AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈಟರ್ ವಿವೇಕ್ ಕುಟುಂಬಕ್ಕೆ ₹5 ಲಕ್ಷ ಚೆಕ್ ನೀಡಿದ ಗುರು ದೇಶಪಾಂಡೆ; ವಿವೇಕ್ ತಮ್ಮನ ಶಿಕ್ಷಣ ವೆಚ್ಚ ಭರಿಸುವುದಾಗಿ ಭರವಸೆ

‘ಲವ್ ಯೂ ರಚ್ಚು’ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಚಿತ್ರೀಕರಣದ ಸಂದರ್ಭದಲ್ಲಿ ಮೃತತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ 5 ಲಕ್ಷ ರೂಗಳ ಚೆಕ್ ಹಸ್ತಾಂತರಿಸಿದ್ದಾರೆ. ಇನ್ನೂ 5 ಲಕ್ಷ ರೂಗಳನ್ನು ಚಿತ್ರ ಬಿಡುಗಡೆಯಾದ ನಂತರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಫೈಟರ್ ವಿವೇಕ್ ಕುಟುಂಬಕ್ಕೆ ₹5 ಲಕ್ಷ ಚೆಕ್ ನೀಡಿದ ಗುರು ದೇಶಪಾಂಡೆ; ವಿವೇಕ್ ತಮ್ಮನ ಶಿಕ್ಷಣ ವೆಚ್ಚ ಭರಿಸುವುದಾಗಿ ಭರವಸೆ
ವಿವೇಕ್ ಕುಟುಂಬಕ್ಕೆ ಚೆಕ್ ಹಸ್ತಾಂತರಿಸುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ
TV9 Web
| Edited By: |

Updated on:Sep 01, 2021 | 4:39 PM

Share

‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರು ದೇಶಪಾಂಡೆ 5 ಲಕ್ಷ ರೂಗಳ ಚೆಕ್ ಹಸ್ತಾಂತರಿಸಿದ್ದಾರೆ. ಚಿತ್ರ ರಿಲೀಸ್ ಆದ ಬಳಿಕ ಇನ್ನೂ ₹5 ಲಕ್ಷ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ವಿವೇಕ್ ತಮ್ಮನ ಶಿಕ್ಷಣಕ್ಕೂ ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾವು ನಾಪತ್ತೆಯಾದ ವರದಿಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ‘‘ಪ್ರಕರಣದಿಂದಾಗಿ ನಾನು ತಲೆಮರೆಸಿಕೊಂಡು ಓಡಿಹೋಗಿರಲಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿದ್ದೇನೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ.

ಫೈಟರ್ ವಿವೇಕ್ ತಾಯಿ ಹೇಳಿದ್ದೇನು? ‘‘ಈಗ ನೀವು ಏನು ಬೇಕಾದರೂ ಹೇಳಿ ಹೋಗಿಬಿಡುತ್ತೀರಿ. ನಂತರ ನಾವು ಫೋನ್ ಮಾಡಿದರೂ ರಿಸೀವ್ ಮಾಡಲ್ಲ, ನಮ್ಮ ಕಷ್ಟವನ್ನು ಕೇಳೋರು ಯಾರೂ ಇಲ್ಲ’’ ಎಂದು ವಿವೇಕ್ ತಾಯಿ ಉಮಾ ದುಃಖ ತೋಡಿಕೊಂಡಿದ್ದಾರೆ. ನಿರ್ಮಾಪಕ ಗುರು ದೇಶಪಾಂಡೆ ಭೇಟಿಯ ನಂತರ ಅವರು ಹೇಳಿಕೆ ನೀಡಿದ್ದಾರೆ. ಚಿತ್ರೀಕರಣದ ವೇಳೆ ನನ್ನ ಮಗ ಮೃತಪಟ್ಟಿದ್ದು ಅನ್ಯಾಯ ಎಂದಿರುವ ಅವರು, ‘‘ಈಗ ನನ್ನ ಚಿಕ್ಕ ಮಗನನ್ನು ಓದಿಸುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದಾರೆ, ನೋಡಬೇಕು’’ ಎಂದು ಹೇಳಿದ್ದಾರೆ.

ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ‘ಲವ್​​ ಯೂ ರಚ್ಚು’ ಚಿತ್ರದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ರೋಪ್​ ಎಳೆಯುವಾಗ ಫೈಟರ್​ ವಿವೇಕ್​ ಮೃತಪಟ್ಟಿದ್ದರು.​ ವಿದ್ಯುತ್​ ತಂತಿಗೆ ರೋಪ್ ಸ್ಪರ್ಶಿಸಿದ್ದು ಇದಕ್ಕೆ ಕಾರಣವಾಗಿತ್ತು. ಹೀಗಾಗಿ, ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಚಿತ್ರದ ನಾಯಕ ನಟ ಅಜೇಯ್ ರಾವ್ ಮತ್ತು ನಾಯಕಿ ರಚಿತಾ ರಾಮ್ ಬಿಡದಿ ಸ್ಟೇಷನ್ ನಲ್ಲಿ ಹೇಳಿಕೆ ದಾಖಲಿಸಿದ್ದಾರೆ. ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ಅಜಯ್​ ರಾವ್​ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದು, ರಚಿತಾ ರಾಮ್ ಚಿತ್ರದ ನಾಯಕಿಯಾಗಿದ್ದಾರೆ. ಶಂಕರ್​ ರಾಜ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಫೈಟರ್ ವಿವೇಕ್ ಮನೆಗೆ ತೆರಳಿ ಸಾಂತ್ವನ ಹೇಳಿದ ‘ಲವ್ ಯೂ ರಚ್ಚು’ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ

ಬರ್ತ್​ಡೇ ಸಂಭ್ರಮದಲ್ಲಿ ಅದ್ವಿತಿ ಶೆಟ್ಟಿ; ಇಲ್ಲಿವೆ ಕರಾವಳಿ ಬೆಡಗಿ ಫೋಟೋಗಳು

(Producer Guru Deshpande gives 5 Lakh Check to Fighter Vivek family)

Published On - 4:36 pm, Wed, 1 September 21