ಹೊಸ ಹೊಸ ಪ್ರಯೋಗದ ಚಿತ್ರಗಳಲ್ಲಿ ನಟಿಸಿ ಜನರನ್ನು ರಂಜಿಸುವ ನಟಿ ಪ್ರಿಯಾಂಕ ಉಪೇಂದ್ರ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದ ಮೂಲಕ ಎಲ್ಲರನ್ನು ಕುತೂಹಲಕ್ಕೆ ದೂಡಲು ಬರುತ್ತಿದ್ದಾರೆ. ಪ್ರಿಯಾಂಕ ನಟನೆಯ1980 Teaser ರಿಲೀಸ್ ಆಗಿದೆ. ರಾಜ್ ಕಿರಣ್ ಜೆ. ನಿರ್ದೇಶನದ 1980 ಚಿತ್ರದಲ್ಲಿ ನಟಿ ಪ್ರಿಯಾಂಕ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದ್ದು ಜನರನ್ನು ಆಸನದ ತುದಿಯಲ್ಲಿ ಕೂರುವಂತೆ ಮಾಡುತ್ತದೆ ಎಂದರೆ ತಪ್ಪಾಗಲಾರದು. ಕೊರೊನಾ ಲಾಕ್ಡೌನ್ ನಂತರ ಪ್ರಿಯಾಂಕ ಉಪೇಂದ್ರ ಅವರಿಗೆ ದೊರೆತ ಮೊದಲ ಸಿನಿಮಾ ಇದಾಗಿದೆ.
ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣವಾಗಿರುವ 1980 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾ ರಾಜ್ ಕಿರಣ್ ಜೆ. ನಿರ್ದೇಶನದ ಕನ್ನಡದ ಮೊದಲ ಚಿತ್ರವಾಗಿದೆ. ಹಾಗಾಗಿ ಸಹಜವಾಗಿಯೇ ಆತಂಕ, ನಿರೀಕ್ಷೆ ಹೆಚ್ಚಿದೆ. ಇನ್ನು ಈ ಸಿನಿಮಾ ಶೀರ್ಷಿಕೆ ಹೇಳುವಂತೆ 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ ಸಿನಿಮಾ ಎನ್ನಬಹುದು.
ಚಿತ್ರದಲ್ಲಿ ಶರಣ್ಯ ಶೆಟ್ಟಿ, ಶ್ರೀಧರ್, ಅರವಿಂದ್ ರಾವ್, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಕಿಶೋರ್ ಕುಮಾರ್, ವಿಶಾಲ್ ಧೀರಜ್, ಧನುಷ್ ಗೌಡ, ಮಾಸ್ಟರ್ ಕೃತಿಕಾ, ಭಾನು ಪ್ರಿಯಾ ಇದ್ದಾರೆ. ಚಿತ್ರಕ್ಕೆ ಜೀವ ಆಂಟೋನಿ ಛಾಯಾಗ್ರಹಣ, ಚಿಂತನ್ ವಿಕಾಸ್ ಅವರ ಸಂಗೀತವಿದೆ. ಹಾಗೂ ನರೇಂದ್ರ ಬಾಬು ಅವರು ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಾಳಿ ಬ್ಯೂಟಿ ಪ್ರಿಯಾಂಕಾ ಉಪೇಂದ್ರ ಹೊಸ ಚಿತ್ರಕ್ಕಾಗಿ ಈ ಕಸರತ್ತು