ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ (Prasad Bidapa) ಅವರ ಪುತ್ರ, ಅವಿವಾ ಬಿಡಪ ಸಹೋದರ ಆ್ಯಡಂ ಅವರು ದುರ್ವರ್ತನೆ ತೋರಿದ್ದಾರೆ. ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದು ಮಾತ್ರವಲ್ಲದೆ, ಎಲ್ಲರ ಎದುರು ದುರ್ವರ್ತನೆ ತೋರಿದ್ದಾರೆ. ಪೊಲೀಸರ ಎದುರು ಕೂಗಾಟ ನಡೆಸಿದ್ದಾರೆ. ಎಫ್ಐಆರ್ ದಾಖಲು ಮಾಡಿ ಅವರನ್ನು ಬಂಧಿಸಲಾಗಿದೆ. ಅಂದು ಏನಾಯಿತು ಎಂಬುದರ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಆ್ಯಡಂ ಅವರು ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾರೆ. ಮದ್ಯ ಸೇವನೆಯಿಂದ ಅವರ ಮಾತು, ವರ್ತನೆಯ ಮೇಲೆ ನಿಯಂತ್ರಣ ಇರಲ್ಲಿಲ್ಲ. ಪೊಲೀಸರಿಗೂ ಅವರನ್ನು ನಿಯಂತ್ರಿಸಲು ಹೆಚ್ಚು ಸಮಯ ಹಿಡಿದಿದೆ. ಅಕ್ಟೋಬರ್ 25 ರಾತ್ರಿ ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆ್ಯಡಂ ರೈಲ್ ವ್ಹೀಲ್ ಫ್ಯಾಕ್ಟರಿ ಬಳಿ ರ‍್ಯಾಶ್ ಆಗಿ ಕಾರು ಚಾಲನೆ ಮಾಡಿದ್ದಾರೆ. ಆ್ಯಡಂ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದಾಗ ಹಿಂಬದಿ ವಾಹನ ಸವಾರ ಹಾರನ್ ಮಾಡಿದ್ದಾರೆ. ವಾಹನ ಅಡ್ಡಗಟ್ಟಿ ಸವಾರನಿಗೆ ಆ್ಯಡಂ ಬಿದ್ದಪ್ಪ ಬೆದರಿಕೆ ಹಾಕಿದ್ದಾರೆ. ಕೂಡಲೇ ವಾಹನ ಸವಾರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಜೊತೆಯೂ ಆ್ಡಂ ದುರ್ವರ್ತನೆ ತೋರಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರಿಗೂ ಕಷ್ಟ ಆಗಿದೆ.
ಇದನ್ನೂ ಓದಿ: ತಲಕಾವೇರಿಯಲ್ಲಿ ಅಭಿಷೇಕ್ ಅಂಬರೀಷ್-ಅವಿವಾ ದಂಪತಿಯಿಂದ ವಿಶೇಷ ಪೂಜೆ
ವಾಹನ ಸವಾರನ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸ್ಟೇಷನ್ ಬೇಲ್ ಮೇಲೆ ಆ್ಯಡಂ ಬಿದ್ದಪ್ಪನನ್ನ ಬಿಡುಗಡೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Fri, 27 October 23