AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್ ಧಮಾಕ; ಬಿಡುಗಡೆಗೆ ಮುನ್ನವೇ 30 ಕೋಟಿ ದಾಟಿದ ಯಶ್ ಸಿನಿಮಾ ಗಳಿಕೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ೨ ದಿನ ಮುನ್ನವೇ ಭಾರತದಲ್ಲಿ ೩೦ ಕೋಟಿ ರೂಪಾಯಿಗಳಿಗೂ ಹೆಚ್ಚು ಅಡ್ವಾನ್ಸ್ ಬುಕಿಂಗ್ ಗಳಿಸಿದೆ. ಕನ್ನಡ ಮತ್ತು ಹಿಂದಿಯಲ್ಲಿ ಧೂಳೆಬ್ಬಿಸುತ್ತಿರುವ ಈ ചിത്രം ಮೊದಲ ದಿನವೇ ಜಾಗತಿಕವಾಗಿ ೧೦೦ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿದೆ.

'ಟಾಕ್ಸಿಕ್' ಅಡ್ವಾನ್ಸ್ ಬುಕಿಂಗ್ ಧಮಾಕ; ಬಿಡುಗಡೆಗೆ ಮುನ್ನವೇ 30 ಕೋಟಿ ದಾಟಿದ ಯಶ್ ಸಿನಿಮಾ ಗಳಿಕೆ
ಟಾಕ್ಸಿಕ್
ರಾಜೇಶ್ ದುಗ್ಗುಮನೆ
|

Updated on:Aug 24, 2026 | 3:08 PM

Share

ಮುಖ್ಯಾಂಶಗಳು

  • 'ಟಾಕ್ಸಿಕ್' ಅಡ್ವಾನ್ಸ್ ಬುಕಿಂಗ್ ಸುನಾಮಿ
  • 30 ಕೋಟಿ ಗಡಿ ದಾಟಿದ ಯಶ್ ಸಿನಿಮಾ
  • ಕನ್ನಡ-ಹಿಂದಿಯಲ್ಲಿ ಕಲೆಕ್ಷನ್ ಧಮಾಕ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಅಡ್ವಾನ್ಸ್ ಬುಕಿಂಗ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ. ಆಗಸ್ಟ್ 26ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ಸಿನಿಮಾ, ‘ಎ’ ಸರ್ಟಿಫಿಕೇಟ್ ಪಡೆದಿದ್ದರೂ ಸಹ ಬಿಡುಗಡೆಗೆ ಎರಡು ದಿನ ಬಾಕಿ ಇರುವಂತೆಯೇ ದೇಶೀಯವಾಗಿ 30 ಕೋಟಿ ರೂಪಾಯಿಗಳ ಅಡ್ವಾನ್ಸ್ ಬುಕಿಂಗ್ ಗಡಿ ದಾಟಿದೆ.

ಅಡ್ವಾನ್ಸ್ ಟಿಕೆಟ್ ಮಾರಾಟದಿಂದಲೇ ಭಾರತದಾದ್ಯಂತ 32.52 ಕೋಟಿ ರೂಪಾಯಿಗೆ ತಲುಪಿದೆ ಎಂದು ವರದಿ ಆಗಿದೆ. ಕನ್ನಡ ಮತ್ತು ಹಿಂದಿ ಆವೃತ್ತಿಗಳಲ್ಲಿ ಹೆಚ್ಚಿನ ಕಲೆಕ್ಷನ್ ಆಗಿದೆ. ಆದರೆ, ತೆಲುಗು ಬುಕಿಂಗ್ ಇನ್ನೂ ಆರಂಭ ಆಗಿಲ್ಲ. ಕನ್ನಡ 2D ಆವೃತ್ತಿಯೊಂದರಲ್ಲೇ 1,648 ಶೋಗಳಿಂದ 2.55 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಬೆಂಗಳೂರಿನಲ್ಲೇ ಗರಿಷ್ಠ 8.83 ಕೋಟಿ ರೂಪಾಯಿ ಸಂಗ್ರಹವಾಗಿದೆ. ಹಿಂದಿ ಡಬ್ಬಿಂಗ್ ಆವೃತ್ತಿಯ 2D ಫಾರ್ಮ್ಯಾಟ್‌ನಲ್ಲಿ 3.18 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಉಳಿದಂತೆ ತಮಿಳು ಆವೃತ್ತಿಯಿಂದ 42.32 ಲಕ್ಷ, ಮಲಯಾಳಂನಿಂದ 18.36 ಲಕ್ಷ ಹಾಗೂ ತೆಲುಗು ಆವೃತ್ತಿಯಿಂದ 13 ಲಕ್ಷ ರೂಪಾಯಿಗೂ ಹೆಚ್ಚು ಅಡ್ವಾನ್ಸ್ ಬುಕಿಂಗ್ ಸಂಗ್ರಹವಾಗಿದೆ. ಚಿತ್ರದ ಕಲೆಕ್ಷನ್ ಮುನ್ಸೂಚನೆ ನೋಡಿದರೆ, ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ 100ರಿಂದ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಯಶ್‌ ಭೇಟಿಮಾಡಿದ ಬಳಿಕ ಅನುಪಮ್ ಖೇರ್ ಫುಲ್ ಖುಷ್; ‘ಟಾಕ್ಸಿಕ್’ ಚಿತ್ರಕ್ಕೆ ಶುಭಹಾರೈಕೆ

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಕೂಡ ಕಥೆ ಬರೆದಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ತಾರಾಗಣದಲ್ಲಿರುವ ಈ ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Mon, 24 August 26

Follow Us
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ