ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕನ್ನಡ ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿ ಮಾಡಿರುವುದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಜೊತೆ ಅಯ್ಯೋ ಶ್ರದ್ಧಾ (Aiyyo Shraddha) ಅಲಿಯಾಸ್ ಶ್ರದ್ಧಾ ಜೈನ್ ಕೂಡ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜಭವನದಲ್ಲಿ ಫೆಬ್ರವರಿ 12ರ ಸಂಜೆ ಈ ಭೇಟಿ ನಡೆಯಿತು. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಕ್ರೀಡಾಲೋಕದ ಕೆಲವು ಸಾಧಕರು ಕೂಡ ಈ ವೇಳೆ ಹಾಜರಿದ್ದರು. ಇಂಥ ಅಪರೂಪದ ಅವಕಾಶ ಸಿಕ್ಕಿದ್ದಕ್ಕೆ ಅಯ್ಯೋ ಶ್ರದ್ಧಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ಪ್ರಧಾನಿಯನ್ನು ಭೇಟಿ ಆಗುವಂತಹ ಅವಕಾಶ ಎಲ್ಲರಿಗೂ ಸಿಗುವಂಥದ್ದಲ್ಲ. ಅದರ ಸಲುವಾಗಿ ಕರೆಬಂದಾಗ ಶ್ರದ್ಧಾ ಮೊದಲಿಗೆ ನಂಬಿಕೆ ಬರಲಿಲ್ಲ. ‘ಪಿಎಂ ಕಚೇರಿಯಿಂದ ಫೋನ್ ಬಂದಾಗ ನನಗೆ ಆಶ್ಚರ್ಯ ಆಯ್ತು. ಪ್ರ್ಯಾಂಕ್ ಕಾಲ್ ಇರಬಹುದಾ ಅಂತ ವಿಚಾರಿಸಿದೆ. ನಂತರ ಅವರು ಖಚಿತ ಪಡಿಸಿದರು. ಏನೆಲ್ಲಾ ಪ್ರೋಟೋಕಾಲ್ ಫಾಲೋ ಮಾಡಬೇಕು ಎಂಬುದನ್ನು ವಿವರಿಸಿದರು. ಆಗಲೂ ನಾನು ನಂಬಲಿಲ್ಲ. ಫೋನ್ ಇಟ್ಟಮೇಲೆ ಆ ನಂಬರ್ ಯಾವುದು ಅಂತ ಗೂಗಲ್ ಮಾಡಿದ ಬಳಿಕ ನಿಜ ಅಂತ ತಿಳಿಯಿತು’ ಎಂದಿದ್ದಾರೆ ಅಯ್ಯೋ ಶ್ರದ್ಧಾ.
ಇದನ್ನೂ ಓದಿ: Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್ ವೈಬ್ರೇಷನ್ ಬಂತು’; ನಿರ್ಮಾಪಕ ವಿಜಯ್ ಕಿರಗಂದೂರು
ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ‘ಅಯ್ಯೋ ಶ್ರದ್ಧಾ’ ಅಂತಲೇ ಫೇಮಸ್ ಆಗಿದ್ದಾರೆ. ಅವರ ವಿಡಿಯೋಗಳನ್ನು ಅನೇಕ ಸೆಲೆಬ್ರಿಟಿಗಳು ನೋಡುತ್ತಾರೆ. ರಾಜಭವನದಲ್ಲಿ ಸೇರಿದ್ದ ಗಣ್ಯರೆಲ್ಲರಿಗೂ ಶ್ರದ್ಧಾ ಅವರ ಬಗ್ಗೆ ತಿಳಿದಿತ್ತು. ‘ಜಾವಗಲ್ ಶ್ರೀನಾಥ್ ಅವರು ನನ್ನ ಹೆಸರು ಕರೆದು ಮಾತನಾಡಿಸಿದರು. ಅನಿಲ್ ಕುಂಬ್ಳೆ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಚೆನ್ನಾಗಿ ನನ್ನ ಜೊತೆ ಬೆರೆತರು. ಅವರೆಲ್ಲರೂ ನನಗಿಂತ ತುಂಬ ದೊಡ್ಡ ಸೆಲೆಬ್ರಿಟಿಗಳು ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ’ ಎಂದಿದ್ದಾರೆ ಶ್ರದ್ಧಾ.
ಇದನ್ನೂ ಓದಿ: Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್
‘ನನ್ನನ್ನು ಭೇಟಿ ಆದಾಗ ಮೋದಿ ಅವರು ಅಯ್ಯೋ ಅಂತ ಹೇಳಿದರು. ಅದು ನನಗೆ ಆಶ್ಚರ್ಯ ಆಯಿತು. ದಕ್ಷಿಣ ಭಾರತವನ್ನು ಸಿನಿಮಾಗಳಲ್ಲಿ ಎಷ್ಟು ಚೆನ್ನಾಗಿ ತೋರಿಸಲಾಗುತ್ತಿದೆ ಅಂತ ಮೋದಿ ಹೊಗಳಿದರು. ಪುನೀತ್ ರಾಜ್ಕುಮಾರ್ ಅವರ ಗಂಧದ ಗುಡಿ ಬಗ್ಗೆ ಮಾತನಾಡಿದರು. ದಿಸ್ ಈಸ್ ಇಂಡಿಯಾ ಅಂತ ಹೇಳಿದರು. ಎಲ್ಲರ ಬೆನ್ನು ತಟ್ಟಿದರು. ನನ್ನ ಕೆಲಸವನ್ನು ಗುರುತಿಸಿದರು. ನಮ್ಮೆಲ್ಲರಿಂದ ಸಲಹೆಗಳನ್ನ ಕೇಳಿದರು’ ಎಂದಿದ್ದಾರೆ ಶ್ರದ್ಧಾ.
Namashkar, yes, I met the Honorable Prime Minister of our Country. His first word to me was ‘Aiyyo!’.
I am not blinking, that’s my ‘O My Jod, he really said that, this is really happening!!!!’ look. Thank you @PMOIndia! pic.twitter.com/zBYexcy1I2— Aiyyo Shraddha (@AiyyoShraddha) February 13, 2023
ಅಯ್ಯೋ ಶ್ರದ್ಧಾ ಅವರು ಮಾಡಿದ ಅನೇಕ ವಿಡಿಯೋಗಳು ವೈರಲ್ ಆಗಿವೆ. ಅದನ್ನು ಮೋದಿ ಗಮನಿಸಿದ್ದಾರೆ. ‘ಕಾಮಿಡಿ ಕ್ಷೇತ್ರದಲ್ಲಿ ಹುಡುಗರು ಜಾಸ್ತಿ ಇದ್ದಾರೆ. ಅಂಥದ್ದಲ್ಲಿ ನೀವು ಕೂಡ ಗುರುತಿಸಿಕೊಂಡಿದ್ದೀರಿ’ ಎಂದು ಶ್ರದ್ಧಾ ಅವರನ್ನು ಮೋದಿ ಹೊಗಳಿದ್ದಾರೆ. ಅದರ ಜೊತೆಗೆ ಒಂದು ಸಲಹೆ ಕೂಡ ನೀಡಿದ್ದಾರೆ. ‘ಡಿಜಿಟಲ್ ಕಂಟೆಂಟ್ ಕ್ಷೇತ್ರದಲ್ಲಿ ಹುಡುಗಿಯರಿಗೆ ಹೆಚ್ಚು ಬೆಂಬಲ ನೀಡಿ’ ಎಂದು ಮೋದಿ ಸಲಹೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.