಂಗ’ ಸಿನಿಮಾ ಮೂಲಕ ಜನಮನ ಗೆದ್ದ ಅವರು ಈಗ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅವರಿಗೆ ದಿಗಂತ್ ಮಂಚಾಲೆ (Diganth Manchale) ಅವರು ಗ್ರ್ಯಾಂಡ್​ ವೆಲ್​ಕಮ್​ ನೀಡಿದ್ದಾರೆ.

ದಿಗಂತ್​ ಮತ್ತು ನಿರೂಪ್​ ಭಂಡಾರಿ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವುದಕ್ಕೆ ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ. ಇತ್ತೀಚಿಗೆ ಸ್ಟಾರ್ ನಟರು ಒಟ್ಟಿಗೆ ನಟಿಸುವುದು ತೀರ ಅಪರೂಪ ಎಂಬಂತಾಗಿದೆ. ಬಹುತಾರಾಗಣದ ಸಿನಿಮಾಗಳನ್ನು ಮಾಡುವುದು ನಿರ್ಮಾಪಕರಿಗೆ ನಿಜಕ್ಕೂ ಚಾಲೆಂಜಿಂಗ್​. ಹಾಗಿದ್ದರೂ ಕೂಡ ದಿಗಂತ್ ಮತ್ತು ನಿರೂಪ್ ಭಂಡಾರಿ ಅವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟ ಆಗಿದ್ದರಿಂದ ನಿರೂಪ್​ ಅವರು ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಗಂತ್ ಮಂಚಾಲೆ ಜೊತೆ ಧನು ಹರ್ಷ, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಮುಂತಾದವರು ಕೂಡ ನಟಿಸಿದ್ದಾರೆ.

ಸಾಲು ಸಾಲು ಕಮರ್ಷಿಯಲ್ ಚಿತ್ರಗಳ ನಡುವೆ ‘ಎಡಗೈ ಅಪಘಾತಕ್ಕೆ ಕಾರಣ’ ರೀತಿಯ ವಿಭಿನ್ನ ರೀತಿಯ ಪರಿಕಲ್ಪನೆ ಇರುವ ಸಿನಿಮಾದ ಕಥೆಯನ್ನು ಕೇಳಿ ನಿರೂಪ್ ಭಂಡಾರಿ ಅವರು ಇಷ್ಟಪಟ್ಟಿದ್ದಾರೆ. ಈ ತಂಡ ಯಂಗ್ ಆ್ಯಂಡ್​ ಎನರ್ಜಿಟಿಕ್ ಆಗಿದೆ. ಅದು ಕೂಡ ಅವರಿಗೆ ಹಿಡಿಸಿದೆ. ಹಾಗಾಗಿ ತಾವೂ ಸಹ ಈ ಚಿತ್ರತಂಡದಲ್ಲಿ ಭಾಗಿಯಾಗಬೇಕು ಎಂದು ಅವರಿಗೆ ಅನಿಸಿದೆ. ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.

ಇದನ್ನೂ ಓದಿ: ಎಡಗೈ ಬಳಸುವವರಿಗಾಗಿ ಲಾಂಚ್​ ಆಗಲಿದೆ ವಿಶೇಷ ಹೆಲ್ಮೆಟ್​; ಇದು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಇಂಪ್ಯಾಕ್ಟ್​

‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರು ಜೊತೆಯಾಗಿ ‘ಹೈಫನ್ ಪಿಕ್ಚರ್ಸ್’ ಮೂಲಕ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಮರ್ಥ್ ಬಿ. ಕಡಕೊಳ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಡೈರೆಕ್ಟರ್​ ಕ್ಯಾಪ್​ ಧರಿಸಿದ್ದು, ಚೊಚ್ಚಲ ಪ್ರಯತ್ನದಲ್ಲೇ ಅಪರೂಪದ ಕಾನ್ಸೆಪ್ಟ್​ ಆಯ್ಕೆ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us