ಸ್ಯಾಂಡಲ್ವುಡ್ ಹೀರೋ ಪ್ರವೀಣ್ ತೇಜ್ (Praveen Tej) ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಅವರು ನಟಿಸಿರುವ ‘ಜಿಗರ್’ ಸಿನಿಮಾ (Jigar Kannada Movie) ಬಿಡುಗಡೆಗೆ ಸಜ್ಜಾಗಿದೆ. ಪೂಜಾ ವಸಂತಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸೂರಿ ಕುಂದರ್ ನಿರ್ದೇಶನ ಈ ಸಿನಿಮಾಗಿದೆ. ಇತ್ತೀಚೆಗೆ ‘ಜಿಗರ್’ ಸಿನಿಮಾದ ಟ್ರೇಲರ್ (Jigar Kannada Movie Trailer) ಬಿಡುಗಡೆ ಮಾಡಲಾಯಿತು. ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟ್ರೇಲರ್ ಅನಾವರಣ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು. ಜುಲೈ 5ರಂದು ‘ಜಿಗರ್’ ಸಿನಿಮಾ ತೆರೆಕಾಣಲಿದೆ. ಈಗ ಟ್ರೇಲರ್ ಮೂಲಕ ಕೌತುಕ ಮೂಡಿಸಲಾಗಿದೆ.
‘ಜಿಗರ್’ ಟ್ರೇಲರ್ ರಿಲೀಸ್ ಮಾಡಿದ ಬಳಿಕ ಚಿತ್ರತಂಡದವರು ಕೆಲವು ಮಾಹಿತಿ ಹಂಚಿಕೊಂಡರು. ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಅವರು ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಲವ್ಸ್ಟೋರಿ ಸಿನಿಮಾಗಳಿಗೆ ಸೀಮಿತ ಆಗಿದ್ದ ನನ್ನನ್ನು ನಿರ್ದೇಶಕ ಸೂರಿ ಕುಂದರ್ ಅವರು ಈ ಸಿನಿಮಾದ ಮೂಲಕ ಆ್ಯಕ್ಷನ್ ಹೀರೋ ಮಾಡಿದ್ದಾರೆ’ ಎಂದಿದ್ದಾರೆ ಪ್ರವೀಣ್ ತೇಜ್.
‘ಈ ಸಿನಿಮಾದಲ್ಲಿ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಅವನು ಉತ್ಸಾಹಿ ಯುವಕ. ಫಿಶ್ ಟೆಂಡರ್ನಲ್ಲಿ ಆತ ಭಾಗಿಯಾಗುತ್ತಾನೆ. ಅಲ್ಲಿಂದ ಭೂಗತ ಜಗತ್ತಿಗೂ ಕಾಲಿಡುತ್ತಾನೆ. ಅಲ್ಲಿ ಕೆಲವು ಸಂಘಗಳು ಇರುತ್ತದೆ. ಸಂಘಗಳ ನಡುವೆ ಸಂಘರ್ಷ ಕೂಡ ಇರುತ್ತದೆ. ಇದು ಸಿನಿಮಾ ಪ್ರಮುಖ ಕಥಾಹಂದರವಾಗಿದೆ. ಇದರ ಜೊತೆಗೆ ಲವ್, ಆ್ಯಕ್ಷನ್, ಕಾಮಿಡಿಯೂ ನಮ್ಮ ಸಿನಿಮಾದಲ್ಲಿದೆ’ ಎಂದು ಪ್ರವೀಣ್ ತೇಜ್ ತಿಳಿಸಿದ್ದಾರೆ.
ನಿರ್ದೇಶಕ ಸೂರಿ ಕುಂದರ್ ಅವರಿಗೆ ಚಿತ್ರರಂಗದಲ್ಲಿ ಅನೇಕ ವರ್ಷಗಳ ಅನುಭವ ಇದೆ. ‘ಅಂದಾಜು 15 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ಖ್ಯಾತ ಡೈರೆಕ್ಟರ್ಗಳ ಜತೆ ಕೆಲಸ ಮಾಡಿದ್ದೇನೆ. ಈಗ ಸ್ವತಂತ್ರ ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ಜಿಗರ್ ಎಂದರೆ ಎರಡು ಗುಂಡಿಗೆ ಇರುವವನು ಅಥವಾ ಯಾವುದಕ್ಕೂ ಅಂಜದವನು ಅಂತ ಅರ್ಥ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ರಿಲೀಸ್ ಹೊಸ್ತಿಲಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟ್ರೇಲರ್; ಸಖತ್ ಮೇಕಿಂಗ್
‘ಜಿಗರ್’ ಸಿನಿಮಾದಲ್ಲಿ ನಾಯಕಿಯಾಗಿ ವಿಜಯಶ್ರೀ ಕಲಬುರಗಿ ಅವರು ನಟಿಸಿದ್ದಾರೆ. ನಟ ಯಶ್ ಶೆಟ್ಟಿ ಅವರು ವಿಲನ್ ಆಗಿ ಅಬ್ಬರಿಸಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಈ ಸಿನಿಮಾಗೆ ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ. ಶಿವಸೇನ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಉಡುಪಿ, ಮಲ್ಪೆ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.