ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ಗೆ ಮುಹೂರ್ತ; ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿರಲಿದೆ ಸಿನಿಮಾ
ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪೂತ್ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರ ಕ್ರೈಮ್ ಥ್ರಿಲ್ಲರ್ ಶೈಲಿಯನ್ನು ಹೊಂದಿದೆ. ‘ಶ್ರೀ ಗುರು ಚಿತ್ರಾಲಯ’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕ ಓಂ ಪ್ರಕಾಶ್ (Om Prakash) ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಲಾಕಪ್ಡೆತ್’, ‘ಎಕೆ 47’, ‘ಹುಬ್ಬಳ್ಳಿ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಗಮನ ಸೆಳೆದಿದ್ದಾರೆ. ಈಗ ಅವರು ‘ಫೀನಿಕ್ಸ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಓಂ ಪ್ರಕಾಶ್ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಿದ್ದರು. ಈಗ ಸಿನಿಮಾದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ. ಹಲವು ಸೆಲೆಬ್ರಿಟಿಗಳು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದಾರೆ.
‘ಫೀನಿಕ್ಸ್’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಎನ್. ಸೋಮೇಶ್ವರ್ ಅವರು ಜ್ಯೋತಿ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ಕೊಟ್ಟರು. ಆರಂಭ ಫಲಕವನ್ನು ಬೇಬಿ ಕೃಷಿ ತೋರಿದರು. ಎ.ಎಂ. ಉಮೇಶ್ ರೆಡ್ಡಿ ಅವರು ಕ್ಯಾಮೆರಾಗೆ ಚಾಲನೆ ಕೊಟ್ಟರು. ಇದೊಂದು ಮಹಿಳಾ ಪ್ರಧಾನ ಸಿನಿಮಾ ಎಂಬುದನ್ನು ನಿರ್ದೇಶಕರು ತಿಳಿಸಿದ್ದಾರೆ. ಇದು ಸ್ವಮೇಕ್ ಚಿತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಓಂ ಪ್ರಕಾಶ್.
ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪೂತ್ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರ ಕ್ರೈಮ್ ಥ್ರಿಲ್ಲರ್ ಶೈಲಿಯನ್ನು ಹೊಂದಿದೆ. ‘ಶ್ರೀ ಗುರು ಚಿತ್ರಾಲಯ’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ತ್ರಿಶಾ ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ವೆಂಕಟ್ ಗೌಡ ‘ಫೀನಿಕ್ಸ್’ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ವಿದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರೀಯಾದಲ್ಲಿ ಶೂಟಿಂಗ್ ಮಾಡಲು ಪ್ಲಾನ್ ಮಾಡಲಾಗಿದೆ. ಓಂ ಪ್ರಕಾಶ್ ನಿರ್ದೇಶನದ 49ನೇ ಸಿನಿಮಾ ಇದು ಅನ್ನೋದು ವಿಶೇಷ.
ಸಿನಿಮಾದ ಕಥೆ ಕೇಳಿ ನಿಮಿಕಾ ರತ್ನಾಕರ್ ಖುಷಿಪಟ್ಟಿದ್ದಾರೆ. ಕೃತಿಕಾ ಲೋಗೊ ಅವರು ಈ ಮೊದಲು ಓಂಪ್ರಕಾಶ್ ರಾವ್ ಜೊತೆ ಕೆಲಸ ಮಾಡಿದ್ದಾರೆ. ಇದು ಓಂಪ್ರಕಾಶ್ ರಾವ್ ಜೊತೆ ಅವರಿಗೆ ಮೂರನೇ ಸಿನಿಮಾ. 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅನುಭವ ಇರುವ ಭಾಸ್ಕರ್ ಶೆಟ್ಟಿಗೆ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಸಿಕ್ಕಿದೆ.
ಇದನ್ನೂ ಓದಿ: ಓಂ ಪ್ರಕಾಶ್ ರಾವ್ ಕಂಬ್ಯಾಕ್ ಸಿನಿಮಾದಲ್ಲಿ ಮೂವರು ನಾಯಕಿಯರು ‘ಫೀನಿಕ್ಸ್’ ಚಿತ್ರದಲ್ಲಿ ಕಾಕ್ರೋಜ್ ಸುಧಿ, ರೋಬೊ ಗಣೇಶ್, ವಿನೋದ್ ಕಿನ್ನಿ ಆರ್ಯನ್ ಮೊದಲಾದವರು ನಟಿಸಿದ್ದಾರೆ. ಸಾಧುಕೋಕಿಲ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಲಕ್ಷ್ಮಣ್ ರೆಡ್ಡಿ ಸಂಕಲನ, ರವಿಕುಮಾರ್ ಛಾಯಾಗ್ರಹಣ, ವಿಜಯನ್ ಸಾಹಸ ನಿರ್ದೇಶನ ಹಾಗೂ ರಾಮಚಂದ್ರ ಅವರ ನಿರ್ಮಾಣ ನಿರ್ವಹಣೆ ‘ಫೀನಿಕ್ಸ್’ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 27 October 23