Pogaru Movie Release: ಸ್ಯಾಂಡಲ್ವುಡ್ನಲ್ಲಿ ಪೊಗರು ಚಿತ್ರ ಧೂಳೆಬ್ಬಿಸೋಕೆ ರೆಡಿಯಾಗಿದೆ. ಲಾಕ್ಡೌನ್ ಬಳಿಕ, ಥಿಯೇಟರ್ನಲ್ಲಿ 100 ಪರ್ಸೆಂಟ್ ಪರ್ಮಿಷನ್ ಸಿಕ್ಕ ಬಳಿಕ, ಸಿಲ್ವರ್ ಸ್ಕ್ರೀನ್ಗೆ ಅಪ್ಪಳಿಸೋಕೆ ರೆಡಿಯಾಗಿರೋ ಬಿಗ್ ಬಜೆಟ್ ಹಾಗೂ ತುಂಬಾ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಖರಾಬ್ ಲುಕ್.. ಖದರ್ ಮ್ಯಾನರಿಸಂ ಮೂಲಕ ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸೋಕೆ, ಜಬರ್ ದಸ್ತ್ ಎಂಟ್ರಿ ಕೊಡೋಕೆ ಪೊಗರು ರೆಡಿಯಾಗಿದೆ. ಇವತ್ತು ರಾಜ್ಯಾದ್ಯಂತ ಸಿಲ್ವರ್ ಸ್ಕ್ರೀನ್ಗೆ ಪೊಗರು ಸುನಾಮಿ ಅಪ್ಪಳಲಿಸಲಿದೆ.
400 ಥಿಯೇಟರ್, 600 ಸ್ಕ್ರೀನ್ನಲ್ಲಿ ಪೊಗರು ಆರ್ಭಟ
ಯೆಸ್, ಕೊರೊನಾ, ಲಾಕ್ಡೌನ್ ಅಂತಾ ರೋಸಿಹೋಗಿದ್ದ ಸ್ಯಾಂಡಲ್ವುಡ್ನಲ್ಲಿ ಇವತ್ತು ದೊಡ್ಡ ಸಂಚಲನವೇ ಸೃಷ್ಟಿಯಾದ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇಂದು ರಿಲೀಸ್ ಆಗಲಿದೆ. ಈಗಾಗಲೇ 100 ಪರ್ಸೆಂಟ್ ಸೀಟ್ಗೆ ಅವಕಾಶ ಕೊಟ್ರೂ, ಅಂತಾ ಹೇಳಿಕೊಳ್ಳೋ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಆದ್ರೆ, ಪೊಗರು ಚಿತ್ರದ ಎಂಟ್ರಿಯಿಂದ, ಇಡಿ ಸ್ಯಾಂಡಲ್ವುಡ್ಗೆ ಮತ್ತೆ ಕಳೆ ತುಂಬಲಿದೆ, ಖದರ್ ಸಿಗಲಿದೆ. ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ನಿರೀಕ್ಷೆ, ಹುಟ್ಟಿಸಿರೋ ಚಿತ್ರ ಪೊಗರು ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗಿನಲ್ಲೂ ತೆರೆ ಕಾಣ್ತಿದೆ. ಈಗಾಗಲೇ ಪೊಗರು ಚಿತ್ರದ ಸ್ವಾಗತಕ್ಕಾಗಿ ಅಭಿಮಾನಿಗಳು ಸಜ್ಜಾಗಿದ್ದಾರೆ.
ಅಭಿಮಾನಿಗಳಿಗಾಗಿ ಬೆಳಗಿನ ಜಾವದ ಸ್ಪೆಷಲ್ ಶೋ
ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗಾಗಿ, ಅರ್ಲಿ ಮಾರ್ನಿಂಗ್ ಶೋ ಏರ್ಪಡಿಸಲಾಗಿದ್ದು, ರಾಜ್ಯದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹಾಗೂ ಸುಮಾರು 600 ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಾಣಲಿದೆ. ಇನ್ನು ಬೆಂಗಳೂರಿನಲ್ಲೇ 33 ಅರ್ಲಿ ಮಾರ್ನಿಂಗ್ ಶೋಗಳನ್ನ ಅಭಿಮಾನಿಗಳಿಗಾಗಿಯೇ ಏರ್ಪಡಿಸಲಾಗಿದೆ.
ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಪೊಗರು ರಿಲೀಸ್ ಆಗ್ತಿದೆ. ತೆಲುಗಿನಲ್ಲಿ ಪೊಗರು ಮತ್ತು ತಮಿಳಿನಲ್ಲಿ ಸೆಮ್ಮ ತಿಮಿರು ಅನ್ನೋ ಟೈಟಲ್‌ನಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಎರಡೂ ಭಾಷೆಯಲ್ಲು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೊಗರು ರಿಲೀಸ್ ಆಗ್ತಿದೆ. ಧ್ರುವ ಸರ್ಜಾ ಆ್ಯಕ್ಷನ್ ಮತ್ತು ಚಿತ್ರದ ಮಾಸ್ ಫೀಲ್‌ಗೆ ಈಗಾಗಲೇ ತಮಿಳು, ತೆಲುಗು ಪ್ರೇಕ್ಷಕರು ಕಾಯ್ತಿದ್ದಾರೆ.
ಇನ್ನು ಥಿಯೇಟರ್ಗಳು ಕಂಪ್ಲೀಟ್ ಕ್ಲೀನಿಂಗ್ ನಡೀತಿದ್ದು, ಕೆಲವೆಡೆ ಪ್ರೇಕ್ಷರಿಗಾಗಿ ರೆಡ್ ಕಾರ್ಪೆಟ್ ಹಾಕಲಾಗಿದೆ. ಒಟ್ನಲ್ಲಿ, ಪೊಗರು ಈ ಮಟ್ಟಿಗೆ ಸದ್ದು ಮಾಡೋಕೆ ನಿರ್ದೇಶಕನ ಪಾತ್ರ ತುಂಬಾ ಮುಖ್ಯ. ಸಿನಿಮಾದ ಒಂದೊಂದು ಅಂಶವನ್ನೂ ಗಮನ ಸೆಳೆಯುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್. ಇನ್ನು ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಈಗಾಗಲೇ ಸಿನಿಪ್ರೇಮಿಗಳಿಗೆ ಇಷ್ಟವಾಗಿಬಿಟ್ಟಿದೆ. ಸಿನಿಮಾ ನೋಡಿದವ್ರು ಅದೇನ್ ಹೇಳ್ತೋರೋ ನೋಡ್ಬೇಕು.
ಸಿನಿಮಾಗಾಗಿ ಧ್ರುವ ಸರ್ಜಾ ಡೆಡಿಕೇಶನ್ ಹೇಗಿತ್ತು?
ಪೊಗರು ಔಟ್ ಆ್ಯಂಡ್ ಔಟ್ ಮಾಸ್ ಎಂಟರ್ಟೈನರ್ ಸಿನಿಮಾ ಆಗಿದ್ದು, ಧ್ರುವಸರ್ಜಾ ಕದಂಬ ಬಾಹುಗಳನ್ನು ಪ್ರದರ್ಶಿಸುತ್ತ ನಟೋರಿಯಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೊಗರು ಅನ್ನೋ ಟೈಟಲ್ನಲ್ಲೇ ಧಮ್ ಇದ್ದು, ಈ ಸಿನಿಮಾ ಧೂಳೆಬ್ಬಿಸುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಈಗಾಗಲೇ ಬಿಡುಗಡೆಯಾದ ಹಾಡು, ಡೈಲಾಗ್ ಟ್ರೇಲರ್ನಿಂದ ಗೊತ್ತಾಗುತ್ತಿದೆ. ಬಾಸು ಖರಾಬು ಹಾಡಿನಲ್ಲಿ ಧ್ರುವ ಸರ್ಜಾ ಜಬರ್ದಸ್ತ್ ಸ್ಟೆಪ್ ಹಾಕಿದ್ದು, ಈ ಹಾಡು ಯೂಟ್ಯೂಬ್ನಲ್ಲಿ ಭರ್ಜರಿ ವೀವ್ಸ್ ಪಡೆದಿದೆ. ಡೈಲಾಗ್ ಟ್ರೇಲರ್ಗೂ ಅಭಿಮಾನಿಗಳು ಸಿಕ್ಕಾಪಟೆ ಫಿದಾ ಆಗಿದ್ದಾರೆ.
ಇದನ್ನೂ ಓದಿ: Pogaru: ಫೆ.19ರಂದು 1200 ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ ಪೊಗರು
Published On - 7:00 am, Fri, 19 February 21