ಪ್ರಜ್ವಲ್ ದೇವರಾಜ್‌ಗೆ ಆ್ಯಕ್ಷನ್​-ಕಟ್​ ಹೇಳಲಿರುವ ‘ಅಂಬಿ ನಿಂಗ್​ ವಯಸ್ಸಾಯ್ತೋ’ ನಿರ್ದೇಶಕ ಗುರುದತ್ ಗಾಣಿಗ

|

Updated on: Oct 15, 2023 | 1:08 PM

ಈವರೆಗೂ ಪ್ರಜ್ವಲ್ ದೇವರಾಜ್​ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಗುರುದತ್​ ಗಾಣಿಗ ನಿರ್ದೇಶನ ಮಾಡಿರುವ ಈ ಚಿತ್ರವು ಪ್ರಜ್ವಲ್​ ಅವರ ವೃತ್ತಿ ಜೀವನದಲ್ಲೇ ಡಿಫರೆಂಟ್​ ಆದಂತಹ ಸಿನಿಮಾ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈತನಕ ಕಾಣಿಸಿಕೊಳ್ಳದೇ ಇರುವಂತಹ ಪಾತ್ರಕ್ಕೆ ಪ್ರಜ್ವಲ್ ಬಣ್ಣ ಹಚ್ಚಲಿದ್ದಾರೆ.

ಪ್ರಜ್ವಲ್ ದೇವರಾಜ್‌ಗೆ ಆ್ಯಕ್ಷನ್​-ಕಟ್​ ಹೇಳಲಿರುವ ‘ಅಂಬಿ ನಿಂಗ್​ ವಯಸ್ಸಾಯ್ತೋ’ ನಿರ್ದೇಶಕ ಗುರುದತ್ ಗಾಣಿಗ
ಗುರುದತ್​ ಗಾಣಿಗ, ಪ್ರಜ್ವಲ್​ ದೇವರಾಜ್​
Follow us on

‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯದ ಹೊಸ ಚಿತ್ರದ ಪೋಸ್ಟರ್ ನವರಾತ್ರಿಯ ಮೊದಲ ದಿನ ಅನಾವರಣ ಆಗಿದೆ. ಈ ಸಿನಿಮಾದ ಬಗ್ಗೆ ಹೈಪ್​ ಕ್ರಿಯೇಟ್​ ಆಗಲು ಅನೇಕ ಕಾರಣಗಳಿವೆ. ಇದು ಪ್ರಜ್ವಲ್ ದೇವರಾಜ್​ ಅಭಿನಯಿಸುತ್ತಿರುವ 40ನೇ ಚಿತ್ರ ಎಂಬುದು ವಿಶೇಷ. ಸದ್ಯಕ್ಕಂತೂ ಪ್ರಜ್ವಲ್ ಅವರು ಸಖತ್​ ಬ್ಯುಸಿ ಆಗಿದ್ದಾರೆ. ಅವರ ಕೈಯಲ್ಲೀಗ ಲೋಹಿತ್​ ನಿರ್ದೇಶನದ ‘ಮಾಫಿಯಾ’ ಸೇರಿದಂತೆ ಇನ್ನೂ ಶೀರ್ಷಿಕೆ ಅಂತಿಮವಾಗದ ಎರಡು ಸಿನಿಮಾಗಳು (Prajwal Devaraj Movies) ಇವೆ. ಅದರ ನಡುವೆಯೇ 40ನೇ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆಕರ್ಷಕವಾದ ಪೋಸ್ಟರ್ ರಿಲೀಸ್​ ಮಾಡುವ ಮೂಲಕ ಸಿನಿಮಾ ಅನೌನ್ಸ್​ ಮಾಡಲಾಗಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್​ ಫಿಕ್ಸ್​ ಆಗಿಲ್ಲ. ಗುರುದತ್​ ಗಾಣಿಗ (Gurudatha Ganiga) ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

ಈವರೆಗೂ ಪ್ರಜ್ವಲ್ ದೇವರಾಜ್​ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಗುರುದತ್​ ಗಾಣಿಗ ನಿರ್ದೇಶನ ಮಾಡಿರುವ ಈ ಚಿತ್ರವು ಪ್ರಜ್ವಲ್​ ಅವರ ವೃತ್ತಿ ಜೀವನದಲ್ಲೇ ಡಿಫರೆಂಟ್​ ಆದಂತಹ ಸಿನಿಮಾ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈತನಕ ಕಾಣಿಸಿಕೊಳ್ಳದೇ ಇರುವಂತಹ ಪಾತ್ರಕ್ಕೆ ಪ್ರಜ್ವಲ್ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಅವರು ಈಗ ಪ್ರಜ್ವಲ್​ ದೇವರಾಜ್​ ನಟನೆಯ 40ನೇ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

ಗುರುದತ್ ಗಾಣಿಗ ಅವರು ನಿರ್ದೇಶನದ 2ನೇ ಚಿತ್ರ ಇದು. ಬಹುತಾರಾಗಣವಿದ್ದ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಸಿನಿಮಾ 2018ರಲ್ಲೇ ರಿಲೀಸ್​ ಆಗಿತ್ತು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕರೂ ಕೂಡ ತಕ್ಷಣದಲ್ಲಿ ಗುರುದತ್ ಅವರು ಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಚೊಚ್ಚಲ ಚಿತ್ರದಲ್ಲೇ ಸುಹಾಸಿನಿ, ಅಂಬರೀಷ್​, ಕಿಚ್ಚ ಸುದೀಪ್ ಅವರಂತಹ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಅವರು ಒಂದು ಗ್ಯಾಪ್​ನ ಬಳಿಕ ಮತ್ತೆ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ.

ಇದನ್ನೂ ಓದಿ: Prajwal Devaraj: ಹೇಗಿತ್ತು ನೋಡಿ ಪ್ರಜ್ವಲ್ ದೇವರಾಜ್ ಬರ್ತ್​ಡೇ ಸಂಭ್ರಮ

ಕುತೂಹಲ ಮೂಡಿಸಿದ ಪೋಸ್ಟರ್​:

ಈ ಚಿತ್ರದ ಪೋಸ್ಟರ್ ನೋಡಿದಾಗ ಇದು ಕಂಬಳ ಕುರಿತಾದ ಸಿನಿಮಾ ಎಂಬುದು ತಿಳಿಯುತ್ತದೆ. ಕರಾವಳಿ ಭಾಗದ ಕಹಾನಿಯನ್ನು ಈ ಸಿನಿಮಾ ತೆರೆದಿಡಲಿದೆ. ಈ ಚಿತ್ರವನ್ನು ‘ವಿಕೆ ಫಿಲ್ಮ್ಸ್’ ಮತ್ತು ‘ಗುರುದತ ಗಾಣಿಗ ಫಿಲ್ಮ್ಸ್​’ ಸಂಸ್ಥೆಗಳ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಗುರುದತ್​ ಅವರು ಡೈರೆಕ್ಷನ್​ ಜೊತೆ ಪ್ರೊಡಕ್ಷನ್ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಚಿನ್ ಬಸ್ರೂರು ಅವರ ಸಂಗೀತ ನಿರ್ದೇಶನ, ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣದಲ್ಲಿ ಈ ಸಿನಿಮಾ ಮೂಡಿಬರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.