‘ಪ್ರೇಮದ ಊರಲಿ’ ಚಿತ್ರತಂಡವ ಭೇಟಿಯಾಗಿ ಅಭಿನಂದಿಸಿದ ಯಶ್-ರಾಧಿಕಾ: ಚಿತ್ರಗಳು

Updated on: Oct 16, 2026 | 1:43 PM

‘ಪ್ರೇಮದ ಊರಲಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕನ್ನಡದ ಕೆಲ ಸ್ಟಾರ್ ನಟ-ನಟಿಯರು ಸಹ ಈ ಸಿನಿಮಾದ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು, ಇದೀಗ ನಟ ಯಶ್ ಸಹ ಸಿನಿಮಾ ತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ‘ರಾಮಾಯಣ’ ಸಿನಿಮಾ ಟ್ರೈಲರ್ ಲಾಂಚ್​​ಗೂ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅವರುಗಳು ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

1 / 7
‘ಪ್ರೇಮದ ಊರಲಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕನ್ನಡದ ಕೆಲ ಸ್ಟಾರ್ ನಟ-ನಟಿಯರು ಸಹ ಈ ಸಿನಿಮಾದ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು, ಇದೀಗ ನಟ ಯಶ್ ಸಹ ಸಿನಿಮಾ ತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ.

‘ಪ್ರೇಮದ ಊರಲಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕನ್ನಡದ ಕೆಲ ಸ್ಟಾರ್ ನಟ-ನಟಿಯರು ಸಹ ಈ ಸಿನಿಮಾದ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು, ಇದೀಗ ನಟ ಯಶ್ ಸಹ ಸಿನಿಮಾ ತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ.

2 / 7

‘ರಾಮಾಯಣ’ ಸಿನಿಮಾ ಟ್ರೈಲರ್ ಲಾಂಚ್​​ಗೂ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅವರುಗಳು ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

3 / 7

‘ಪ್ರೇಮದ ಊರಲಿ’ ಸಿನಿಮಾದ ನಾಯಕ, ನಾಯಕಿ, ನಿರ್ದೇಶಕ ಮನೋಜ್, ನಿರ್ಮಾಪಕ ಇನ್ನೂ ಕೆಲವರು ಯಶ್ ಹಾಗೂ ರಾಧಿಕಾ ಅವರನ್ನು ಭೇಟಿ ಆಗಿದ್ದಾರೆ.

4 / 7

ರಮಿಕಾ, ಶ್ರೀರಾಮ್, ಮನೋಜ್ ಇನ್ನೂ ಹಲವರು ಪ್ರತ್ಯೇಕವಾಗಿ ಯಶ್ ಹಾಗೂ ರಾಧಿಕಾ ಅವರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಪೂಣಚ್ಚ ಈ ಸಂದರ್ಭದಲ್ಲಿ ಗೈರಾಗಿದ್ದರು.

5 / 7

ಯಶ್ ಅವರು ‘ರಾಮಾಯಣ’ ಸಿನಿಮಾದ ಟ್ರೈಲರ್ ಲಾಂಚ್ ಸಂದರ್ಭದಲ್ಲಿಯೂ ಸಹ ಮಾತನಾಡುತ್ತಾ ‘ಪ್ರೇಮದ ಊರಲಿ’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದರು.

6 / 7

‘ಈಗಷ್ಟೆ ‘ಪ್ರೇಮದ ಊರಲಿ’ ಸಿನಿಮಾ ತಂಡವನ್ನು ಭೇಟಿ ಮಾಡಿದೆ, ಅವರ ಕಣ್ಣಲ್ಲಿ ಯಶಸ್ಸಿನ ಖುಷಿಯನ್ನು ನಾನು ನೋಡಿದೆ’ ಎಂದರು ನಟ ಯಶ್.

7 / 7

‘ಪ್ರೇಮದ ಊರಲಿ’ ಅಂಥಹಾ ಸಿನಿಮಾಗಳು ಬರಬೇಕು, ಹೊಸ ನಟ, ನಿರ್ದೇಶಕ, ನಟಿಯರುಗಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರಬೇಕು ಎಂದು ಯಶ್ ಹೇಳಿದರು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us