
ರಕ್ಷಿತಾ ಪ್ರೇಮ್ (Rakshita Prem) ಸಹೋದರ ರಾಣಾ (Rana) ‘ಏಕ್ ಲವ್ ಯಾ’ (Ek Love Ya) ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ (Sandalwood) ಪದಾರ್ಪಣೆ ಮಾಡುತ್ತಿದ್ದಾರೆ. ಪ್ರೇಮ್ ನಿರ್ದೇಶನದ ಈ ಚಿತ್ರ ಈಗಾಗಲೇ ಹಾಡುಗಳಿಂದ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ವಾಸ್ತವವಾಗಿ ಇಂದು (ಮಂಗಳವಾರ, ಜ.4) ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಮೈಸೂರಿನ ಡಿಆರ್ಸಿ ಮಾಲ್ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದೂ ತಿಳಿಸಲಾಗಿತ್ತು. ಆದ್ದರಿಂದ ಅಭಿಮಾನಿಗಳು ಚಿತ್ರದ ಟ್ರೈಲರ್ಗೆ ಕಾತರದಿಂದ ಕಾಯುತ್ತಿದ್ದರು. ಆದರೆ ಅಭಿಮಾನಿಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. ಇದನ್ನು ಸ್ವತಃ ನಿರ್ದೇಶಕ ಪ್ರೇಮ್ (Prem) ಖಚಿತಪಡಿಸಿದ್ದು, ಟ್ರೈಲರ್ ಇಂದು ಬಿಡುಗಡೆಯಾಗುತ್ತಿಲ್ಲ ಎಂದಿದ್ದಾರೆ.
ಟ್ರೈಲರ್ ಏಕೆ ಬಿಡುಗಡೆಯಾಗುತ್ತಿಲ್ಲ?
ನಿರ್ದೇಶಕ ಪ್ರೇಮ್ ಚಿತ್ರದ ಟ್ರೈಲರ್ ಬಿಡುಗಡೆ ಮುಂದೂಡಲ್ಪಟ್ಟಿರುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಅವರು ಹೇಳಿದ್ದಾರೆ. ‘‘ಜನವರಿ 4ರಂದು ತೆರೆಕಾಣಬೇಕಿದ್ದ ಏಕ್ ಲವ್ ಯಾ ಟ್ರೈಲರ್ ಬಿಡುಗಡೆಯನ್ನು ತಾಂತ್ರಿಕ ದೋಷದಿಂದ ಮುಂದೂಡಲಾಗಿದೆ. ನಿಮ್ಮ ಪ್ರೀತಿ, ನಿರೀಕ್ಷೆ ಹೀಗೆ ಇರಲಿ’’ ಎಂದು ಚಿತ್ರತಂಡ ಬರೆದುಕೊಂಡಿದೆ. ಟ್ರೈಲರ್ ಹಾಗೂ ಚಿತ್ರದ 6ನೇ ಹಾಡು ಸದ್ಯದಲ್ಲೇ ಎಲ್ಲರ ಮುಂದೆ ಬರಲಿದೆ ಎಂದು ಪ್ರೇಮ್ ಭರವಸೆಯನ್ನೂ ನೀಡಿದ್ದಾರೆ.
ಈ ಕುರಿತು ಪ್ರೇಮ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ಜನವರಿ 21ರಂದು ‘ಏಕ್ ಲವ್ ಯಾ’ ತೆರೆಗೆ:
ಈಗಾಗಲೇ ‘ಏಕ್ ಲವ್ ಯಾ’ ಚಿತ್ರವನ್ನು ಜನವರಿ 21ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಹೊಸ ಪೋಸ್ಟರ್ನಲ್ಲೂ ಇದನ್ನು ಖಚಿತಪಡಿಸಲಾಗಿದೆ. ‘ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾ ನಾಯಕನಾಗಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಹಾಗೂ ರೀಷ್ಮಾ ನಾಣಯ್ಯ ಮುಖ್ಯಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮನಗೆದ್ದಿದ್ದು, ನಿರೀಕ್ಷೆ ಹುಟ್ಟಿಸಿವೆ.
ಇದನ್ನೂ ಓದಿ:
‘ನಾನು ಸಿಗರೇಟ್ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ
ರಜನಿಕಾಂತ್, ಪ್ರಭಾಸ್ ಸಿನಿಮಾ ಮಾಡೋಕೆ ಕರೆದಿದ್ರು, ನಾನು ಹೋಗಿಲ್ಲ; ಜೋಗಿ ಪ್ರೇಮ್