ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ಪವಿತ್ರಾ ಗೌಡ, ವಿಶೇಷ ಪೂಜೆ

|

Updated on: Apr 15, 2025 | 5:23 PM

Pavithra Gowda: ಕೆಲ ದಿನಗಳ ಹಿಂದಷ್ಟೆ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರಿನ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದರು. ಇಂದು (ಏಪ್ರಿಲ್ 15) ದರ್ಶನ್​ರ ಮಾಜಿ ಗೆಳತಿ ಪವಿತ್ರಾ ಗೌಡ ಅವರು ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ನೆರವೇರಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಾಗಿನಿಂದ ಹಲವು ದೇವಾಲಯಗಳಿಗೆ ಪವಿತ್ರಾ ಭೇಟಿ ನೀಡಿದ್ದಾರೆ.

ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ಪವಿತ್ರಾ ಗೌಡ, ವಿಶೇಷ ಪೂಜೆ
Pavithra Gowda
Follow us on

ಕೆಲ ದಿನಗಳ ಹಿಂದಷ್ಟೆ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ಬೆಂಗಳೂರಿನ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ಹರಕೆಗಳನ್ನು ತೀರಿಸಿದ್ದರು. ವಿಜಯಲಕ್ಷ್ಮಿ ಅವರು ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ ವಿಡಿಯೋಗಳು ವೈರಲ್ ಆಗಿದ್ದವು. ಪತಿ ದರ್ಶನ್ ಮತ್ತು ಪುತ್ರ ವಿನೀಶ್​ ಒಳಿತಿಗಾಗಿ ವಿಜಯಲಕ್ಷ್ಮಿ ದರ್ಶನ್ ಅವರು ದೇವರಲ್ಲಿ ಮನವಿ ಮಾಡಿದ್ದರು. ಇಂದು ಪವಿತ್ರಾ ಗೌಡ ಅವರು ಬೆಂಗಳೂರಿನ ಮತ್ತೊಂದು ಶಕ್ತಿಯುತ ದೇವಾಲಯವಾದ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಅತ್ತ ವಿಜಯಲಕ್ಷ್ಮಿ ಅವರು ಒಂದರ ಹಿಂದೊಂದರಂತೆ ದೇವಾಲಯಗಳ ದರ್ಶನಗಳನ್ನು ಮಾಡುತ್ತಿದ್ದರೆ ಇತ್ತ ಪವಿತ್ರಾ ಗೌಡ ಸಹ ಒಂದರ ಮೇಲೊಂದರಂತೆ ದೇವಾಲಯಗಳ ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ನಿಮಿಷಾಂಭ ದೇವಾಲಯಕ್ಕೆ ಪವಿತ್ರಾ ಗೌಡ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ಈಗ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಬನಶಂಕರಿಗೆ ಮಡಿಲಕ್ಕಿ ತುಂಬಿದ್ದಾರೆ.

ಪವಿತ್ರಾ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಆರು ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದಾಗಿನಿಂದಲೂ ಹಲವು ದೇವಾಲಯಗಳಿಗೆ ಪವಿತ್ರಾ ಗೌಡ ಭೇಟಿ ನೀಡುತ್ತಲೇ ಇದ್ದಾರೆ. ಜಾಮೀನಿನ ಹೊರಬಂದ ಬಳಿಕ ಕೆಲ ದಿನಗಳಲ್ಲೇ ದೆಹಲಿಗೆ ತೆರಳಿದ್ದ ಪವಿತ್ರಾ ಅಲ್ಲಿಯೂ ಕೆಲ ದೇವಾಲಯಗಳಿಗೆ ಭೇಟಿ ನೀಡಿದ್ದರು. ಕುಂಭ ಮೇಳಕ್ಕೂ ಹೋಗಿ ಬಂದರು. ಕೆಲ ದಿನಗಳ ಹಿಂದೆ ನಿಮಿಷಾಂಭ ದೇವಾಲಯಕ್ಕೂ ಹೋಗಿ ಬಂದರು.

ಇದನ್ನೂ ಓದಿ:ಉಮಾಪತಿಗೆ ಎಚ್ಚರಿಕೆ ಕೊಟ್ಟರಾ ದರ್ಶನ್? ನಿರ್ಮಾಪಕರ ಮಾತಿನ ಅರ್ಥವೇನು?

ಜೈಲಿಂದ ಹೊರಬಂದ ಬಳಿಕ ತಮ್ಮ ರೆಡ್ ಕಾರ್ಪೆಟ್ ಫ್ಯಾಷನ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡಿರುವ ಪವಿತ್ರಾ ಗೌಡ ಉದ್ಯಮದ ಮೇಲೆ ಗಮನ ಹರಿಸಿದ್ದಾರೆ. ಇದರ ಜೊತೆಗೆ ಪ್ರಕರಣದ ವಿಚಾರಣೆಗೂ ಸಹ ತಪ್ಪದೆ ಹಾಜರಾಗುತ್ತಲೇ ಇದ್ದಾರೆ.

ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ದರ್ಶನ್ ಜೈಲಿನಲ್ಲಿದ್ದಾಗಲೂ, ಜೈಲಿಂದ ಹೊರಬಂದ ಬಳಿಕವೂ ಸಹ ಸಾಲು-ಸಾಲಾಗಿ ದೇವಾಲಯಗಳ ಭೇಟಿ ಮಾಡುತ್ತಲೇ ಇದ್ದಾರೆ. ರಾಜ್ಯದ ಹಾಗೂ ಪರರಾಜ್ಯದ ದೇವಾಲಯಗಳಿಗೂ ಸಹ ವಿಜಯಲಕ್ಷ್ಮಿ ಹೋಗಿ ಬರುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ದರ್ಶನ್, ಧನ್ವೀರ್ ಮತ್ತು ದರ್ಶನ್ ಪುತ್ರ ನಿವೀಶ್ ಅವರು ಕೇರಳದ ಬಹು ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದರು. ಆ ದೇವಾಲಯ ಶತ್ರುನಾಶ ಪೂಜೆಗೆ ಪ್ರಸಿದ್ಧಿ ಪಡೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ