ಪ್ರಶಾಂತ್​ ನೀಲ್​ಗೆ ಅಪ್ಪು ಬಗ್ಗೆ ಇದ್ದ ತಪ್ಪು ಕಲ್ಪನೆ ಬದಲಾಯಿಸಿತ್ತು ಆ ಒಂದು ಸಿನಿಮಾ

| Updated By: ರಾಜೇಶ್ ದುಗ್ಗುಮನೆ

Updated on: Apr 19, 2022 | 2:44 PM

ಪ್ರಶಾಂತ್ ನೀಲ್ ಅವರನ್ನು ಆ್ಯಂಕರ್​ ಅನುಶ್ರೀ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಪ್ರಶಾಂತ್​ ನೀಲ್. ಅಪ್ಪು ಬಗ್ಗೆಯೂ ಇಲ್ಲಿ ಚರ್ಚೆ ಆಗಿದೆ.

ಪ್ರಶಾಂತ್​ ನೀಲ್​ಗೆ ಅಪ್ಪು ಬಗ್ಗೆ ಇದ್ದ ತಪ್ಪು ಕಲ್ಪನೆ ಬದಲಾಯಿಸಿತ್ತು ಆ ಒಂದು ಸಿನಿಮಾ
ಪುನೀತ್-ಪ್ರಶಾಂತ್ ನೀಲ್
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಒಂದು ರೀತಿಯಲ್ಲಿ ಅಜಾತಶತ್ರು ಆಗಿದ್ದರು. ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಜನಸಾಮಾನ್ಯರಿಂದ ಸೆಲೆಬ್ರಿಟಿವರೆಗೆ ಪುನೀತ್​ಗೆ ಫ್ಯಾನ್ಸ್ ಆಗಿದ್ದರು. ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ದೊಡ್ಡ ನಷ್ಟ. ಪುನೀತ್​ ಆಪ್ತರ ಪಟ್ಟಿಯಲ್ಲಿ ಪ್ರಶಾಂತ್ ನೀಲ್ (Prashanth Neel) ಅವರಿಗೂ ಸ್ಥಾನ ಸಿಕ್ಕಿತ್ತು. ಅಚ್ಚರಿ ಎಂದರೆ ಆರಂಭದಲ್ಲಿ ಪುನೀತ್ ಬಗ್ಗೆ ಒಂದಷ್ಟು ತಪ್ಪು ಕಲ್ಪನೆಗಳನ್ನು ಹೊಂದಿದ್ದರು ಪ್ರಶಾಂತ್ ನೀಲ್. ಒಂದು ಸಿನಿಮಾದಿಂದ ಈ ಕಲ್ಪನೆಗಳೆಲ್ಲ ಅಳಿಸಿ ಹೋದವು. ಪ್ರಶಾಂತ್ ನೀಲ್ ಅವರು ಪುನೀತ್​ಗೆ ಫ್ಯಾನ್​ ಆಗಿ ಬಿಟ್ಟರು.

ಪ್ರಶಾಂತ್ ನೀಲ್ ಅವರನ್ನು ಆ್ಯಂಕರ್​ ಅನುಶ್ರೀ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಪ್ರಶಾಂತ್​ ನೀಲ್. ಅಪ್ಪು ಬಗ್ಗೆಯೂ ಇಲ್ಲಿ ಚರ್ಚೆ ಆಗಿದೆ. ಆರಂಭದಲ್ಲಿ ಪುನೀತ್ ಬಗ್ಗೆ ಪ್ರಶಾಂತ್​ಗೆ ತಪ್ಪು ಕಲ್ಪನೆಗಳಿದ್ದವು. ಈ ಬಗ್ಗೆ ಮಾತನಾಡಿರುವ ಪ್ರಶಾಂತ್, ‘ನಮ್ಮ ಹೋಟೆಲ್ ಬಳಿ ಇರುವ ಗ್ರೌಂಡ್​ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಶನಿವಾರ ಸಾಕಷ್ಟು ಮ್ಯಾಚ್ ಸೋತಿದ್ದೆವು. ಹೀಗಾಗಿ, ಭಾನುವಾರ ಮ್ಯಾಚ್ ಆಡಿ ಗೆಲ್ಲಲೇಬೇಕು ಎನ್ನುವ ಹುಮ್ಮಸ್ಸಲ್ಲಿ ಬಂದೆವು. ಆದರೆ, ಅಲ್ಲಿ ಪುನೀತ್ ಅವರ ‘ಅಪ್ಪು’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ನನಗೆ ಸಿಟ್ಟೇ ಬಂದೋಯ್ತು. ಅವರೇಕೆ ಹೊರಗೆ ಹೋಗಿ ಶೂಟ್ ಮಾಡಬಾರದು ಎಂದು ಸಿಟ್ಟಾದೆ’ ಎಂದು ಘಟನೆ ವಿವರಿಸಿದ್ದಾರೆ ಪ್ರಶಾಂತ್.

‘3 ದಿನ ಶೂಟಿಂಗ್ ನಡೆದಿತ್ತು. ನನಗೆ ಹೇಟ್​ ಫೀಲಿಂಗ್ಸ್​ ಹುಟ್ಟಿಕೊಂಡಿತ್ತು. ‘ಅಪ್ಪು’ ಸಿನಿಮಾ ತೆರೆಗೆ ಬಂದು 50 ದಿನವಾದರೂ ನಾನು ಸಿನಿಮಾ ನೋಡಿರಲಿಲ್ಲ. ಆ ದ್ವೇಷ ಹಾಗೆಯೇ ಇತ್ತು. ಶಿವಮೊಗ್ಗಕ್ಕೆ ಮದುವೆ ಕಾರ್ಯದ ನಿಮಿತ್ತ ತೆರಳಿದ್ದೆವು. ಈ ವೇಳೆ ಎಲ್ಲರೂ ‘ಅಪ್ಪು’ ಸಿನಿಮಾ ನೋಡೋಣ ಎಂದರು. ಹೋಗಿ ಸಿನಿಮಾ ವೀಕ್ಷಿಸಿದೆವು. ನಾನು ಅಪ್ಪು ಅವರ ಫ್ಯಾನ್​ ಆಗಿಬಿಟ್ಟೆ. ಅವರ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಬಾರದಿತ್ತು ಎಂದು ಈಗಲೂ ಅನಿಸುತ್ತದೆ. ಏಕೆಂದರೆ, ನಾನು ಈಗ ಅವರನ್ನು ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಪ್ರಶಾಂತ್​ ನೀಲ್.

ಹೊಂಬಾಳೆ ಫಿಲ್ಮ್ಸ್​ ಅಡಿಯಲ್ಲಿ ಪ್ರಶಾಂತ್ ನೀಲ್ ಹಾಗೂ ಪುನೀತ್ ರಾಜ್​​ಕುಮಾರ್ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈ ಚಿತ್ರಕ್ಕೆ ‘ಆಹ್ವಾನ’ ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿತ್ತು. ಅಪ್ಪು ಈ ಕಥೆ ಕೇಳಿ ತುಂಬಾನೇ ಇಷ್ಟಪಟ್ಟಿದ್ದರು ಎಂಬುದನ್ನೂ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಪುನೀತ್ ಜತೆ ಪ್ರಶಾಂತ್​ ನೀಲ್ ‘ಆಹ್ವಾನ’ ಚಿತ್ರ ಮಾಡಬೇಕಿತ್ತು; ಸಿನಿಮಾ ಟೇಕ್​ ಆಫ್ ಆಗದಿರಲು ಕಾರಣ ಇಲ್ಲಿದೆ

‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ

 

Published On - 2:44 pm, Tue, 19 April 22