‘ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳಾಗಿವೆ’; ನಿಶ್ವಿಕಾ ನಾಯ್ಡು

|

Updated on: May 18, 2024 | 10:38 AM

‘ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ’ ಎಂದಿದ್ದಾರೆ ಅವರು.

‘ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳಾಗಿವೆ’; ನಿಶ್ವಿಕಾ ನಾಯ್ಡು
ನಿಶ್ವಿಕಾ
Follow us on

ಕುಟುಂಬದಲ್ಲಿ ಯಾವುದಾದರೂ ದುರ್ಘಟನೆ ನಡೆದಿದ್ದರೆ ಅಥವಾ ವೈಯಕ್ತಿಕವಾಗಿ ನೋವಾಗಿದ್ದರೆ ಸೆಲೆಬ್ರಿಟಿಗಳು ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ. ಈಗ ನಿಶ್ವಿಕಾ ನಾಯ್ಡು (Nishvika Naidu) ಕೂಡ ಇದೇ ರೀತಿಯ ನಿರ್ಧಾರ ಮಾಡಿದ್ದಾರೆ. ಮೇ 19ರಂದು ಅವರ ಬರ್ತ್​ಡೇ. ಅವರು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಬರ್ತ್​ಡೇ ಆಚರಿಸಿಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಅವರು ಕಾರಣ ಕೂಡ ನೀಡಿದ್ದಾರೆ.

‘ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ ಅವರು.

ಇದನ್ನೂ ಓದಿ: ಭಟ್ಟರು ಹೊಡೆದ ‘ಹಲಗಿ’ ಸೂಪರ್ ಹಿಟ್; ಲಕ್ಷ ಲಕ್ಷ ವೀಕ್ಷಣೆ ಪಡೆದ ನಿಶ್ವಿಕಾ ನಾಯ್ಡು ಡ್ಯಾನ್ಸ್ 

‘ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ’ ಎಂದು ನಿಶ್ವಿಕಾ ಕೋರಿಕೊಂಡಿದ್ದಾರೆ.

‘ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೆನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವದಿಸಿ’ ಎಂದು ಕೋರಿದ್ದಾರೆ ನಿಶ್ವಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.