AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುವಾರ ಬಂಪರ್ ಲಾಟರಿ ಹೊಡೆದ ‘ಪ್ರೇಮದ ಊರಲಿ’ ಚಿತ್ರ; ಕಲೆಕ್ಷನ್ ನೋಡಿ ಎಲ್ಲರೂ ದಂಗು

ಸ್ಯಾಂಡಲ್‌ವುಡ್‌ನಲ್ಲಿ ಸಣ್ಣ ಬಜೆಟ್‌ನ 'ಪ್ರೇಮದ ಊರಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದ್ದು, ಮೊದಲ ವಾರದಲ್ಲೇ ₹7.92 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಗುರುವಾರ ಒಂದೇ ದಿನ ₹2.55 ಕೋಟಿ ಬಾಚಿರುವ ಈ ಸಿನಿಮಾ, ಗಾಂಧಿ ಜಯಂತಿ ರಜೆ ಹಾಗೂ ಎರಡನೇ ವೀಕೆಂಡ್‌ನಲ್ಲಿ ಮತ್ತಷ್ಟು ಬಂಪರ್ ಗಳಿಕೆ ಮಾಡುವ ಸಾಧ್ಯತೆಯಿದೆ.

ಗುರುವಾರ ಬಂಪರ್ ಲಾಟರಿ ಹೊಡೆದ ‘ಪ್ರೇಮದ ಊರಲಿ’ ಚಿತ್ರ; ಕಲೆಕ್ಷನ್ ನೋಡಿ ಎಲ್ಲರೂ ದಂಗು
ಪ್ರೇಮದ ಊರಲಿImage Credit source: Premada Oorali
ರಾಜೇಶ್ ದುಗ್ಗುಮನೆ
|

Updated on: Oct 02, 2026 | 7:39 AM

Share

ಮುಖ್ಯಾಂಶಗಳು

  • ಮೊದಲ ದಿನ 60 ಶೋ, 7ನೇ ದಿನಕ್ಕೆ 486 ಶೋ
  • 'ಪ್ರೇಮದ ಊರಲಿ' ಚಿತ್ರದ ಅಭೂತಪೂರ್ವ ಯಶಸ್ಸು
  • ವಾರದ ದಿನದಲ್ಲೇ ₹2.55 ಕೋಟಿ ಗಳಿಕೆ

ಸ್ಯಾಂಡಲ್‌ವುಡ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಣ್ಣ ಬಜೆಟ್ ಸಿನಿಮಾ ಒಂದು ಕಮಾಲ್ ಮಾಡುತ್ತಿದೆ. ಅದೇ ‘ಪ್ರೇಮದ ಊರಲಿ’ ಚಿತ್ರ.ಈ ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಸಿಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಪ್ರದರ್ಶನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾದ ಗಳಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರವು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಹಾದಿಯಲ್ಲಿ ಮುನ್ನುಗ್ಗುತ್ತಿದೆ.

ಚಿತ್ರವು ಮೊದಲ ವಾರದ ಅಂತ್ಯಕ್ಕೆ ಒಟ್ಟು 7.92 ಕೋಟಿ ರೂಪಾಯಿ ಗ್ರಾಸ್ ಹಾಗೂ 7.07 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಮೊದಲ ದಿನ ಕೇವಲ 60 ಪ್ರದರ್ಶನಗಳಿಂದ ಪ್ರಾರಂಭವಾದ ಈ ಪಯಣ, 7ನೇ ದಿನದ ವೇಳೆಗೆ 486 ಪ್ರದರ್ಶನಗಳಿಗೆ ತಲುಪಿರುವುದು ಚಿತ್ರಕ್ಕಿರುವ ಜನಪ್ರಿಯತೆಯನ್ನು ಎತ್ತಿಹಿಡಿದಿದೆ. ಒಟ್ಟಾರೆಯಾಗಿ ಮೊದಲ ವಾರದಲ್ಲಿ 1,703 ಶೋಗಳ ಮೂಲಕ ಈ ಬೃಹತ್ ಮೊತ್ತವನ್ನು ಚಿತ್ರ ಗಳಿಸಿದೆ.

ವಿಶೇಷವೆಂದರೆ, ವಾರದ ದಿನಗಳಲ್ಲೂ ‘ಪ್ರೇಮದ ಊರಲಿ’ ಚಿತ್ರಕ್ಕೆ ಪ್ರೇಕ್ಷಕರ ಹರಿವು ಕಡಿಮೆಯಾಗಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ಮೊದಲ ಶುಕ್ರವಾರ 0.13 ಕೋಟಿ ರೂಪಾಯಿಯಿಂದ ಶುರುವಾದ ಗಳಿಕೆ, ವಾರದ ಕೊನೆಯ ದಿನ ಅಂದರೆ ಗುರುವಾರ ಒಂದೇ ದಿನದಲ್ಲೇ 2.55 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಸಿನಿಮಾದ ಈ ಅಚ್ಚರಿಯ ಗಳಿಕೆಗೆ ಪ್ರೇಕ್ಷಕರ ಅತ್ಯುತ್ತಮ ಚಿತ್ರಮಂದಿರ ಭರ್ತಿ ಪ್ರಮಾಣವೇ ಸಾಕ್ಷಿ. ವಾರದ ಆರಂಭದಲ್ಲಿ ಶೇ. 28ರಷ್ಟಿದ್ದ ಅಕ್ಯುಪೆನ್ಸಿ, ವಾರದ ದಿನಗಳಲ್ಲಿ ಬರೋಬ್ಬರಿ ಶೇ. 58ಕ್ಕೆ ಜಿಗಿದಿದೆ. ಕುಟುಂಬ ಸಮೇತರಾಗಿ ಜನರು ಥಿಯೇಟರ್‌ಗೆ ಹರಿದುಬರುತ್ತಿರುವುದು ಈ ಕಲೆಕ್ಷನ್ ಹಠಾತ್ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ ಗೆಲುವಿನ ಬಗ್ಗೆ ನಟ ಶ್ರೀ ರಾಮ್ ಮಾತು

ಮೊದಲ ವಾರದಲ್ಲೇ ಬರೋಬ್ಬರಿ 7.92 ಕೋಟಿ ರೂಪಾಯಿ ಬಾಚಿರುವ ‘ಪ್ರೇಮದ ಊರಲಿ’ ಚಿತ್ರಕ್ಕೆ ಮುಂಬರುವ ಎರಡನೇ ವೀಕೆಂಡ್ ಅತ್ಯಂತ ನಿರ್ಣಾಯಕ ಹಾಗೂ ವರದಾನವಾಗಲಿದೆ. ವಾರದ ದಿನದಲ್ಲೇ ಎರಡೂವರೆ ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾ, ಇಂದು (ಅಕ್ಟೋಬರ್ 2). ಶನಿವಾರ ಮತ್ತು ಭಾನುವಾರಗಳ ರಜಾ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿ ಹೊಸ ಮೈಲಿಗಲ್ಲು ತಲುಪುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ