‘ಜೈಲರ್ 2’ ಅಬ್ಬರದ ನಡುವೆಯೂ ಮುಂದುವರಿದ ‘ಪ್ರೇಮದ ಊರಲಿ’ ಸಿನಿಮಾ ಅಬ್ಬರ

ಜೈಲರ್ ಎರಡು ಸಿನಿಮಾ ಬಿಡುಗಡೆಯಿಂದ ಶೋಗಳ ಸಂಖ್ಯೆ ಕಡಿಮೆಯಾಗಿದ್ದರೂ 'ಪ್ರೇಮದ ಊರಲಿ' ಚಿತ್ರ ತನ್ನ ಓಟ ನಿಲ್ಲಿಸಿಲ್ಲ. 22ನೇ ದಿನವಾದ ನಿನ್ನೆ ರೂ. 3 ಕೋಟಿ ಗಳಿಸುವ ಮೂಲಕ ವಿಶ್ವಾದ್ಯಂತ ಒಟ್ಟು ರೂ. 81.61 ಕೋಟಿ ಬಾಚಿಕೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ತನ್ನ ಭರ್ಜರಿ ಯಶಸ್ಸನ್ನು ಯಶಸ್ವಿಯಾಗಿ ಮುಂದುವರಿಸಿದೆ.

‘ಜೈಲರ್ 2’ ಅಬ್ಬರದ ನಡುವೆಯೂ ಮುಂದುವರಿದ ಪ್ರೇಮದ ಊರಲಿ ಸಿನಿಮಾ ಅಬ್ಬರ
ಪ್ರೇಮದ ಊರು

Updated on: Oct 17, 2026 | 11:44 AM

ಮುಖ್ಯಾಂಶಗಳು

  • ಎಲ್ಲೆಡೆ ‘ಜೈಲರ್ 2’ ಬಿರುಗಾಳಿ
  • ಆದರೂ ಗೆಲುವಿನ ಓಟ ಮುಂದುವರಿಸಿದ 'ಪ್ರೇಮದ ಊರಲಿ’
  • ಶೋಗಳು ಕಡಿಮೆಯಾದರೂ ಕಮ್ಮಿಯಾಗದ ಕ್ರೇಜ್ 

ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ತೆರೆಗೆ ಬಂದ ಬಳಿಕ ‘ಪ್ರೇಮದ ಊರಲ್ಲಿ’ ಚಿತ್ರದ ಪ್ರದರ್ಶನಗಳ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ. ಆದಾಗ್ಯೂ ಬಾಕ್ಸ್‌ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಯಶಸ್ವಿ ಪ್ರದರ್ಶನವನ್ನು ಮುಂದುವರಿಸಿದೆ. ಬಿಡುಗಡೆಯಾಗಿ 22 ದಿನಗಳನ್ನು ಕಳೆದಿದ್ದರೂ ಸಹ ಈ ಚಿತ್ರದ ಗರ್ಜನೆ ಇನ್ನೂ ಕಡಿಮೆಯಾಗಿಲ್ಲ.

ಆದಾಗ್ಯೂ, ಪ್ರೇಕ್ಷಕರ ಬೇಡಿಕೆ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಈ ಸಿನಿಮಾ ತನ್ನ ಓಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಅಕ್ಟೋಬರ್ 16ರಂದು ಅಂದರೆ ನಾಲ್ಕನೇ ಶುಕ್ರವಾರದಂದು (22ನೇ ದಿನ) ಈ ಚಿತ್ರವು ದೇಶಾದ್ಯಂತ ಒಟ್ಟು 861 ಪ್ರದರ್ಶನಗಳ ಮೂಲಕ ಭರ್ಜರಿ ರೂ. 3 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಬಾಚಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆಯು 68.37 ಕೋಟಿ ರೂಪಾಯಿಗೆ ತಲುಪಿದ್ದರೆ, ಒಟ್ಟು ಗ್ರಾಸ್ ಕಲೆಕ್ಷನ್ ರೂ. 79.86 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಈ ಚಿತ್ರವು ತನ್ನ ಪರಾಕ್ರಮ ಮುಂದುವರಿಸಿದೆ. ಅಲ್ಲಿ ಈ ಸಿನಿಮಾ 1.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ದೇಶ ಹಾಗೂ ವಿದೇಶಿ ಮಾರುಕಟ್ಟೆಯ ಒಟ್ಟು ಗಳಿಕೆಯನ್ನು ಸೇರಿಸಿದರೆ, ‘ಪ್ರೇಮದ ಊರಲಿ’ ಚಿತ್ರದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 81.61 ಕೋಟಿಗೆ ತಲುಪಿದೆ.

ಇದನ್ನೂ ಓದಿ: ‘ಜೈಲರ್ 2’ ವಿಮರ್ಶೆ: ಲಾಜಿಕ್ ಇಲ್ಲದೆಯೂ ರಜನಿಕಾಂತ್ ಅಭಿಮಾನಿಗಳಿಗೆ ಖುಷಿಕೊಡುವ ಸಿನಿಮಾ

ಬಿಗ್ ಬಜೆಟ್ ಸಿನಿಮಾಗಳ ಸ್ಪರ್ಧೆ ಮತ್ತು ಶೋಗಳ ಸಂಖ್ಯೆ ಕಡಿತಗೊಂಡ ನಡುವೆಯೂ ಪ್ರೇಕ್ಷಕರು ಈ ಚಿತ್ರಕ್ಕೆ ತೋರುತ್ತಿರುವ ಬೆಂಬಲ ನಿಜಕ್ಕೂ ಗಮನಾರ್ಹವಾಗಿದೆ. ಯಾವ ಹಂತದಲ್ಲೂ ತನ್ನ ಪ್ರದರ್ಶನವನ್ನು ನಿಲ್ಲಿಸದೆ ಬಾಕ್ಸ್ ಆಫೀಸಿನಲ್ಲಿ ಗಟ್ಟಿಯಾಗಿ ನೆಲೆನಿಂತಿರುವ ಈ ಸಿನಿಮಾ, ನೂರು ಕೋಟಿ ರೂಪಾಯಿ ತಲುಪೋ ಸಾಧ್ಯತೆ ಇದೆ.

‘ಪ್ರೇಮದ ಊರಲಿ’ ಸಿನಿಮಾಗೆ ಮನೋಜ್ ಕುಮಾರ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us