Pogaru Audio Release: ಇಂದು ಪೊಗರು ಆಡಿಯೋ ರಿಲೀಸ್​ಗೆ ಸಾಕ್ಷಿಯಾಗಲಿದೆ ದಾವಣಗೆರೆ

ಇತ್ತೀಚೆಗೆ ಇನ್​​​ಸ್ಟಾಗ್ರಾಂ ಲೈವ್​​ನಲ್ಲಿ ಕಾಣಿಸಿಕೊಂಡ ಧ್ರುವ ಸರ್ಜಾ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದರು. ಫೆಬ್ರವರಿ 19 ರಥಸಪ್ತಮಿ. ಈ ವಿಶೇಷ ದಿನದಂದು ಪೊಗರು ಚಿತ್ರ ರಿಲೀಸ್​ ಆಗುತ್ತಿದೆ ಎಂದಿದ್ದರು.

Pogaru Audio Release: ಇಂದು ಪೊಗರು ಆಡಿಯೋ ರಿಲೀಸ್​ಗೆ ಸಾಕ್ಷಿಯಾಗಲಿದೆ ದಾವಣಗೆರೆ
ನಟ ಧ್ರುವ ಸರ್ಜಾ
Edited By: ಆಯೇಷಾ ಬಾನು

Updated on: Feb 14, 2021 | 7:27 AM

ನಾನಾ ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಇದೇ ಫೆಬ್ರವರಿ 19ರಂದು ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೂ ಮೊದಲು ಸಿನಿಮಾ ತಂಡ ಅದ್ದೂರಿಯಾಗಿ ಆಡಿಯೋ ರಿಲೀಸ್​ ಮಾಡಿಕೊಳ್ಳುತ್ತಿದೆ.ದಾವಣಗೆರೆಯಲ್ಲಿ ಸಂಜೆ 7 ಗಂಟೆಯಿಂದ ‘ಪೊಗರು’ ಸಿನಿಮಾದ ಆಡಿಯೋ ಲಾಂಚ್​ ಸಮಾರಂಭ ಆರಂಭಗೊಳ್ಳಲಿದೆ. ಪೊಗರು ಆಡಿಯೋ ಲಾಂಚ್​ ಸಮಾರಂಭಕ್ಕೆ ಚಿತ್ರತಂಡ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ ನೀಡಿತ್ತು. ಹೀಗಾಗಿ, ಇಂದಿನ ಕಾರ್ಯಕ್ರಮದಲ್ಲಿ ಅವರು ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಇತ್ತೀಚೆಗೆ ಇನ್​​​ಸ್ಟಾಗ್ರಾಂ ಲೈವ್​​ನಲ್ಲಿ ಕಾಣಿಸಿಕೊಂಡ ಧ್ರುವ ಸರ್ಜಾ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದರು. ಫೆಬ್ರವರಿ 19 ರಥಸಪ್ತಮಿ. ಈ ವಿಶೇಷ ದಿನದಂದು ಪೊಗರು ಚಿತ್ರ ರಿಲೀಸ್​ ಆಗುತ್ತಿದೆ. ಸಿನಿಮಾವನ್ನು ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ವೀಕ್ಷಿಸಬೇಕು ಎಂದು ಧ್ರುವ ಮನವಿ ಮಾಡಿದ್ದರು. ಕೊರೊನಾ ಭಯ ನಿಧಾನವಾಗಿ ದೂರವಾಗುತ್ತಿದೆ. ಹೀಗಾಗಿ, ನಾವು ಚಿತ್ರಮಂದಿರದಲ್ಲಿ ಪೊಗರು ಸಿನಿಮಾ ರಿಲೀಸ್​ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಇದು ಕೇವಲ ಮಾಸ್​ ಸಿನಿಮಾ ಮಾತ್ರವಲ್ಲ, ಇದರಲ್ಲಿ ತುಂಬಾನೇ ಸೆಂಟಿಮೆಂಟ್​ ಕೂಡ ಇದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:  ‘ಪೊಗರು’ ಆಡಿಯೋ ಲಾಂಚ್​​​​ಗೆ ಬರಲಿದ್ದಾರೆ ಸಿದ್ದರಾಮಯ್ಯ; ದಾವಣಗೆರೆಯಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಪೊಗರು ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಸಿನಿಮಾದ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಧನಂಜಯ್​ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ನಂದ ಕಿಶೋರ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us