‘ಪವಿತ್ರಾ ಗೌಡ ಸಲುವಾಗಿ ಹರಕೆ ಹೊತ್ತಿದ್ದೇನೆ’: ಮಾಜಿ ಪತಿ ಸಂಜಯ್ ಸಿಂಗ್

ಕೊಲೆ ಆರೋಪಿ ಪವಿತ್ರಾ ಗೌಡ ಅವರು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. 6 ತಿಂಗಳಿಗೂ ಅಧಿಕ ಕಾಲ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸಿದ್ದಾರೆ. ಈಗ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಟಿವಿ9 ಜೊತೆ ಮಾತನಾಡಿದ್ದಾರೆ. ಪವಿತ್ರಾ ಗೌಡ ಹಾಗೂ ಪುತ್ರಿ ಖುಷಿ ಗೌಡ ಬಗ್ಗೆ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ಪವಿತ್ರಾ ಗೌಡ ಸಲುವಾಗಿ ಹರಕೆ ಹೊತ್ತಿದ್ದೇನೆ’: ಮಾಜಿ ಪತಿ ಸಂಜಯ್ ಸಿಂಗ್
Sanjay Singh Darshan Pavithra Gowda
Edited By:

Updated on: Dec 17, 2024 | 3:40 PM

ಪವಿತ್ರಾ ಗೌಡ ಅವರಿಗೆ ಈ ಸಂಕಷ್ಟದ ಕಾಲ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ1 ಆಗಿರುವ ಅವರಿಗೆ ಸದ್ಯಕ್ಕೆ ಜಾಮೀನು ಸಿಕ್ಕಿದೆ. ಇಂದು (ಡಿಸೆಂಬರ್​ 17) ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದಿದ್ದಾರೆ. ಕಾಕತಾಳೀಯ ಎಂಬಂತೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಕೂಡ ಬೆಂಗಳೂರಿಗೆ ಬಂದಿದ್ದು, ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಸಂಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಪತ್ನಿ ಸಲುವಾಗಿ ತಾವು ಹರಕೆ ಹೊತ್ತಿರುವುದಾಗಿ ತಿಳಿಸಿದ್ದಾರೆ.

‘ನಾನು ಬೆಂಗಳೂರಿಗೆ ಬಂದಿರುವುದು ಪವಿತ್ರಾ ಗೌಡ ಮೇಲಿನ ಒಲಿವಿನಿಂದ. ಬೇರೆ ಕೆಲಸದ ಮೇಲೆ ನಾನು ಬಂದಿದ್ದೇನೆ. ಆದರೆ ವಿಮಾನ ನಿಲ್ದಾಣಕ್ಕೆ ಬಂದಾಗ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ ಎಂಬುದು ತಿಳಿಯಿತು. ಆ ದೇವರೇ ನನ್ನನ್ನು ಈ ಸಮಯದಲ್ಲಿ ಇಲ್ಲಿಗೆ ಕಳಿಸಿರುವುದು. ಇದನ್ನೆಲ್ಲ ಮಾಡಲು ನನಗೆ ಇಷ್ಟ ಇಲ್ಲ. ಮಾಧ್ಯಮದವರು ನನ್ನನ್ನು ಹುಡುಕಿಕೊಂಡು ಬರುತ್ತಾರೆ’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Sanjay Singh on Pavitra Gowda: ಪವಿತ್ರಾಗೌಡ ರಿಲೀಸ್ ದಿನವೇ ಮಾಜಿ ಪತಿ ಸಂಜಯ್ ಸಿಂಗ್ ಶಾಕಿಂಗ್ ರಿಯಾಕ್ಷನ್| #TV9D

‘ಮಾಜಿ ಪತಿ ಎಂಬ ಶಬ್ದಿ ಬಿಡಿ. ಪತಿ ಅಲ್ವಾ.. ಹಾಗಾಗಿ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದ್ದಕ್ಕೆ ಸಂತೋಷ ಆಗುತ್ತದೆ. ಹೇಗಾದರೂ ಅವರು ಹೊರಗೆ ಬರಲಿ ಅಂತ ನಾನು ಪ್ರತಿ ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಪವಿತ್ರಾ ಗೌಡ ಈ ಕೇಸ್​ನಿಂದ ಶಾಶ್ವತವಾಗಿ ಹೊರಗೆ ಬರಲಿ ಅಂತ ಹರಕೆ ಹೊತ್ತುಕೊಂಡಿದ್ದೇನೆ’ ಎಂದಿದ್ದಾರೆ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್​.

ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ

2007ರ ಜುಲೈ ತಿಂಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಮದುವೆ ಆಗಿತ್ತು. ಈ ಜೋಡಿಗೆ ಹೆಣ್ಣು ಮಗು ಜನಿಸಿತ್ತು. 2013ರ ಆಗಸ್ಟ್​ ತಿಂಗಳಲ್ಲಿ ಅವರು ವಿಚ್ಛೇದನ ಪಡೆದರು. ‘ಟೈಮಿಂಗ್ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ನಮ್ಮ ವಿಚ್ಛೇದನ ಆಯಿತು. ಅದನ್ನು ಹೊರತುಪಡಿಸಿ ಬೇರೆ ಏನೂ ಕಾರಣ ಇರಲಿಲ್ಲ’ ಎಂದು ಸಂಜಯ್ ಸಿಂಗ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More
Loading...
Unable to load recommendations.
Follow Us