Prashanth Neel: ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್​; ನಿರ್ಧಾರಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?

ಪ್ರಶಾಂತ್ ನೀಲ್ ಅವರು ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್​ಗೆ ಹೋಗಿದ್ದಕ್ಕೆ ಪ್ರಶಾಂತ್​ ನೀಲ್ ಅವರನ್ನು ಟೀಕೆ ಮಾಡಲಾಗಿತ್ತು. ಯಶ್ ಬರ್ತ್​ಡೇ (ಜನವರಿ 8) ದಿನವೂ ಪ್ರಶಾಂತ್ ಅವರನ್ನು ಟ್ರೋಲ್ ಮಾಡಲಾಗಿತ್ತು.

Prashanth Neel: ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್​; ನಿರ್ಧಾರಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?
ಪ್ರಶಾಂತ್ ನೀಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 10, 2023 | 12:50 PM

ಸೆಲೆಬ್ರಿಟಿಗಳು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ತಮ್ಮ ಮುಂದಿನ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಅವರು ಮಾಡುವ ಪೋಸ್ಟ್ ಸಾಕಷ್ಟು ವಿವಾದ ಸೃಷ್ಟಿಸುತ್ತದೆ. ಇತ್ತೀಚೆಗೆ ಪ್ರಶಾಂತ್ ನೀಲ್ (Prashanth Neel) ಮಾಡಿದ್ದ ಟ್ವೀಟ್ ಕೂಡ ವಿವಾದ ಸೃಷ್ಟಿ ಮಾಡಿತ್ತು. ಈ ವಿವಾದದ ಬೆನ್ನಲ್ಲೇ ಪ್ರಶಾಂತ್ ನೀಲ್ ಅವರ ಟ್ವಿಟರ್ ಖಾತೆ ಕ್ಲೋಸ್ ಆಗಿದೆ.

ಪ್ರಶಾಂತ್ ನೀಲ್ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ‘ಕೆಜಿಎಫ್’ ಸರಣಿಯ ಸಿನಿಮಾಗಳು. ಪ್ರಶಾಂತ್ ನೀಲ್ ಕೆಲಸ ನೋಡಿ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಸದ್ಯ ಪ್ರಶಾಂತ್ ನೀಲ್ ಅವರು ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್​ಗೆ ಹೋಗಿದ್ದಕ್ಕೆ ಪ್ರಶಾಂತ್​ ನೀಲ್ ಅವರನ್ನು ಟೀಕೆ ಮಾಡಲಾಗಿತ್ತು. ಯಶ್ ಬರ್ತ್​ಡೇ (ಜನವರಿ 8) ದಿನವೂ ಪ್ರಶಾಂತ್ ಅವರನ್ನು ಟ್ರೋಲ್ ಮಾಡಲಾಗಿತ್ತು.

‘ಕೆಜಿಎಫ್ 2’ ಚಿತ್ರದಲ್ಲಿ ಬರುವ ಉರ್ದು ಡೈಲಾಗ್ ಒಂದನ್ನು  ಬರೆದು ಯಶ್​ಗೆ ಪ್ರಶಾಂತ್ ನೀಲ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಈ ಟ್ವೀಟ್​​ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಪ್ರಶಾಂತ್ ನೀಲ್​ಗೆ ಕನ್ನಡದಲ್ಲಿ ಟ್ವೀಟ್ ಮಾಡಿ ಎಂದು ಬುದ್ಧಿವಾದ ಹೇಳಿದ್ದರು. ಇದು ಪ್ರಶಾಂತ್​ ನೀಲ್​ಗೆ ಬೇಸರ ತರಿಸಿತೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ
Image
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Image
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Image
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Image
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ಇದನ್ನೂ ಓದಿ:  ‘ಸಲಾರ್’ ಚಿತ್ರದ ಸೆಟ್​​ಗೆ ಹೊಸ ನಿಯಮ ಜಾರಿಗೆ ತಂದ ಪ್ರಶಾಂತ್ ನೀಲ್​; ಚಿಂತೆಗೊಳಗಾಯ್ತು ತಾಂತ್ರಿಕ ವರ್ಗ

ಪ್ರಶಾಂತ್ ನೀಲ್ ಅವರ ಟ್ವಿಟರ್ ಖಾತೆಗೆ ಎಂಟ್ರಿ ಕೊಟ್ಟರೆ ‘ಈ ಖಾತೆ ಇಲ್ಲ’ ಎಂಬ ನೋಟಿಫಿಕೇಷನ್ ತೋರಿಸಲಾಗುತ್ತಿದೆ. ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಉತ್ತಮವಾಗಿ ಮೂಡಿಬರಬೇಕು ಎಂದರೆ ಸಾಕಷ್ಟು ಬದ್ಧತೆ ಬೇಕು. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವಿಚಾರಗಳು ಏಕಾಗ್ರತೆಗೆ ಭಂಗ ತರುತ್ತವೆ. ಪ್ರಶಾಂತ್ ನೀಲ್ ಕೂಡ ಹೀಗೆಯೇ ಆಲೋಚಿಸಿ, ಸ್ವಲ್ಪ ದಿನ ಸೋಶಿಯಲ್ ಮೀಡಿಯಾದಿಂದ ದೂರ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ