
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic Movie) ಕ್ರೇಜ್ ದೇಶಾದ್ಯಂತ ವ್ಯಾಪಿಸಿದೆ. ಕೇವಲ ಒಂದೇ ದಿನದಲ್ಲಿ ಈ ಚಿತ್ರ ತೆರೆಮೇಲೆ ಬರುತ್ತಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಒಡಿಶಾ ರಾಜ್ಯ ಪೊಲೀಸರು ಸಾರ್ವಜನಿಕರಲ್ಲಿ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಟ ಯಶ್ ಅವರ ಚಿತ್ರದ ಶೀರ್ಷಿಕೆಯನ್ನು ವಿಭಿನ್ನವಾಗಿ ಬಳಸಿಕೊಂಡು ಜಾಗೃತಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.
ಒಡಿಶಾ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ಪೋಸ್ಟರ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ‘ನಿಜವಾದ ರೋಮಾಂಚನವು ನಿಮ್ಮ ಆಸಕ್ತಿಗಳನ್ನು ಜೀವಿಸುವುದರಲ್ಲಿದೆ ಹೊರತು ಮಾದಕ ವ್ಯಸನಕ್ಕೆ ಬಲಿಯಾಗುವುದರಲ್ಲಿ ಅಲ್ಲ‘ ಎಂದು ಸಂದೇಶ ನೀಡಲಾಗಿದೆ. ‘ನಿಕೋಟಿನ್ ಹಾಗೂ ಡ್ರಗ್ಸ್ ವ್ಯಸನ ಬಿಡಿ, ಆರೋಗ್ಯಕರ ಜೀವನ ಆಯ್ಕೆ ಮಾಡಿ’ ಎಂದು ಕೋರಲಾಗಿದೆ.
ಯುವಜನತೆಯನ್ನು ಹೆಚ್ಚಾಗಿ ತಲುಪುವ ಉದ್ದೇಶದಿಂದ ‘ನಶಾ ಮುಕ್ತ ಒಡಿಶಾ ಅಭಿಯಾನ’ದಡಿಯಲ್ಲಿ ಈ ಜಾಗೃತಿ ಮೂಡಿಸಲಾಗಿದೆ. ಪೋಸ್ಟರ್‌ನಲ್ಲಿ ‘Toxic’ ಶೈಲಿಯ ವಿನ್ಯಾಸ ಬಳಸಿ ‘ಚೂಸ್ ರಿಯಲ್ ತ್ರಿಲ್ಸ್, ನಾಟ್ ಟಾಕ್ಸಿಕ್ ಅಡಿಕ್ಷನ್’ ಎಂದು ಬರೆಯಲಾಗಿದೆ. ಯಶ್ ಸಿನಿಮಾ ಕ್ರೇಜ್ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಪೋಲಿಸರ ಸೃಜನಶೀಲತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Real excitement comes from living your passion, not losing yourself to addiction.
Choose hobbies. Choose health.
Choose a drug-free life.#SayNoToDrugs #DrugFreeOdisha #ToxicTheMovie #Toxic #ToxicAddiction@CMO_Odisha @DGPOdisha @narcoticsbureau @IPR_Odisha @cpbbsrctc… pic.twitter.com/RyJPD65s1T— Odisha Police (@odisha_police) August 24, 2026
ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ದ್ರವ್ಯಗಳ ಜಾಲಕ್ಕೆ ಬೀಳುತ್ತಿರುವುದು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಪೊಲೀಸರು ಸಿನಿಮಾಗಳ ಪ್ರಸಿದ್ಧಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಒಡಿಶಾ ಪೊಲೀಸರ ನವೀನ ಪ್ರಯತ್ನವು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಿನಿಮಾ ಪ್ರಿಯರು ಹಾಗೂ ಅಭಿಮಾನಿಗಳು ಈ ಜಾಗೃತಿ ಅಭಿಯಾನವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಧಮಾಕ; ಬಿಡುಗಡೆಗೆ ಮುನ್ನವೇ 30 ಕೋಟಿ ದಾಟಿದ ಯಶ್ ಸಿನಿಮಾ ಗಳಿಕೆ
‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಐವರು ನಾಯಕಿಯರು.ಈ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟು ಮೂಡಿದೆ.
ಪ್ರಶ್ನೆ: ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಅವಧಿ ಎಷ್ಟು?
ಉತ್ತರ: ಮೂರು ಗಂಟೆ 14 ನಿಮಿಷ
ಪ್ರಶ್ನೆ: ಯಶ್ ಪಾತ್ರದ ಹೆಸರೇನು?
ಉತ್ತರ: ರಾಯ ಹಾಗೂ ಟಿಕೆಟ್
ಪ್ರಶ್ನೆ: ಟಾಕ್ಸಿಕ್ ಸಿನಿಮಾ ನಿರ್ದೇಶಕರು ಯಾರು?
ಉತ್ತರ: ಗೀತು ಮೋಹನ್ದಾಸ್
Published On - 7:03 am, Tue, 25 August 26