ರಂಗಕರ್ಮಿಗಳಿಗಾಗಿ ‘ನಿರ್ದಿಗಂತ’ ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?

Prakash Raj: ಪ್ರಕಾಶ್ ರೈ

ರಂಗಕರ್ಮಿಗಳಿಗಾಗಿ 'ನಿರ್ದಿಗಂತ' ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?
ಪ್ರಕಾಶ್ ರೈ ನಿರ್ದಿಗಂತ
Follow us
ಮಂಜುನಾಥ ಸಿ.
|

Updated on:Jun 17, 2023 | 8:38 PM

ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಸಿನಿಮಾಗಲ್ಲಿ ನಟಿಸುತ್ತಿರುವ ಜೊತೆಗೆ ತಮ್ಮ ಮೂಲವಾದ ರಂಗಭೂಮಿಗೆ (Theater) ಪ್ರಕಾಶ್ ರೈ ಮರಳಿದ್ದಾರೆ. ಹಾಗೆಂದು ಅವರು ನಾಟಕದಲ್ಲಿ (Drama) ನಟಿಸುತ್ತಿಲ್ಲ ಬದಲಿಗೆ ನಾಟಕಕರ್ಮಿಗಳಿಗಾಗಿ ಸುಂದರವಾದ, ಸಕಲ ಸೌಕರ್ಯ ಸಜ್ಜಿತ ವೇದಿಕೆಯನ್ನು ಒದಗಿಸಿದ್ದಾರೆ. ಶ್ರೀರಂಗಪಟ್ಟಣದ ಸಮೀಪ ಪ್ರಶಾಂತ ಸ್ಥಳವೊಂದರಲ್ಲಿ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ ರಂಗ ಚಟುವಟಿಕೆ ನೆಲೆಯನ್ನು ನಿರ್ಮಿಸಿದ್ದಾರೆ.

ಶ್ರೀರಂಗಪಟ್ಟಣದ ಕೆ ಶೆಟ್ಟಿಹಳ್ಳಿ ಬಳಿ ತಣ್ಣಗೆ ಹರಿಯುತ್ತಿರುವ ಲೋಕಪಾವನಿ ನದಿ ದಡದಲ್ಲಿ ತೋಟ ಮಾಡಿರುವ ಪ್ರಕಾಶ್ ರೈ ಅಲ್ಲಿಯೇ ವಿಶಿಷ್ಟ, ಕ್ರಿಯಾಶೀಲ ವಿನ್ಯಾಸದ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ (ಕಾವುಗೂಡು) ಸ್ಥಾಪಿಸಿದ್ದಾರೆ. ಇಲ್ಲಿ ನಾಟಕ ಪ್ರದರ್ಶನ, ತಾಮೀಲು, ನಾಟಕ ರಚನೆ, ರಂಗಕರ್ಮಿಗಳ ನಿರ್ಮಾಣ ಹೀಗೆ ಹಲವು ರಂಗಚಟುವಟಿಕೆಗಳು ನಡೆಯಲಿವೆ.

ಮೂವತ್ತು ಜನ ಅಲ್ಲಿಯೇ ಉಳಿದುಕೊಂಡು ರಂಗಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಕಲ ವ್ಯವಸ್ಥೆಯನ್ನೂ ಪ್ರಕಾಶ್ ರೈ ಮಾಡಿದ್ದು, ”ನಾನು ನಾಟಕ ಮಾಡಲು ನಿರ್ಧಿಸಿದಾಗ ಗೆಳೆಯರೊಬ್ಬರು ಎಚ್ಚರಿಸಿದರು. ನಾನೂ ಯೋಚಿಸಿ ಹೌದಲ್ಲವೆ ನಾನು ನಾಟಕ ಮಾಡಿದರೆ ಪ್ರಕಾಶ್ ರೈ ಮಾಡಿರುವ ನಾಟಕ ಎಂದು ಜನ ಬರುತ್ತಾರೆ. ಆದರೆ ಜನ ಕೇವಲ ನಾಟಕ ನೋಡಲು ಬರಬೇಕು, ಅದನ್ನು ಯಾರಾದರೂ ಮಾಡಿರಲಿ ಎನಿಸಿ, ಹೊಸಬರಿಗೆ ತಮ್ಮ ನಾಟಕ ಕಲೆಯ ಅಭಿವ್ಯಕ್ತಿಗಾಗಿ ನಿರ್ದಿಗಂತ ಮಾಡಿದೆ ಎಂದಿದ್ದಾರೆ.

ರಾಜ್ಯದ ಸಕ್ರಿಯ ರಂಗ ತಂಡಗಳ ಅಂಕಿ-ಅಂಶವನ್ನು ನಿರ್ದಿಂಗತ ಸಂಗ್ರಹಿಸಿದೆ. ಹಣಕಾಸಿನ ತೊಂದರೆ ಇರುವ ರಂಗತಂಡಗಳಿಗೆ ಅಗತ್ಯ ಸಹಕಾರ ನೀಡಲಿದೆ ನಿರ್ದಿಗಂತ. ಯಾವುದೇ ರಂಗತಂಡ ಇಲ್ಲಿ ಬಂದು ತಾಲೀಮು ಮಾಡಬಹುದು. ನಾಟಕಗಳನ್ನು ಪ್ರದರ್ಶಿಸಬಹುದು, ನಿರ್ದಿಗಂತ ನಾಟಕೋತ್ಸವ ಆಯೋಜಿಸಬಹುದು. ಇಲ್ಲಿನ ನಾಟಕಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ:ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ; ನಟನ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಮಂದಿ

ಪ್ರಸ್ತುತ ಯುದ್ಧ ಮತ್ತು ಕೋಮು ವಿಷಯ ಆರಿಸಿಕೊಂಡು ಕಾರ್ಯಾಗಾರ ನಡೆಯುತ್ತಿದ್ದು ಶ್ರೀಪಾದ ಭಟ್ ಅವರು, ಹೊಸ ಪಠ್ಯಗಳ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮಂಟೋನ ಕತೆ, ಕುವೆಂಪು ಅವರು ಸ್ಮಶಾನ ಕುರುಕ್ಷೇತ್ರದ ಆಯ್ದ ಭಾಗ, ಕೃಷ್ಣಮೂರ್ತಿ ಹನೂರು ಕಾದಂಬರಿಯ ಕೆಲ ಪುಟಗಳು, ರವೀಂದ್ರನಾಥ ಟ್ಯಾಗೋರರ ಡಿಸ್​ಟ್ರಕ್ಷನ್ ಕತೆ, ಬ್ರಾಂಡೋಲ್​ರ ವಾರ್ ಗಳನ್ನು ಪಠ್ಯಗಳನ್ನಾಗಿ ಆರಿಸಿಕೊಳ್ಳಲಾಗಿದ್ದು ಅವುಗಳೊಟ್ಟಿಗೆ ಕನ್ನಡದ ಕೆಲವು ಕವನಗಳನ್ನು ಬಳಸಿ ಯುದ್ಧ ಮತ್ತು ಕೋಮು ರಂಗಪಯಣ ಮಾಡಲಾಗುತ್ತಿದೆ.

ಪ್ರಸ್ತುತ ಹದಿನೈದು ಯುವ ಆಸಕ್ತಿಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು, ರಂಗ ಚಟುವಟಿಕೆಗಳ ಭಾಗವಾಗಿದ್ದಾರೆ. ನಿರ್ದಿಗಂತವು ಬೇರೆ ಕಲೆಗಳಿಗೂ ಅವಕಾಶ ಮಾಡಿಕೊಡುತ್ತಿದ್ದು ಆಡಿಯೋ ಬುಕ್ ನಿರ್ಮಾಣದ ಆಶಯ ಇದೆ. ನಿರ್ದಿಗಂತ ಬಹುಮಾಧ್ಯಮದ ಅಭಿವ್ಯಕ್ತಿ ಸ್ಥಳ ಎಂದಿದ್ದಾರೆ ಸಂಸ್ಥಾಪಕ ಪ್ರಕಾಶ್ ರೈ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Sat, 17 June 23

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ