ಪುನೀತ್ ರಾಜ್ಕುಮಾರ್ ಅವರ ಜನ್ಮದಿನ ಬಂದೇ ಬಿಟ್ಟಿದೆ. ಮಾರ್ಚ್ 17ರಂದು ಪುನೀತ್ ಬರ್ತ್ಡೇನ ಫ್ಯಾನ್ಸ್ ಸಂಭ್ರಮದಿಂದ ಆಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಮಾಡಿದ ಸಾಧನೆಯು ತುಂಬಾನೇ ದೊಡ್ಡದು. ಅವರ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅವರು ಇಲ್ಲ ಎಂಬ ಸತ್ಯವನ್ನು ಯಾರೂ ಒಪ್ಪಿಕೊಳ್ಳಲು ರೆಡಿ ಇಲ್ಲ. ಈಗ ಅವರ ಜನ್ಮದಿನದ ಸಂಭ್ರಮದ ಸಂದರ್ಭದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಆ ಪೈಕಿ ಒಂದು ವಿಡಿಯೋ ಗಮನ ಸೆಳೆದಿದೆ.
ಪುನೀತ್ ರಾಜ್ಕುಮಾರ್ ಅವರು ಕಪ್ಪಿದ್ದಾರೆ ಎಂದು ಕೆಲವರು ಹೀಯಾಳಿಸಿದ್ದು ಇದೆ. ಆದರೆ, ಇದನ್ನು ರಾಜ್ಕುಮಾರ್ ಅವರು ಬೇರೆಯದೇ ರೀತಿಯಲ್ಲಿ ಅರ್ಥೈಸಿದ್ದರು. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿ ಗಮನ ಸೆಳೆದಿದ್ದರು. ಈ ಬಗ್ಗೆ ಪಾರ್ವತಮ್ಮ ಅವರು ಈ ಮೊದಲು ಮಾತನಾಡಿದ್ದರು.
ಪುನೀತ್ ತಾಯಿ ಪಾರ್ವತಮ್ಮ ಕಾರ್ಯಕ್ರಮ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ರಾಮ ಕೃಷ್ಣ ಎಲ್ಲರೂ ಕಪ್ಪು. ಅದಕ್ಕೆ ಪುನೀತ್ ಕೂಡ ಕಪ್ಪಗೆ ಹುಟ್ಟಿದ್ದಾನೆ. ಅವನು ದೇವರು. ಏನು ಅಂದುಕೋಬೇಡ ಎಂದು ರಾಜ್ಕುಮಾರ್ ನನ್ನ ಸಮಾಧಾನ ಮಾಡಿದ್ದರು’ ಎಂಬುದಾಗಿ ಪಾರ್ವತಮ್ಮ ಹೇಳಿದ್ದರು. ‘ಕಪ್ಪು ಕಸ್ತೂರಿ, ಕೆಂಪು ಕಿಸ್ಬಾಯಿ. ನನಗೇನೋ ಮಗನ ಬಣ್ಣ ಸಾಕಷ್ಟು ಇಷ್ಟ ಆಯ್ತು’ ಎಂಬುದು ರಾಜ್ಕುಮಾರ್ ಅಭಿಪ್ರಾಯ ಆಗಿತ್ತು.
ಇದನ್ನೂ ಓದಿ:ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್ ರಾಜ್ಕುಮಾರ್, ಕಾರಣ?
ಪುನೀತ್ ರಾಜ್ಕುಮಾರ್ ಅವರನ್ನು ಬಾಲ ಕಲಾವಿದನಾಗಿ ಎಲ್ಲರೂ ಆರಂಭದಲ್ಲಿ ಒಪ್ಪಿಕೊಂಡರು. ಆ ಬಳಿಕ ಪುನೀತ್ ರಾಜ್ಕುಮಾರ್ ‘ಅಪ್ಪು’ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಮಯದಲ್ಲಿ ಅವರು ಮಾಡಿದ ಮೋಡಿ ತುಂಬಾನೇ ದೊಡ್ಡದು. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ.
ಪುನೀತ್ ಜನ್ಮದಿನದ ಪ್ರಯುಕ್ತ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿದೆ. ಪುನೀತ್ ಅವರನ್ನು ಈ ಮೂಲಕ ನೆನಪಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಸಿನಿಮಾನ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ