Soundarya Jagadeesh | ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ತಂಡದವರ ಮೇಲಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೌಂದರ್ಯ ಜಗದೀಶ್ ಮನೆ ಸೆಕ್ಯುರಿಟಿ ಗಾರ್ಡ್ನನ್ನು ಅರೆಸ್ಟ್ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಂದ ಬಾಲಾಜಿ ಎಂಬುವವನನ್ನು ಬಂಧಿಸಲಾಗಿದೆ. ಬಾಲಾಜಿ ಕೂಡ ಹಲ್ಲೆ ಮಾಡಿರುವ ಆರೋಪವಿರುವ ಕಾರಣ, ಆತನನ್ನು ಬಂಧಿಸಲಾಗಿದೆ. ಬಾಲಾಜಿಯನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಉಳಿದ ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡ ರಚನೆ ಮಾಡಲಾಗಿದೆ. ಅಕ್ಟೋಬರ್ 28ಕ್ಕೆ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾದ ರಜತ್ ಮನೆಗೆ ನುಗ್ಗಿ ಇಬ್ಬರು ಮಹಿಳಾ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ನೇಹಿತ್ ಹತ್ತು ಜನ ಬೌನ್ಸರ್ಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ಮಹಿಳೆಯರಿಗೆ ಬಟ್ಟೆ ಹರಿದು ಹೋಗುವಂತೆ ಹಾಗು ಗಾಯವಾಗಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ರಜತ್ ಮನೆ ಕೆಲಸದವರು ಮನೆ ಕಸ ಗುಡಿಸುತ್ತಿದ್ದಾಗ, ಧೂಳು ಬಿದ್ದಿದೆ ಎಂದು ಅರೋಪಿಸಿ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಲಾಗಿದೆ. ನಂತರ ರಜತ್ ಮನೆಯ ಒಳಗೆ ನುಗ್ಗಿ ಗಲಾಟೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಜೊತೆಗೆ ಈ ಹಿಂದೆಯೂ ಮೂರು ಬಾರಿ ಸ್ನೇಹಿತ್ ಮತ್ತು ತಂಡ ಗಲಾಟೆ ನಡೆಸಿತ್ತು. ಪ್ರಕರಣದ ಕುರಿಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸ್ನೇಹಿತ್ ಹಾಗೂ ತಂಡದವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354- ಮಹಿಳೆ ಗೌರವಕ್ಕೆ ಧಕ್ಕೆ, ಐಪಿಸಿ ಸೆಕ್ಷನ್ 323-ಕೈಯಿಂದ ಹಲ್ಲೆ ನಡೆಸುವುದು, ಐಪಿಸಿ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದರಿಕೆ ಸೇರಿ ವಿವಿಧ ಸೆಕ್ಷನ್ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ದೂರುದಾರ ರಜತ್ ಮಾತನಾಡಿರುವುದು:
ಇದನ್ನೂ ಓದಿ:
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪುಂಡಾಟ ಕೇಸ್ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್ ನಟ?
ಪೊಲೀಸರು ಬಂದಾಗ ಸೌಂದರ್ಯ ಜಗದೀಶ್ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು