ದರ್ಶನ್​ಗೆ ಬಿರಿಯಾನಿ ಕೋಡೋದೆಲ್ಲ ಮುಗೀತು.. ಈಗೇನಿದ್ರು ಅನ್ನ, ಸಾರು

| Updated By: ರಾಜೇಶ್ ದುಗ್ಗುಮನೆ

Updated on: Jun 13, 2024 | 10:14 AM

ದರ್ಶನ್ ಅವರು ಜೂನ್ 11ರಂದು ಅರೆಸ್ಟ್ ಆದರು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್​ಗೆ ಬಿರಿಯಾನಿ ನೀಡಲಾಗಿತ್ತು. ಜೈಲಿನ ಹೊರ ಭಾಗದಲ್ಲಿ ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಪೊಲೀಸರು ಸಂಕಷ್ಟ ಅನುಭವಿಸಿದ್ದಾರೆ.

ದರ್ಶನ್​ಗೆ ಬಿರಿಯಾನಿ ಕೋಡೋದೆಲ್ಲ ಮುಗೀತು.. ಈಗೇನಿದ್ರು ಅನ್ನ, ಸಾರು
ದರ್ಶನ್
Follow us on

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ (Darshan) ಹಾಗೂ ಗ್ಯಾಂಗ್​ನ ಅರೆಸ್ಟ್ ಮಾಡಲಾಗಿದೆ. ನಟ ದರ್ಶನ್ ಅವರ ಅಭಿಮಾನಿ ಬಳಗ ದೊಡ್ಡದು. ಅವರು ಸ್ಟಾರ್ ನಟ. ಆದರೆ, ಕೊಲೆ ಪ್ರಕರಣದಲ್ಲಿ ಅವರು ಸಿಕ್ಕಿ ಬಿದ್ದಿರೋದು ನಿಜಕ್ಕೂ ಶಾಕಿಂಗ್ ಎನಿಸಿದೆ. ಅವರಿಗೆ ವಿಐಪಿ ಟ್ರೀಟ್​ಮೆಂಟ್ ಸಿಕ್ಕಿದ್ದಕ್ಕೆ  ಪೊಲೀಸರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಲಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಹಾಗೂ ಗ್ಯಾಂಗ್​ಗೆ ಅನ್ನ-ಸಾರು ನೀಡಲಾಗಿದೆ.

ದರ್ಶನ್ ಅವರು ಜೂನ್ 11ರಂದು ಅರೆಸ್ಟ್ ಆದರು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್​ಗೆ ಬಿರಿಯಾನಿ ನೀಡಲಾಗಿತ್ತು. ಜೈಲಿನ ಹೊರ ಭಾಗದಲ್ಲಿ ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಪೊಲೀಸರು ಸಂಕಷ್ಟ ಅನುಭವಿಸಿದ್ದಾರೆ. ಈ ಘಟನೆಯಿಂದ ಅವರು ಎಚ್ಚೆತ್ತುಕೊಂಡಿದ್ದಾರೆ.

ಕೊಲೆ ಆರೋಪಿಗಳಿಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ ಎನ್ನುವ ಮಾತೂ ಇದೆ ಎನ್ನಲಾಗಿದೆ. ಬಿರಿಯಾನಿ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅನೇಕರು ಇದನ್ನು ಟೀಕಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ಹೋಗಿದ್ದರೆ ಅವರಿಗೆ ಬಿರಿಯಾನಿ ನೀಡುತ್ತಿದ್ದರೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’; ಜೈಲಿನಲ್ಲಿ ಮರುಗಿದ ಪವಿತ್ರಾ ಗೌಡ  

ಈಗ ಅನ್ನ-ಸಾರು

ದರ್ಶನ್ & ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಈ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲಾಗಿದೆ. ಪೊಲೀಸರು ಬುಧವಾರ (ಜೂನ್ 12) ರಾತ್ರಿ ಆರೋಪಿಗಳಿಗೆ ಅನ್ನ ಸಾರು ನೀಡಿದ್ದರು.  ಊಟದ ಬಳಿಕ ತಡರಾತ್ರಿವರೆಗೂ ಪೊಲೀಸರಿಂದ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದೆ. ಸಿಸಿಟಿವಿ ದೃಶ್ಯ, ಸಿಡಿಆರ್, ಟವರ್ ಡಂಪ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್​ಗಳನ್ನ ಮುಂದಿಟ್ಟುಕೊಂಡು ವಿಚಾರಣೆ ಮಾಡಲಾಗಿದೆ. ‘ನನಗೇನು‌‌ ಗೊತ್ತಿಲ್ಲ’ ಎಂದಷ್ಟೇ ದರ್ಶನ್​ ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:36 am, Thu, 13 June 24