ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್; ಬೆಂಗಳೂರಿನ ಹೊರ ವಲಯದಲ್ಲಿ ವಾಸವಾಗಿದ್ದರು

|

Updated on: Apr 16, 2024 | 3:01 PM

ದ್ವಾರಕೀಶ್ ಅವರು ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಲ್ಲಿ ಮನೆ ಕಟ್ಟಿದ್ದರು. ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಸರ್ಕಾರ ಈ ಸೈಟ್​ನ ದ್ವಾರಕೀಶ್ ಅವರಿಗೆ ಈ ಮೊದಲು ನೀಡಿತ್ತು. ಮನೆ ತುಂಬಾನೇ ದೊಡ್ಡಾಗಿತ್ತು. ಇರೋ 3 ಜನಕ್ಕೆ ಇಷ್ಟು ದೊಡ್ಡ ಮನೆ ಏಕೆ ಎಂದು ಅವರು ಇದನ್ನು ಮಾರಾಟ ಮಾಡಿದ್ದರು. ಇದನ್ನು ರಿಷಬ್ ಅವರು ಖರೀದಿ ಮಾಡಿದ್ದರು.

ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್; ಬೆಂಗಳೂರಿನ ಹೊರ ವಲಯದಲ್ಲಿ ವಾಸವಾಗಿದ್ದರು
ದ್ವಾರಕೀಶ್-ರಿಷಬ್
Follow us on

ದ್ವಾರಕೀಶ್ (Dwarakish) ಅವರು ಇಂದು (ಏಪ್ರಿಲ್ 16) ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಿ ಅನೇಕರು ಟ್ವೀಟ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ತಮ್ಮ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು. 10 ಕೋಟಿ ರೂಪಾಯಿಗೆ ಈ ಮನೆಯನ್ನು ರಿಷಬ್ ಖರೀದಿ ಮಾಡಿದ್ದರು ಎಂದು ವರದಿ ಆಗಿತ್ತು.

ಮನೆ ಮಾರಿದ್ದೇಕೆ?

ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಲ್ಲಿ ದ್ವಾರಕೀಶ್ ಅವರು ಮನೆ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಸರ್ಕಾರ ಈ ಸೈಟ್​ನ ದ್ವಾರಕೀಶ್ ಅವರಿಗೆ ನೀಡಿತ್ತು. ಮನೆ ತುಂಬಾನೇ ದೊಡ್ಡಾಗಿತ್ತು. ಇರೋ ಮೂರು ಜನಕ್ಕೆ ಇಷ್ಟು ದೊಡ್ಡ ಮನೆ ಏಕೆ ಎಂದು ಅವರು ಇದನ್ನು ಮಾರಾಟ ಮಾಡಿದ್ದರು. ಜೊತೆಗೆ ಈ ಮನೆ ನಿರ್ಮಾಣ ಮಾಡುವಾಗ ಲೋನ್ ಮಾಡಲಾಗಿತ್ತು. ಇತರ ಸಾಲಗಳು ಕೂಡ ಇತ್ತು. ಹೀಗಾಗಿ ಅವರು ಮನೆ ಮಾರಿದ್ದರು.

ಎಷ್ಟು ಕೋಟಿ ರೂಪಾಯಿ?

2021ರಲ್ಲಿ ದ್ವಾರಕೀಶ್ ಮನೆಯನ್ನು ರಿಷಬ್ ಶೆಟ್ಟಿ ಖರೀದಿ ಮಾಡಿದ್ದರು. ಅವರು ಬರೋಬ್ಬರಿ 10 ಕೋಟಿ ರೂಪಾಯಿ ಕೊಟ್ಟು ಇದನ್ನು ಖರೀದಿ ಮಾಡಿದ್ದರು ಎಂದು ವರದಿ ಆಗಿತ್ತು. ಆದರೆ, ಎಷ್ಟು ಕೋಟಿ ರೂಪಾಯಿಗೆ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ರಿಷಬ್ ಆಗಲೀ, ದ್ವಾರಕೀಶ್ ಆಗಲಿ ಮಾತನಾಡಿರಲಿಲ್ಲ.

ಇದನ್ನೂ ಓದಿ: ವಾಶ್​ರೂಂನಲ್ಲಿ ದ್ವಾರಕೀಶ್​ಗೆ ಡೇಟ್ಸ್ ಕೊಟ್ಟಿದ್ದ ರಜನಿಕಾಂತ್; ಇಲ್ಲಿದೆ ಮಜವಾದ ಪ್ರಸಂಗ

ಎಲ್ಲಿ ವಾಸ?

ದ್ವಾರಕೀಶ್ ಅವರು ಮಗ ಯೋಗಿ ಜೊತೆ ವಾಸವಾಗಿದ್ದರು. ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದಲ್ಲಿ ದ್ವಾರಕೀಶ್ ವಾಸಿಸುತ್ತಿದ್ದರು. ಇಂದು ದ್ವಾರಕೀಶ್ ನಿವಾಸದಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದೆ. ಬುಧವಾರ (ಏಪ್ರಿಲ್ 17) ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗುತ್ತದೆ. 11:30ರ ಬಳಿಕ ಚಾಮರಾಜಪೇಟೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ